ಸಿಎಂ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಮಾಜಿ ಸಂಸದನಿಗೆ 3 ವರ್ಷ ಜೈಲು

Social Share

ಗೆಹನಾಬಾದ್,ಜು.31- ಬಿಹಾರದ ಮುಖ್ಯಮಂತ್ರಿ ನಿತೀಶ್‍ಕುಮಾರ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಮಾಜಿ ಸಂಸದರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ದಂಡ ವಿಧಿಸಲಾಗಿದೆ. ಗೆಹನಾಬಾದ್ ಜಿಲ್ಲಾ ನ್ಯಾಯಾಲಯ ಆರ್‍ಎಲ್‍ಎಸ್‍ಪಿ ಸಂಸದ ಅರುಣ್‍ಕುಮಾರ್ ಅವರಿಗೆ ಶಿಕ್ಷೆ ವಿಧಿಸಿದೆ.

2015ರ ಜೂನ್‍ನಲ್ಲಿ ಅರುಣ್‍ಕುಮಾರ್ ಅವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬರ್ಹಮತ್ತು ಮೊಕಂ ಪ್ರದೇಶದಲ್ಲಿ ಭೂಮಿಹಾರ್ಸ್‍ಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಲಾಗುತ್ತಿದೆ. ನಾವೇನು ಬಳೆ, ಸೀರೆ ತೊಟ್ಟಿಲ್ಲ. ಮುಖ್ಯಮಂತ್ರಿಗಳ ಎದೆಮೂಳೆಗಳನ್ನು ಮುರಿಯುತ್ತೇವೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಸಂಸದರು ಮತ್ತು ಶಾಸಕರ ನ್ಯಾಯಾಲಯದ ನ್ಯಾಯಾೀಧಿಶರಾದ ರಾಕೇಶ್ ಕುಮಾರ್ ರಜಾಕ್ ಅವರು ತೀರ್ಪು ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಮಾದೇಪುರ ಕ್ಷೇತ್ರದ ಮಾಜಿ ಸಂಸದ ಪಪ್ಪು ಯಾದವ್ ಅವರನ್ನು ಸಾಕ್ಷಾಧಾರಗಳ ಕೊರತೆಯಿಂದ ನಿರ್ದೋಷಿಗಳೆಂದು ಘೋಷಿಸಲಾಗಿದೆ.

Articles You Might Like

Share This Article