ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ : ಬಿಲ್ ಗೇಟ್ಸ್

Social Share

ನ್ಯೂಯಾರ್ಕ್,ಮಾ.8-ವಿಶ್ವದ ಮಾಹಿತಿ ತಂತ್ರ ತಂತ್ರಜ್ಞಾನ ದಿಗ್ಗಜ ಕಲಿಯುಗ ಕುಬೇರ ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್ ಭಾರತವನ್ನು ಕೊಂಡಾಡಿದ್ದಾರೆ. ಇತ್ತೀಚೆಗಷ್ಟೇ ಭಾರತದ ಪ್ರವಾಸದ ಮುಗಿಸಿ ತೆರಳಿರುವ ಅವರು ಅಲ್ಲಿನ ಅನುಭವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಮತ್ತೆ ಭಾರತಕ್ಕೆ ಆಗಮಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದ್ದಾರೆ.

ಕಳೆದ ಕೆಲ ದಿನಗಳಲ್ಲಿ ಭಾರತದಲ್ಲಿ ಸುಂದರವಾದ ದಿನಗಳನ್ನು ಕಳೆದಿದ್ದೇನೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕಷ್ಟು ಗಣ್ಯರ ಭೇಟಿ ಹಾಗೂ ಬೆಂಗಳೂರು ನಗರಕ್ಕೆ ಭೇಟಿ ನೀಡಿರುವ ವಿಚಾರವನ್ನೂ ಖುಷಿಯಿಂದ ಬಿಲ್ ಗೇಟ್ಸ್ ಅವರು ಭಾರತದ ಪ್ರವಾಸದ ಬಗ್ಗೆ ಸರಣಿ ಟ್ವೀಟ್‍ಗಳನ್ನು ಪೋಸ್ಟ್ ಮಾಡಿದ್ದಾರೆ.

ಜಗತ್ತನ್ನು ಆರೋಗ್ಯಕರ ತಾಣವನ್ನಾಗಿಸುವ ಭಾರತೀಯ ಸಿರಿಧಾನ್ಯಗಳು

ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜತೆ ಮಾತನಾಡುವುದು ಸಂತಸದ ವಿಚಾರ ಹಾಗೂ ಭಾರತವು ಆರೋಗ್ಯ, ಆರ್ಥಿಕತೆ ಅಲ್ಲದೆ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಡಿಜಿಟಲ್ ತಂತ್ರಜ್ಞಾನ ಬಳಕೆ ಹೇಗೆ ಹಲವಾರು ಕ್ಷೇತ್ರದಲ್ಲಿ ಮುನ್ನುಗ್ಗುತ್ತಿದೆ ಇದನ್ನು ಅವರೊಂದಿಗೆ ಚಿರ್ಚಿಸಿರುವುದು ಖುಷಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.

ಅತಿವೃಷ್ಟಿ ಅನಾವೃಷ್ಟಿ ಹಾಗೂ ಪ್ರತಿಕೂಲ ಹವಾಮಾನದಲ್ಲಿಯೂ ಇರಬಹುದಾದ ಬೆಳೆಗಳ ಕುರಿತ ಸಂಶೋಧನೆಯನ್ನು ಪರಿಶೀಲಿಸಿದೆ.ಟಿಬಿಯಿಂದ ಬಳಲುತ್ತಿರುವವರು ಭಾರತದಲ್ಲಿ ಹೆಚ್ಚಾಗಿದ್ದಾರೆ ಇದರ ಬಗ್ಗೆ ಕಾಳಜಿ ಹೆಚ್ಚಾಗಬೇಕಿದೆ ಮುಂಬೈನಲ್ಲಿ ನಾನು ಆರೋಗ್ಯ ಕೇಂದ್ರಕ್ಕೂ ಬೇಟಿ ನೀಡಿದ್ದೆ ಸೇವೆ ಉತ್ತಮವಾಗಿತ್ತು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ..?

ಝೀರೋ ಎಮಿಷನ್ ಹಾಗೂ ಶಬ್ದರಹಿತವಾದ ಮಹೀಂದ್ರಾ ಟ್ರಿಯೋ ರಿಕ್ಷಾ ಚಾಲನೆ ಮಾಡಿದ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. ಇದಲ್ಲದೆ 13ನೇ ವಯಸ್ಸಿಗೆ ವಲ್ಡರ್ï ಯೂಥ್ ಬ್ರಿಡ್ಜ್‍ಚಾಂಪಿಯನ್‍ಶಿಪ್‍ನಲ್ಲಿ ಬಂಗಾರ ಪದಕ ಗೆದ್ದು ಅತಿ ಕಡಿಮೆ ವಯಸ್ಸಿನಲ್ಲಿ ಪದಕ ಗೆದ್ದ ವ್ಯಕ್ತಿ ಎನಿಸಿಕೊಂಡಿರು ಅನ್ಶುಲ್ ಭಟ್ ಅವರನ್ನು ಭೇಟಿಯಾಗಿದ್ದು ಖುಷಿ ತಂದಿದೆ ಎಂದಿದ್ದಾರೆ.

Bill Gates, rides, electric vehicle, India, trip,

Articles You Might Like

Share This Article