ಬಿರಾದಾರ್ ಅವರಿಗೆ ಬಿಗ್ ಬಿ ಕಾಲ್ ಮಾಡಿದ್ರಂತೆ..! ಬಿರಾದಾರ್ EXCLUSIVE INTERVIEW

Spread the love

ಇವರು ಓದಿದ್ದು ಕೇವಲ ನಾಲ್ಕನೇ ಕ್ಲಾಸ್…! ನಟನಾಗಬೇಕು ಅಂತ ಬೆಂಗಳೂರಿಗೆ ಬಂದರು, ಹಸಿವು ಮತ್ತು ಅವಮಾನ ಎರಡನ್ನು ಅನುಭವಿಸಿದ್ರು. ಸಾಧಕನಿಗೆ ಇದ್ಯಾವ ಲೆಕ್ಕ ಎನ್ನುವಂತೆ ಹಿಡಿದ ಹಠ ಸಾಧಿಸಿಯೇ ತೋರಿಸಿದ್ರು. ರಾಜ್ಯ ಪ್ರಶಸ್ತಿ, ಅಂತರಾಷ್ಟ್ರೀಯ ಪ್ರಶಸ್ತಿ ಎಲ್ಲವನ್ನು ಬಾಚಿಕೊಂಡ್ರು..! ’ಓ ಮಲ್ಲಿಗೆ’, ’ಅಕ್ಕ’, ’ಹುಲಿಯಾ’, ’ಮಠ’, ’ಲವ್ ಟ್ರೈನಿಂಗ್ ಸ್ಕೂಲ್’ ಲಕ್ಕಿ, ಕಲಾಸಿ ಪಾಳ್ಯ ಸೇರಿದಂತೆ 499ಸಿನಿಮಾಗಳಲ್ಲಿ ನಟಿಸಿದ್ದಾರೆ.

ಖುಷಿ ವಿಷಯ ಏನಂದ್ರೆ ಇವರು ನಟನೆ ಮಾಡುತ್ತಿರುವ 500ನೇ ಚಿತ್ರ ‘ನೈಂಟಿ ಹೋಡಿ ಮನೆಗೆ ನಡಿ ಚಿತ್ರದಲ್ಲಿ ಇವರೇ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರ ಈಗಾಗಲೇ ಸೆಟ್ಟೇರಿದೆ.

ನಾಲ್ಕು ಲಂಬಾಣಿ, ತುಳು ಹಾಗೂ ಹಿಂದಿಯ ’ಹ್ಯಾಂಗ್ ಟು ಡೆತ್’ ಸಿನಿಮಾದಲ್ಲೂ ನಟಿಸಿದ್ದಾರೆ. ಕುಡುಕ, ಭಿಕ್ಷುಕ ಹೀಗೆ ಸಣ್ಣಪುಟ್ಟ ಪಾತ್ರಗಳಿಗೆ ಸೀಮಿತವಾಗಿದ್ದ ಬಿರಾದಾರ್ ಅವರಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟದ್ದು ಗಿರೀಶ್ ಕಾಸರವಳ್ಳಿಯವರ ’ಕನಸೆಂಬೋ ಕುದುರೆಯನೇರಿ’ ಸಿನಿಮಾ.

ಈ ಸಿನಿಮಾ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಬಿರಾದಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು.

ಬಿಕ್ಷುಕನ ಪಾತ್ರಕ್ಕೆ ಲಭಿಸಿದ ಅಕ್ಷಯ ಪಾತ್ರೆ ಅದು ಅಂತ ಅವರೇ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಮೊನ್ನೆ ಬಿರಾದಾರ ಅವರಿಗೆ ಖ್ಯಾತ ನಟ ಅಮಿತಾಬ್ ಬಚ್ಚನ್ ಕಾಲ್ ಮಾಡಿದ್ರಂತೆ ಏನ್ ವಿಷಯ ಎಂಬುದನ್ನು ಅವರೇ ಹೇಳ್ತಾರೆ ಈ ವಿಡಿಯೋವನ್ನು ಮಿಸ್ ಮಾಡದೇ ನೋಡಿ.

Facebook Comments

Sri Raghav

Admin