ಡಾನ್ಸ್ ಮಾಡಲು ನಿರಾಕರಿಸಿದ ಇಬ್ಬರ ಮೇಲೆ ಗುಂಡಿನ ದಾಳಿ

Social Share

ಪಾಟ್ನಾ,ನ.16-ಪಂಚಾಯ್ತಿ ಸದಸ್ಯರೊಬ್ಬರ ಪುತ್ರನ ಹುಟ್ಟಹಬ್ಬದ ಸಂದರ್ಭದಲ್ಲಿ ಪಾನಮತ್ತರೊಂದಿಗೆ ನೃತ್ಯ ಮಾಡಲು ನಿರಾಕರಿಸಿದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಬಿಹಾರದ ಸಂದೇಶ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಹಾಪುರ ಪಂಚಾಯ್ತಿಯ ಸಲೇಹಂ ಪುರ ಗ್ರಾಮದ ಸದಸ್ಯ ರಣವೀರ್ ಶಾ ಅವರ ಪುತ್ರನ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಡು ಹೇಳಲು ಮತ್ತು ನೃತ್ಯ ಮಾಡಲು ಪಾಟ್ನಾದ ಮುಖೇಶ್‍ನನ್ನು ಕರೆಸಲಾಗಿತ್ತು.

ಆತನೊಂದಿಗೆ ಒಡಿಶಾ ರಾಜ್ಯದ ಭುವನೇಶ್ವರ್‍ನ ನೃತ್ಯಗಾರ್ತಿ ನೀಲು ಬೆಹರ ಕೂಡ ಆಗಮಿಸಿದ್ದರು. ಕಾರ್ಯಕ್ರಮದ ನಡುವೆ ಕೆಲವು ಪಾನಮತ್ತೀಯರು ವೇದಿಕೆಯಲ್ಲಿ ತಮ್ಮೊಂದಿಗೆ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ಅದಕ್ಕೆ ನೀಲು ನಿರಾಕರಿಸಿದ್ದಾರೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಹಾಡುಗಾರ ಮುಖೇಶ್ ಯಾದವ್ ಆಕೆಯ ನೆರವಿಗೆ ಬಂದಿದ್ದರಿಂದ ಮಾತಿನ ಚಕಮಕಿಯಾಗಿದೆ. ಕಾರ್ಯಕ್ರಮ ಮುಗಿಸಿ ಇಬ್ಬರು ವಾಪಸ್ ತೆರಳುವ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಇಬ್ಬರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಗಾಯಗೊಂಡವರನ್ನು ಆರಾಹದ ಸದ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಸ್ಕಾಂ ಬ್ರಹ್ಮಾಸ್ತ್ರ : 3 ತಿಂಗಳ ಬಿಲ್ ಕಟ್ಟದಿದ್ದರೆ ಪರವಾನಗಿ ರದ್ದು

ಪ್ರಕರಣ ದಾಖಲಾಗುತ್ತಿದ್ದಂತೆ ಪಂಚಾಯ್ತಿಯ ಸದಸ್ಯ ಮತ್ತು ಆತನ ಬೆಂಬಲಿಗರು ತಲೆಮರೆಸಿಕೊಂಡಿದ್ದಾರೆ.

Articles You Might Like

Share This Article