ಕಳ್ಳಭಟ್ಟಿ ದುರಂತದಲ್ಲೂ ರಾಜಕೀಯ ಕೆಸರೆರೆಚಾಟ

Social Share

ಪಾಟ್ನಾ,ಡಿ.21-ಬೀಹಾರದ ಕಳ್ಳಭಟ್ಟಿ ದುರಂತ ಪ್ರಕರಣ ಆಡಳಿತಾರೂಢ ಜೆಡಿಯು ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರಕ್ಕೆ ವೇದಿಕೆ ಕಲ್ಪಿಸಿದೆ. ನಕಲಿ ಮದ್ಯ ಸೇವನೆ ಮಾಡಿದ ಪ್ರಕರಣದಲ್ಲಿ ಕೇವಲ 38 ಮಂದಿ ಮೃತಪಟ್ಟಿದ್ದಾರೆ ಎಂದು ನಿತೀಶ್ ಸರ್ಕಾರ ಹೇಳಿದ್ದರೆ, ನಕಲಿ ಮದ್ಯ ಸೇವಿಸಿ 100ಕ್ಕೂ ಹೆಚ್ಚು ಅಮಾಯಕರು ಜೀವ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಮಧ್ಯೆ, ಆಡಳಿತಾರೂಢ ಜೆಡಿಯು ಪಕ್ಷದ ಮುಖಂಡರೊಬ್ಬರ ಮನೆಯಲ್ಲಿ ನಕಲಿ ಮದ್ಯದ ಬಾಟಲಿಗಳ ಸಂಗ್ರಹ ಕಂಡು ಬಂದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಛಾಪ್ರಾದಲ್ಲಿರುವ ಜೆಡಿಯು ನಾಯಕ ಕಾಮೇಶ್ವರ್ ಸಿಂಗ್ ಅವರ ಹೆಸರಿನಲ್ಲಿ ನೋಂದಾಯಿಸಿರುವ ಮನೆಯೊಂದರಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯ ಪತ್ತೆ ಹಚ್ಚಲಾಗಿದೆ ಎಮದು ಬಿಹಾರ ಪೊಲೀಸರು ತಿಳಿಸಿದ್ದಾರೆ.

ನಿಯಮ ಪಾಲಿಸಿ, ಇಲ್ಲವೆ ಯಾತ್ರೆ ನಿಲ್ಲಿಸಿ : ಕೇಂದ್ರ ಸರ್ಕಾರ ಎಚ್ಚರಿಕೆ

ಆ ಮನೆಯಲ್ಲಿ ಬಾಡಿಗೆಗಿದ್ದ ಸರೋಜ್ ಮಹ್ತೋ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ, ಅಕ್ರಮ ಮದ್ಯ ಪತ್ತೆಯಾಗಿರುವ ಮನೆ ನನಗೆ ಸೇರಿ ದ್ದಲ್ಲ ಎಂದು ಆಡಳಿತಾರೂಢ ಜೆಡಿಯು ಸದಸ್ಯರಾಗಿರುವ ಸಿಂಗ್ ತಿಳಿಸಿದ್ದಾರೆ. ನಾನು ಆ ಮನೆಯನ್ನು 32 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದೇನೆ. ನನ್ನ ಹೆಸರಿಗೆ ಕಳಂಕ ತರಬೇಕು ಎಂಬ ಉದ್ದೇಶದಿಂದ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇದೆಲ್ಲದರ ನಡುವೆ ಬಿಜೆಪಿ ಮುಖಂಡ ವಿಜಯ್ ಸಿನ್ಹಾ ಅವರ ಸಂಬಂಧಿಕರ ಮನೆಯಿಂದ 108 ಕಾರ್ಟೂನ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.

ಮಹಿಳೆಯರ ಶಿಕ್ಷಣಕ್ಕೆ ತಾಲಿಬಾನ್ ನಿರ್ಬಂಧ, ಅಮೆರಿಕ ಖಂಡನೆ

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ಬಿಹಾರಕ್ಕೆ ಅಗ್ಗದ ಮದ್ಯವನ್ನು ಅಕ್ರಮವಾಗಿ ತರಲಾಗುತ್ತಿದೆ ಈ ಅಕ್ರಮದ ಹಿಂದೆ ಬಿಜೆಪಿ ಮುಖಂಡರಿದ್ದಾರೆ ಎಂದು ಯಾದವ್ ಆರೋಪಿಸಿದ್ದಾರೆ.

Bihar, Hooch Tragedy, BJP MP Sushil Modi, Slams Nitish Kumar,

Articles You Might Like

Share This Article