ಮುಂದುವರೆದ ನಿತೀಶ್-ಪ್ರಶಾಂತ್ ವಾಕ್ಸಾಮರ

Social Share

ನವದೆಹಲಿ,ಅ.22- ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹಾಗೂ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನಡುವಿನ ಮುಸುಕಿನ ಗುದ್ದಾಟ ಮತ್ತೆ ಮುಂದುವರೆದಿದೆ. ನಿತೀಶ್‍ಕುಮಾರ್ ಅವರು ಇನ್ನು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶಾಂತ್ ಕಿಶೋರ್ ಹೇಳಿಕೆ ನಿತೀಶ್‍ಕುಮಾರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಶಾಂತ್ ಯೋಗ್ಯತೆ ಏನು ಎಂದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ಇಬ್ಬರ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿದ್ದಾರೆ. ಜೆಡಿಯು ಎನ್‍ಡಿಎ ಮೈತ್ರಿ ಮುರಿದುಕೊಂಡು ಮಹಾಘಟಬಂಧನ್ ಸರ್ಕಾರ ರಚನೆ ಮಾಡಿದ ನಂತರ ನಿತೀಶ್ ಹಾಗೂ ಪ್ರಶಾಂತ್ ನಡುವೆ ವಾಕ್ಸಾಮರ ತೀವ್ರ ಸ್ವರೂಪ ಪಡೆದುಕೊಂಡಿದೆ.

ನಿತೀಶ್ ಅವರು, ರಾಜ್ಯಸಭೆ ಉಪಾಧ್ಯಕ್ಷರಾಗಿರುವ ತಮ್ಮ ಪಕ್ಷದ ಸಂಸದ ಹರಿವಂಶ್ ಅವರ ಮೂಲಕ ಬಿಜೆಪಿಯೊಂದಿಗೆ ಸಂಪರ್ಕ ಸಾಧಿಸಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಆರೋಪಿಸಿದ್ದರು.

ಕೈಗಾರಿಕೆಗಳಿಗೆ ಉತ್ತೇಜನ : 1747.37 ಕೋಟಿಯ 35 ಯೋಜನೆಗಳಿಗೆ ಅನುಮೋದನೆ

ಬಿಜೆಪಿಯೊಂದಿಗೆ ಹರಿವಂಶ್ ಸಂಪರ್ಕ ಹೊಂದಿದ್ದರೂ ನಿತೀಶ್ ಅವರು ಹರಿವಂಶ್ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎನ್ನುವುದು ಇಂತಹ ಊಹಾಪೋಹಕ್ಕೆ ಕಾರಣವಾಗಿದೆ ಎಂದು ಕಿಶೋರ್ ಆರೋಪಿಸಿದ್ದರು.

ಅದೇ ದಿನ, ನಿತೀಶ್ ಕುಮಾರ್ ಅವರು ಪ್ರಶಾಂತ್ ಕಿಶೋರ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದರು ಇದಕ್ಕೆ ನಾನೇನು ಹೇಳಲಿ….ಅವನು (ಪ್ರಶಾಂತ್) ಅಸಭ್ಯವಾಗಿ ಮಾತನಾಡುತ್ತಾನೆ. ಕೇವಲ ಪ್ರಚಾರಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಯಾವ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

10 ಲಕ್ಷ ಉದ್ಯೋಗ ಕಲ್ಪಿಸುವ ರೋಜಗಾರ್ ಮೇಳಕ್ಕೆ ಮೋದಿ ಚಾಲನೆ

ನಿತೀಶ್ ಕುಮಾರ್ ಜೀ ನಿಮಗೆ ಬಿಜೆಪಿ / ಎನ್‍ಡಿಎ ಜೊತೆ ಯಾವುದೇ ಸಂಬಂಧವಿಲ್ಲದಿದ್ದರೆ ನಿಮ್ಮ ಸಂಸದರನ್ನು ರಾಜ್ಯಸಭೆಯ ಉಪಾಧ್ಯಕ್ಷ ಸ್ಥಾನವನ್ನು ತ್ಯಜಿಸಲು ಹೇಳಿ. ನೀವು ಯಾವಾಗಲೂ ಎರಡೂ ಮಾರ್ಗಗಳನ್ನು ಹೊಂದಲು ಸಾಧ್ಯವಿಲ್ಲ ಎಂದು ಮತ್ತೆ ಕಿಶೋರ್ ಟ್ವಿಟರ್‍ನಲ್ಲಿ ಕೆಣಕಿದ್ದಾರೆ.

Articles You Might Like

Share This Article