ಮಧ್ಯಪ್ರವೇಶಕ್ಕೆ ಚೀತಾ ಆಗಮನ, ಸಿಎಂ ಶಿವರಾಜ್ ಹೇಳಿದ್ದೇನು ಗೊತ್ತೇ..?

Social Share

ಭೂಪಾಲ್,ಸೆ.17- ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದೇ ನಮೀಬಿಯಾದಿಂದ ಎಂಟು ಚಿರತೆಗಳು ಆಗಮಿಸಿರುವುದು ಮಧ್ಯಪ್ರದೇಶ ರಾಜ್ಯಕ್ಕೆ ದೊಡ್ಡ ಉಡುಗೊರೆಯಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ.

ಚೀತಾಗಳ ಆಗಮನ ಐತಿಹಾಸಿಕವಾದುದು, ಇವುಗಳಿಂದ ರಾಜ್ಯದಲ್ಲಿ ವಿಶೇಷವಾಗಿ ಕುನೋ-ಪಾಲ್ಪುರ್‍ನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಪ್ರಾಜೆಕ್ಟ್ ಚೀತಾದಡಿ ಭಾರತದಲ್ಲಿ ಅತಿವೇಗದ ಪ್ರಾಣಿಯ ಪರಿಚಯವನ್ನು ಮಾಡಲಾಗುತ್ತಿದೆ, ಇದು ವಿಶ್ವದ ಮೊದಲ ಅಂತರ-ಖಂಡಾಂತರ ದೊಡ್ಡ ಕಾಡು ಮಾಂಸಾಹಾರಿಗಳ ಸ್ಥಳಾಂತರ ಯೋಜನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ : 7 ದಶಕಗಳ ನಂತರ ಭಾರತಕ್ಕೆ ಬಂದ 8 ಚೀತಾಗಳು

1947ರಲ್ಲಿ ಮಹಾರಾಜ ರಾಮಾನುಜ್ ಪ್ರತಾಪ್ ಸಿಂಗ್ ದೇವು ಈ ಜಾತಿಯ ಕೊನೆಯ ಸಂತತಿಯನ್ನು ಹೊಡೆದ ನಂತರ ಇವುಗಳನ್ನು ಅಳಿವಿನಂಚಿನ ಪ್ರಾಣಿ ಎಂದು ಘೋಷಿಸಲಾಗಿತ್ತು. ಭಾರತಕ್ಕೆ ಆಗಮಿಸಿರುವ ಎಂಟು ಚೀತಾಗಳಲ್ಲಿ ಐದು ಹೆಣ್ಣು ಮತ್ತು ಮೂರು ಗಂಡು ಚಿರತೆಗಳಿವೆ. ಐದು ಹೆಣ್ಣು ಚಿರತೆಗಳು ಎರಡರಿಂದ ಐದು ವರ್ಷದವಾಗಿದ್ದು, ಗಂಡು ಚಿರತೆಗಳು 4.5 ವರ್ಷದಿಂದ 5.5 ವರ್ಷದವುಗಳಾಗಿವೆ ಎಂದು ತಿಳಿಸಿದ್ದಾರೆ.

Articles You Might Like

Share This Article