ಲಂಡನ್,ಫೆ.9- ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಬಿಲ್‍ಗೇಟ್ಸ್ ಮತ್ತೊಮ್ಮೆ ಪ್ರೇಮಪಾಶಕ್ಕೆ ಬಿದ್ದಿದ್ದಾರೆ. 2019 ರಲ್ಲಿ ನಿಧನರಾದ ಒರಾಕಲ್ ಸಂಸ್ಥೆ ಸಿಇಒ ಮಾರ್ಕ್ ಹರ್ಡ್ ಅವರ ವಿಧವೆ ಪತ್ನಿ ಪೌಲಾ ಹರ್ಡ್ ಅವರ ಪ್ರೇಮಪಾಶದಲ್ಲಿ ಬಿಲ್‍ಗೇಟ್ಸ್ ಇದ್ದಾರೆ ಎಂದು ವರದಿಯಾಗಿದೆ.
67 ವರ್ಷದ ಬಿಲ್‍ಗೇಟ್ಸ್ ಅವರು ಕಳೆದ ಒಂದು ವರ್ಷದಿಂದ ಪೌಲಾ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಪಂದ್ಯದ ವೇಳೆ ಇವರಿಬ್ಬರು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದರು.
ಹರ್ಡ್ ಅವರ ಪತಿ ಮಾರ್ಕ್ ಹರ್ಡ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಕಳೆದ 2019ರಲ್ಲಿ ನಿಧನರಾಗಿದ್ದರು ಈವೆಂಟ್ ಪ್ಲಾನರ್ ಆಗಿ ಕೆಲಸ ಮಾಡುತ್ತಿರುವ ಪೌಲಾ ಅವರು ಕಳೆದ ಒಂದು ವರ್ಷದಿಂದ ಬಿಲ್‍ಗೇಟ್ಸ್ ಜತೆ ಕಾಣಿಸಿಕೊಳ್ಳತೊಡಗಿದರು.
ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ
ಆರಂಭದಲ್ಲಿ ಕರ್ತವ್ಯ ನಿಮಿತ್ತ ಇಲ್ಲವೇ ಟೆನ್ನಿಸ್ ಮೇಲಿನ ಪ್ರೀತಿಯಿಂದಾಗಿ ಇಬ್ಬರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು ಎಂದೇ ಭಾವಿಸಲಾಗಿತ್ತು. ಆದರೆ, ಅವರಿಬ್ಬರೂ ಇದೀಗ ಪ್ರೇಮಪಾಶದಲ್ಲಿ ಬಂಧಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮಾರ್ಕ್ ಕ್ಯಾಥರಿನ್ ಮತ್ತು ಕೆಲ್ಲಿ ಎಂಬ ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಪೌಲಾ ಅವರು ಕಳೆದ ತಿಂಗಳು ಬಿಲ್‍ಗೇಟ್ಸ್ ಅವರೊಂದಿಗೆ ಮೆಲ್ಬೋರ್ನ್‍ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‍ನಲ್ಲಿ ಪುರುಷರ ಸಿಂಗಲ್ ಫೈನಲ್ ಪಂದ್ಯ ವೀಕ್ಷಿಸಿದ್ದರು.
ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು
2021ರಲ್ಲಿ ಮೆಲಿಂಡಾ ಫ್ರೆಂಚ್ ಅವರು ಬಿಲ್‍ಗೇಟ್ಸ್ ಅವರಿಂದ ವಿಚ್ಛೇದನ ಪಡೆದಿದ್ದರು. ಆದರೂ ಇಬ್ಬರು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಅನ್ನು ಒಟ್ಟಾಗಿ ನಡೆಸುವುದಾಗಿ ಘೋಷಿಸಿದ್ದರು.
ಮೆಲಿಂಡಾ ಅವರಿಂದ ವಿಚ್ಛೇದನ ಪಡೆದ ನಂತರ ಒಬ್ಬಂಟಿಯಾಗಿದ್ದ ಬಿಲ್‍ಗೇಟ್ಸ್ ಅವರು ಇತ್ತೀಚೆಗೆ ಪೌಲಾ ಅವರೊಂದಿಗೆ ಸಹಜೀವನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Bill Gates, dating, Paula Hurd,