ನಿತೀಶ್ ಕುಮಾರ್ ಬಳಿ ಕೇವಲ 75.53 ಲಕ್ಷ ಮೌಲ್ಯದ ಆಸ್ತಿ

Social Share

ಪಾಟ್ನಾ, ಜ.1- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಳಿ ಇರುವುದು ಕೇವಲ 75.53 ಲಕ್ಷ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ. ಆದರೆ ಸಚಿವರು ಸಿಎಂಗಿಂತ 10 ಪಟ್ಟಗೂ ಹೆಚ್ಚು ಸಿರಿವಂತರಾಗಿದ್ದಾರೆ,

ಕ್ಯಾಲೆಂಡರ್ ವರ್ಷ (2022) ದ ಕೊನೆಯ ದಿನದಂದು (ಡಿ.31) ರಾತ್ರಿ ಬಿಹಾರ ಸರ್ಕಾರದ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ಸಿಎಂ ಬಳಿ 28,135 ರೂಪಾಯಿ ನಗದು ಮತ್ತು ಸುಮಾರು 51,856 ರೂಪಾಯಿಗಳನ್ನು ವಿವಿಧ ಬ್ಯಾಂಕ್‍ಗಳಲ್ಲಿ ಠೇವಣಿ ಮಾಡಿದ್ದಾರೆ.

ನವದೆಹಲಿಯ ದ್ವಾರಕಾದಲ್ಲಿರುವ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಸಿಎಂ ಒಂದು ವಸತಿ ಫ್ಲಾಟ್ ಸೇರಿ 58.85 ಲಕ್ಷ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಆರ್‍ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಇಬ್ಬರು ಪುತ್ರರಾದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಇಬ್ಬರೂ ಸಹೋದರರು ಬಹಿರಂಗಪಡಿಸಿದ ಪ್ರಕಾರ, ತೇಜಶ್ವಿ ಬಳಿ 75,000 ರೂ (ಮಾರ್ಚ್ 31, 2022 ರವರೆಗೆ), ಆದರೆ ಅವರ ಪತ್ನಿ ರಾಜಶ್ರೀ ಬಳಿ 1.25 ಲಕ್ಷ ರೂ. ತೇಜ್ ಪ್ರತಾಪ್ ಬಳಿ 1.7 ಲಕ್ಷ ನಗದು ಇದೆ. ತೇಜ್ ಪ್ರತಾಪ್ 3.2 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನೂ ಹೊಂದಿದ್ದಾರೆ.

ಹೊಸ ವರ್ಷಾಚರಣೆ: ನಂದಿಬೆಟ್ಟಕ್ಕೆ ಹರಿದುಬಂದ ಜನಸಾಗರ

ಇದಲ್ಲದೆ ವಿಜಯ್ ಕುಮಾರ್ ಚೌಧರಿ (ಹಣಕಾಸು), ಬಿಜೇಂದ್ರ ಪ್ರಸಾದ್ ಯಾದವ್ (ಇಂಧನ), ಅಲೋಕ್ ಕುಮಾರ್ ಮೆಹ್ತಾ (ಕಂದಾಯ ಮತ್ತು ಭೂ ಸುಧಾರಣೆಗಳು), ಶ್ರವಣ್ ಕುಮಾರ್ (ಗ್ರಾಮೀಣಾಭಿವೃದ್ಧಿ), ಅಶೋಕ್ ಚೌಧರಿ (ಕಟ್ಟಡ ನಿರ್ಮಾಣ), ತಮ್ಮ ಆಸ್ತಿಯನ್ನು ಘೋಷಿಸಿದ ಇತರ ಸಚಿವರು. ಸುರೇಂದ್ರ ಪ್ರಸಾದ್ ಯಾದವ್ (ಗಣಿ ಮತ್ತು ಭೂವಿಜ್ಞಾನ), ಸಂಜಯ್ ಕುಮಾರ್ ಝಾ (ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ), ಶೀಲಾ ಕುಮಾರ್ (ಸಾರಿಗೆ) ಸೇರಿ ಬಹುತೇಕರು ಕೊಟ್ಯಾಪತಿಗಳಾಗಿದ್ದಾರೆ.

Bihar, CM Nitish Kumar, cabinet, colleagues, declare, assets,

Articles You Might Like

Share This Article