ಪತ್ರಕರ್ತನ ಮೇಲೆ ಗುಂಡಿನ ದಾಳಿ

Social Share

ಪಾಟ್ನಾ,ಜ.8- ಪತ್ರಕರ್ತರೊಬ್ಬರ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿರುವ ಪ್ರಕರಣ ಬಿಹಾರದ ಸಿವಾನ್‍ನಲ್ಲಿ ನಡೆದಿದೆ. ಸಿವಾನ್ ಜಿಲ್ಲೆಯ ಮಹಾರಾಜ್ ಗಂಜ್‍ನಲ್ಲಿ ಪತ್ರಕರ್ತ ರಾಜೇಶ್ ಅನಲ್ ಅವರ ಮೇಲೆ ಇಬ್ಬರು ಕ್ರಿಮಿನಲ್‍ಗಳು ಗುಂಡು ಹಾರಿಸಿದ್ದು, ಘಟನೆಯಲ್ಲಿ ಪತ್ರಕರ್ತ ತೀವ್ರವಾಗಿ ಗಾಯಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಕಚೇರಿ ಬಂದ್ ಮಾಡಿ ರಾಜೇಶ್ ಮನೆಗೆ ತೆರಳುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡು ಹಾರಿಸಿದ್ದರಿಂದ ರಾಜೇಶ್ ಅವರ ಎಡತೊಡೆ ಮತ್ತು ತೋಳಿಗೆ ಗುಂಡು ಹೊಕ್ಕಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶೈಲೇಶ್ ಕುಮಾರ್ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದು, ಪತ್ರಕರ್ತನ ಮೇಲೆ ಗುಂಡು ಹಾರಿಸಿದವರ ಬಂಧನಕ್ಕೆ ತೀವ್ರ ಕಾರ್ಯಚರಣೆ ಕೈಗೊಂಡಿದ್ದೇವೆ ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಸರಗೂಡಿನಲ್ಲಿ ಬೀಡಿ ಕಟ್ಟುತ್ತಿದ್ದ ವ್ಯಕ್ತಿ ಇಂದು ಟೆಕ್ಸಾಸ್ ಜಿಲ್ಲಾ ನ್ಯಾಯಾಧೀಶ..!

ಪತ್ರಕರ್ತ ರಾಜೇಶ್ ಅವರ ಮೇಲೆ ದಾಳಿ ನಡೆದಿರುವುದು ಇದು ಎರಡನೇ ಬಾರಿ ಎನ್ನುವುದು ಇಲ್ಲಿ ಗಮನಾರ್ಹ. ಕಳೆದ 2017ರಲ್ಲಿ ಇವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದರು.

Bihar, Journalist, injured, shooting, incident,

Articles You Might Like

Share This Article