ಪಾಟ್ನಾ,ಮಾ.10-ಗೋಮಾಂಸ ಸಾಗಿಸುತ್ತಿದ್ದ ಶಂಕೆಯಲ್ಲಿ ಮುಸಲ್ಮಾನ್ ವ್ಯಕ್ತಿಯೊಬ್ಬರನ್ನು ಗುಂಪೊಂದು ಅಮಾನುಷವಾಗಿ ಥಳಿಸಿ ಕೊಲೆ ಮಾಡಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ನಡೆದಿದೆ.
ಹಸನ್‍ಪುರ ಗ್ರಾಮದ ನಿವಾಸಿ 56 ವರ್ಷದ ನಸೀಮ್ ಖುರೇಷಿ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.
ನಸೀಮ್ ಮತ್ತು ಸೋದರಳಿಯ ಫಿರೋಜ್ ಅಹ್ಮದ್ ಖುರೇಷಿ ಅವರು ಕೆಲವು ಪರಿಚಯಸ್ಥರನ್ನು ಭೇಟಿಯಾಗಲು ಹೋಗುತ್ತಿದ್ದಾಗ ಪಾಟ್ನಾದ 110 ಕಿಮೀ ವಾಯುವ್ಯದಲ್ಲಿರುವ ಜೋಗಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಸರನ್ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಮಂಗಳ ತಿಳಿಸಿದ್ದಾರೆ.
ಈದ್ಗಾ ಮೈದಾನದಲ್ಲಿ ಕಾಮಣ್ಣ-ರತಿ ಪ್ರತಿಷ್ಠಾಪನೆಗೆ ಪಟ್ಟು : ಹುಬ್ಬಳ್ಳಿ ಉದ್ವಿಗ್ನ
ಇಬ್ಬರು ಮಸೀದಿ ಸಮೀಪ ಹೋಗುತ್ತಿದ್ದಾಗ ಗುಂಪೊಂದು ಅವರನ್ನು ಅಡ್ಡಗಟ್ಟಿ ದನದ ಮಾಂಸ ಸಾಗಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಹ್ಮದ್ ಖುರೇಷಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಗುಂಪಿಗೆ ಸಿಕ್ಕಿಕೊಂಡ ನಸೀಮ್ ಖುರೇಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗುಂಪು ನಂತರ ಆತನನ್ನು ರಸೂಲ್‍ಪುರ್ ಪೊಲೀಸರಿಗೆ ಒಪ್ಪಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಖುರೇಷಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದ ಏರ್ ಇಂಡಿಯಾ ಸಿಬ್ಬಂದಿ
ಈ ಕುರಿತಂತೆ ನಸೀಮ್ ಸೋದರಳಿಯ ಫಿರೋಜ್ ಖುರೇಷಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ಸರಪಂಚ ಸುಶೀಲ್‍ಸಿಂಗ್ ಮತ್ತು ಇತರ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದೆ. ಪರಾರಿಯಾಗಿರುವ ಮತ್ತಿತರ ಪತ್ತೆಗೂ ಕಾರ್ಯಚರಣೆ ಕೈಗೊಳ್ಳಲಾಗಿದ್ದು, ಮೃತ ವ್ಯಕ್ತಿ ದನದ ಮಾಂಸ ಸಾಗಿಸುತ್ತಿದ್ದರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಮಂಗಳ ತಿಳಿಸಿದ್ದಾರೆ.
Bihar, Man, Beaten, Death, Saran, mob, Suspicion, Carrying, Beef,