ವಿದ್ಯಾರ್ಥಿಗಳು ಬಿಕಿನಿ ತೊಟ್ಟು ಬರಲಿ : ಪ್ರಿಯಾಂಕ ವಾದ್ರ

Social Share

ನವದೆಹಲಿ, ಫೆ.9- ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಗದ್ದಲ ಕುರಿತು ರಾಹುಲ್ ಗಾಂಧಿ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರ ಪ್ರತಿಕ್ರಿಯಿಸಿದ್ದು, ಬಲವಂತದ ವಸ್ತ್ರ ಸಂಹಿತೆಯನ್ನು ವಿರೋಧಿಸಿದ್ದಾರೆ.
ಲಡಕಿ ಹೂಂನಾ ಲಡ್ ಸಕ್ತಿಹೂ ಎಂಬ ಹ್ಯಾಸ್ ಟ್ಯಾಗ್ ನಲ್ಲಿ ಟ್ವಿಟ್ ಮಾಡಿರುವ ಪ್ರಿಯಾಂಕ ಅವರು, ಬಿಕಿನಿ, ಘೂಂಘಾಟ್, ಜೀನ್ಸ್ ಅಥವಾ ಹಿಜಾಬ್ ಆಗಿರಲಿ, ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು. ಈ ಹಕ್ಕನ್ನು ಭಾರತೀಯ ಸಂವಿಧಾನವು ಖಾತರಿಪಡಿಸಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿ” ಎಂದು ಆಗ್ರಹಿಸಿದ್ದಾರೆ.


ಉಡುಪಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಜನವರಿಯಲ್ಲಿ ಮೊದಲ ಬಾರಿಗೆ ಹಿಜಾಬ್ ವಿವಾದ ಭುಗಿಲೆದ್ದಿದ್ದು, ವಸ್ತ್ರಸಂಹಿತೆ ಉಲ್ಲಂಘಿಸಿ ತಲೆ ಗವಸು ಧರಿಸಿ ತರಗತಿಗೆ ಹಾಜರಾಗಿದ್ದ ಆರು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ನಿಂದ ಹೊರಹೋಗುವಂತೆ ಸೂಚಿಸಲಾಗಿತ್ತು. ಈ ವಿವಾದಕ್ಕೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಕ್ರಿಯಿಸುವ ಮೂಲಕ ರಾಜ್ಯದ ವಿವಿಧ ಭಾಗಗಳಿಗೆ ಗಲಾಟೆ ಉಲ್ಬಣಗೊಂಡಿತ್ತು. ಕೇಸರಿ ವಸ್ತ್ರಧಾರಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಪ್ರವೇಶಿಸದಂತೆಂ ನಿರ್ಬಂಧಿಸಲಾಗಿತ್ತು.
ಶಿಕ್ಷಣ ಸಂಸ್ಥೆಗಳು ಜಾರಿಗೊಳಿಸುತ್ತಿರುವ ಸಮವಸ್ತ್ರ ಸಂಹಿತೆ ನಿಯಮಗಳಿಗೆ ಆಡಳಿತಾರೂಢ ಬಿಜೆಪಿ ಬಲವಾಗಿ ಬೆಂಬಲ ವ್ಯಕ್ತ ಪಡಿಸಿದೆ. ಕಾಂಗ್ರೆಸ್ ಹಿಜಾಬ್ ಧಾರ್ಮಿಕ ಸ್ವಾತಂತ್ರ್ಯದ ಸಂಕೇತ ಎಂದು ಹೇಳುವ ಮೂಲಕ ವಿರೋಧ ಪಕ್ಷ ಕಾಂಗ್ರೆಸ್, ಮುಸ್ಲಿಂ ಹೆಣ್ಣು ಮಕ್ಕಳ ಬೆಂಬಲಕ್ಕೆ ನಿಂತಿದೆ. ಈ ಗದ್ದಲ ರಾಜಕೀಯ ರಂಗು ಪಡೆದುಕೊಂಡಿದೆ.
ನಿನ್ನೆ ಕೆಲವಡೆ ಕಲ್ಲು ತೂರಾಟ, ಚಾಕು ಇರಿತದಂತಹ ಹಿಂಸಾಚಾರಗಳು ನಡೆದಿದ್ದಿದ್ದವು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕ ಟ್ವಿಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Articles You Might Like

Share This Article