ಯುರೇನಿಯಂ ಕಳ್ಳಸಾಗಾಣಿಕೆ ಜಾಲ ಪತ್ತೆ: 15 ಮಂದಿ ಬಂಧನ

Social Share

ಬಿಹಾರ,ಜು.22- ಭಾರತ, ನೇಪಾಳ ಗಡಿ ಪ್ರದೇಶದ ಬಿರಾಟ್‍ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಯುರೇನಿಯಂ ಕಳ್ಳಸಾಗಾಣಿಕೆ ಜಾಲವನ್ನು ಪತ್ತೆಹಚ್ಚಿ 15 ಮಂದಿಯನ್ನು ಬಂಧಿಸಿ 2 ಕೆಜಿ ಯುರೇನಿಯಂನ್ನು ವಶಕ್ಕೆ ಪಡೆದಿದ್ದಾರೆ.

ಹೆಚ್ಚು ವಿಕೀರಣಶೀಲ ನಿಷೇಧಿತ ವಸ್ತುಗಳನ್ನು ಕಳ್ಳಸಾಗಾಣಿಕೆದಾರರು ವಿದೇಶಗಳಿಗೆ ಸಾಗಿಸಲು ಯತ್ನಿಸುತ್ತಿದ್ದರು. ಹರಾರಿಯ ಜಿಲ್ಲೆಯ ಜೋಗ್ಬಾನಿ ಗಡಿ ಮೂಲಕ ಬಿಹಾರಕ್ಕೆ ನುಸುಳಲು ಆರೋಪಿಗಳು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ.

ಯುರೇನಿಯಂ ನಮ್ಮ ಭೂಮಿಯಲ್ಲಿ ಬಹಳ ಅಪರೂಪವಾಗಿ ಲಭ್ಯವಿರುವ ಖನಿಜವಾಗಿದೆ. ಇದರಲ್ಲಿರುವ ಪರಮಾಣು ವಿದ್ಯುತ್ ಉತ್ಪಾದನೆ ಮತ್ತು ಪರಮಾಣು ಶಸ್ತ್ರಾಸ್ತ್ರ , ಅಣುಬಾಂಬ್ ಇತ್ಯಾದಿ ತಯಾರಿಕೆಗೆ ಸಹಾಯವಾಗುತ್ತದೆ.
ಜೊತೆಗೆ ಔಷಧ, ಎಕ್ಸ್‍ರೇ, ಫೋಟೋಗ್ರಫಿಗಳಿಗೂ ಬಳಕೆಯಾಗುತ್ತದೆ. ವಿಮಾನ ನಿಯಂತ್ರಣ ಮೇಲ್ಮೈಗಳಿಗೆ ಬಳಸಲಾಗುತ್ತದೆ. ಯುರೇನಿಯಂನಿಂದ ರೇಡಿಯಂ ಹೊರತೆಗೆಯಲಾಗುತ್ತದೆ.

ಒಂದು ಗ್ರಾಂ ಯುರೇನಿಯಂನಿಂದ ಒಂದು ಮೆಗಾವಾಟ್ ವಿದ್ಯುತ್‍ಚ್ಛಕ್ತಿ ಸಿಗುತ್ತದೆ. ಇದು 3 ಟನ್ ಕಲ್ಲಿದ್ದಲಿಗೆ ಸಮ ಎಂದು ಹೇಳಲಾಗುತ್ತದೆ.

Articles You Might Like

Share This Article