ಕೊಟ್ಟಾಯಂ,ಜ.14- ಕಾನ್ವೆಂಟ್ ಒಂದರಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ರೋಮನ್ ಕ್ಯಾಥೋಲಿಕ್ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಕೇರಳದ ನ್ಯಾಯಾಲಯ ಖುಲಾಸೆಗೊಳಿಸಿದೆ.
ಆರೋಪಿಯ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿದ ಎರಡನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬಿಷಪ್‍ರನ್ನು ಆರೋಪಮುಕ್ತಗೊಳಿಸಿತು.
57 ವರ್ಷದ ಮುಲಕ್ಕಲ್ ಅವರು ಜಿಲ್ಲೆಯ ಕಾನ್ವೆಂಟ್ ಒಂದಕ್ಕೆ ಭೇಟಿ ನೀಡಿದಾಗ ಸನ್ಯಾಸಿನಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪ ವ್ಯಕ್ತವಾಗಿತ್ತು. ಆಗ ಅವರು ಜಲಂಧರ್ ರೋಮನ್ ಕ್ಯಾಥೋಲಿಕ್ ಚರ್ಚ್‍ನ ಡಯೋಸಿಸ್‍ನ ಬಿಷಪ್ ಆಗಿದ್ದರು. 2018ರ ಜೂನ್‍ನಲ್ಲಿ ಬಿಷಪ್ ವಿರುದ್ಧ ಸನ್ಯಾಸಿನಿ ದೂರು ನೀಡಿದ ಮೇರೆಗೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
