ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 28ಕ್ಕೆ ಏರಿಕೆ

Social Share

ಶರಣ್,ಡಿ.16-ಬಿಹಾರದ ಪೂಚ್ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, ತನಿಖೆಗಾಗಿ ವಿಶೇಷ ದಳವನ್ನು ರಚನೆ ಮಾಡಲಾಗಿದೆ. ನಿನ್ನೆ ರಾತ್ರಿ ಮತ್ತಿಬ್ಬರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಜಿಲ್ಲಾಧಿಕಾರಿ ರಾಜೀಶ್ ಮೀನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕಳ್ಳಭಟ್ಟಿ ದುರಂತಕ್ಕೆ ಸಂಬಂಧ ಪಟ್ಟಂತೆ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಾದ್ಯಂತ ಕ್ಷಿಪ್ರ ದಾಳಿ ನಡೆಸಲಾಗಿದೆ. 48 ಗಂಟೆಗಳಲ್ಲಿ 126 ಮಂದಿ ಮದ್ಯ ಮಾರಾಟಗಾರರನ್ನು ಬಂಧಿಸಲಾಗಿದ್ದು, 4ಸಾವಿರ ಲೀಟರೂ ಅಧಿಕ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕುಕ್ಕರ್ ಬಾಂಬ್ ಪ್ರಕರಣ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‍ಕುಮಾರ್ ಅವರು ಬಂಧಿತ ಮಾಹಿತಿಯನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಚುರುಕಿನ ತನಿಖೆಗಾಗಿ 31 ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‍ಐಟಿ ರಚಿಸಲಾಗಿದೆ. ಅದರಲ್ಲಿ ಒಬ್ಬ ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ, ಇಬ್ಬರು ಡಿವೈಎಸ್‍ಪಿಗಳು ಇದ್ದಾರೆ.

ಯಾವುದೇ ಮುಲಾಜಿಲ್ಲದೆ ಪ್ರಭಾವಕ್ಕೊಳಗಾಗದೆ ಮಾಹಿತಿಗಳನ್ನು ಖಚಿತ ಪಡಿಸಿಕೊಳ್ಳಲಾಗುವುದು. ಸಾಮನ್ಯರು ಕೂಡ ಧೈರ್ಯವಾಗಿ ತನಿಖಾ ತಂಡಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಡ್ಯಾನ್ಸ್ ವಿಡಿಯೋ ವೈರಲ್: ನಾಲ್ಕು ಮಹಿಳಾ ಕಾನ್‍ಸ್ಟೆಬಲ್‍ಗಳ ಅಮಾನತು

2016ರಲ್ಲಿ ಬಿಹಾರ ಸರ್ಕಾರ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತಂದಿದೆ. ಅದರ ಹೊರತಾಗಿಯೂ ದುರಂತ ನಡೆದಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಸಂಘರ್ಷಗಳಿಗೂ ಕಾರಣವಾಗಿದೆ.

Bihar, hooch tragedy, Death toll rises,

Articles You Might Like

Share This Article