Saturday, September 23, 2023
Homeಇದೀಗ ಬಂದ ಸುದ್ದಿನಟ ಉಪೇಂದ್ರಗೆ ಬಿಗ್ ರಿಲೀಫ್, FIRಗೆ ಹೈಕೋರ್ಟ್ ತಡೆ

ನಟ ಉಪೇಂದ್ರಗೆ ಬಿಗ್ ರಿಲೀಫ್, FIRಗೆ ಹೈಕೋರ್ಟ್ ತಡೆ

- Advertisement -

ಬೆಂಗಳೂರು,ಆ.15-ಉಪೇಂದ್ರಗೆ ರಿಲೀಫ್ ನಟನ ವಿರುದ್ಧ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್‍ಗೆ ಹೈಕೋರ್ಟ್ ತಡೆ ನೀಡಿದೆ.ಉಪೇಂದ್ರ(ಮದನ್ ಕುಮಾರ್) ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು.

ಇದರ ನಡುವೆ ಉಪೇಂದ್ರ ಅವರು ಹೈಕೋರ್ಟ್ ಮೆಟ್ಟಿಲು ಏರಿದ್ದರು ಇದನ್ನು ಮಾನ್ಯ ಮಾಡಿದ ಏಕ ಸದಸ್ಯ ನ್ಯಾಯ ಪೀಠ ಎಫ್‍ಐಆರ್ ಹಾಗು ವಿಚಾರಣೆಗೆ ತಡೆ ನೀಡಿದೆ. ಸಾಮಾಜಿಕ ತಾಣದಲ್ಲಿ ದಲ್ಲಿ ಜಾತಿ ನಿಂದನೆ ಪದ ಬಳಿಸಿ ಕೊನೆಗೆ ಕ್ಷೆಮೆ ಕೇಳಿದರೂ ಪ್ರಕರಣ ತಣ್ಣಗಾಗಿರಲಿಲ್ಲ ಸದ್ಯ ನ್ಯಾಯಾಲಯ ಆದೇಶದಿಂದ ಈಗ ನಿಟ್ಟುಸಿರು ಬಿಡುವಂತೆ ಆಗಿದೆ. ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ.

- Advertisement -

ಬಿಜೆಪಿ ಮನುವಾದದ ಬದಲು ಸಂವಿಧಾನ ಬದ್ಧ ಶಿಕ್ಷಣ ನೀಡಲು ಕ್ರಮ : ಸಿಎಂ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ ಎಂದು ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದ್ದಾರೆ.

ಉಪೇಂದ್ರ ಮನೆಗೆ ಬಿಗಿ ಭದ್ರತೆ:ಪ್ರಸ್ತುತ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸದಲ್ಲಿ ಉಪೇಂದ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಮುಂಜಾಗೃತ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

#BigRelief, #ActorUpendra, #FIR, #stayed, #HighCourt,

- Advertisement -
RELATED ARTICLES
- Advertisment -

Most Popular