ಕೇರಳದಲ್ಲಿ ಹಕ್ಕಿಜ್ವರ: 1800 ಕೋಳಿ ಸಾವು

Social Share

ಕೋಝಿಕ್ಕೋಡ್ (ಕೇರಳ), ಜ. 12 – ಕೇರಳದ ಕೋಝಿಕ್ಕೋಡ್ ಜಿಲ್ಲಾಯ ಸರ್ಕಾರಿ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಸೋಂಕಿನಿಂದ ಸುಮಾರು 1,800 ಕೋಳಿಗಳು ಸಾವನ್ನಪ್ಪಿವೆ.

ಇಲ್ಲಿನ ಜಿಲ್ಲಾ ಪಂಚಾಯಿತಿ ನಿರ್ವಹಿಸುತ್ತಿರುವ ಸ್ಥಳೀಯ ಫಾರ್ಮ್‍ನಲ್ಲಿರುವ ಕೋಳಿಗಳಲ್ಲಿ ಹೆಚ್ಚುವರಿ ಪ್ರಸರಣ ಸಾಮಥ್ರ್ಯವನ್ನು ಹೊಂದಿರುವ ಎಚ್5ಎನï1 ರೂಪಾಂತರದ ಸೋಂಕು ತಗಿಲಿರುವುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ನಿಟ್ಟಿನಲ್ಲಿ ಕೇಂದ್ರದ ಮಾರ್ಗಸೂಚಿಗಳು ಮತ್ತು ನಿಯಮ ಪ್ರಕಾರ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಕೇರಳದ ಪಶುಸಂಗೋಪನೆ ಸಚಿವರಾದ ಜೆ ಚಿಂಚು ರಾಣಿ ಅವರು ಸೂಚನೆ ನೀಡಿದ್ದಾರೆ.

ಆರಂಭಿಕ ಪರೀಕ್ಷೆಗಳು ಹಕ್ಕಿ ಜ್ವರ ಎಮದು ಗೊತ್ತಾಗಿದೆ ಆದರೂ ಸತ್ತ ಕೋಳಿಯ ಮಾದರಿಗಳನ್ನು ಭೋಪಾಲ್ (ಮಧ್ಯಪ್ರದೇಶ) ನಲ್ಲಿರುವ ಹೈ ಸೆಕ್ಯುರಿಟಿ ಲ್ಯಾಬ್‍ಗೆ ನಿಖರವಾದ ರೋಗ ಪತ್ತೆಗೆ ಕಳುಹಿಸಲಾಗಿದೆ ತಿಳಿಸಿದೆ.

ವಿವಾಹವಾಗುವುದೇ ಸ್ಯಾಂಟ್ರೊ ರವಿ ಚಾಳಿ

ಫಾರ್ಮ್‍ನಲ್ಲಿ 5,000 ಕ್ಕೂ ಹೆಚ್ಚು ಕೋಳಿಗಳಿದ್ದು, ಅವುಗಳಲ್ಲಿ 1,800 ಸೋಂಕಿನಿಂದ ಇದುವರೆಗೆ ಸಾವನ್ನಪ್ಪಿವೆ.
ಮುಂದಿನ ಕಾರ್ಯವಿಧಾನಗಳ ಅನ್ವಯ ಜಿಲ್ಲೆಯ ಅಧಿಕಾರಿಗಳು ವಿವಿಧ ಸರ್ಕಾರಿ ಇಲಾಖೆಗಳ ಸಮನ್ವಯದೊಂದಿಗೆ ವಿವಿಧ ಫಾರಂಗಳಿಗೆ ಭೇಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

Bird flu, outbreak, Kerala, 1800 birds dead,

Articles You Might Like

Share This Article