ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ ಆರು ಮಂದಿ ಸಾವು

Social Share

ಬಿಹಾರ, ಆ.13- ನಕಲಿ ಮದ್ಯಸೇವನೆಯಿಂದ ಆರು ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಭೂಲ್ಪುರ್ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಭೂಲ್ಪುರ್ ನಿವಾಸಿಗಳಾದ ಕಾಮೇಶ್ವರ್ ಮಹತೋ, ರಾಮ್ಜೀವನ್, ರೋಹಿತ್ ಸಿಂಗ್, ಕಾಪುಸಿಂಗ್, ಗರ್ಕಾವೋದಾ ಗ್ರಾಮದ ಮಹಮ್ಮದ್ ಅಲ್ಲಾವುದ್ದೀನ್ ಖಾನ್ ಎಂದು ಗುರುತಿಸಲಾಗಿದೆ.

ನಕಲಿ ಮದ್ಯಸೇವನೆಯಿಂದ ಇನ್ನೂ ಹಲವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಚ್ಚನಪುರ ಗ್ರಾಮದ ಮಹಿಳೆಯಿಂದ ಮದ್ಯ ಖರೀದಿಸಿ ಸೇವನೆ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿತ್ತು ಎಂದು ರಾಮನಾಥ್ ಎಂಬುವವರು ತಿಳಿಸಿದ್ದು, ತಕ್ಷಣ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಇದು ಎರಡನೆ ಅವಘಡವಾಗಿದ್ದು, ಆ.4ರಂದು ಬೆಳ್ಳಿ ಮತ್ತು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿ ಹಳ್ಳಿಗಳಲ್ಲಿ ಮದ್ಯ ಸೇವಿಸಿ 13 ಜನ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿದ್ದರು.

ಏ.2016ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಸಲಾಗಿತ್ತು.ಈ ನಡುವೆ ನಕಲಿ ಮದ್ಯದ ಹಾವಳಿ ಹೆಚ್ಚಾಗಿದ್ದು, ನಾಗರಿಕರು ಸಾವನ್ನಪ್ಪುತ್ತಿರುವುದು ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ.

Articles You Might Like

Share This Article