ನಡುರಸ್ತೆಯಲ್ಲೇ ಶಾಲಾ ವಿದ್ಯಾರ್ಥಿನಿಯರ ಬಡಿದಾಟ

Spread the love

ಬೆಂಗಳೂರು, ಮೇ 18- ನಗರದ ಎರಡು ಪ್ರತಿಷ್ಠಿತ ಶಾಲಾ ವಿದ್ಯಾರ್ಥಿನಿಯರು ನಡು ರಸ್ತೆಯಲ್ಲೇ ಬಡಿದಾಡಿಕೊಂಡಿದ್ದಾರೆ. ಸೆಂಟ್‍ಮಾಕ್ರ್ಸ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಸಮವಸ್ತ್ರದಲ್ಲಿದ್ದ ಸುಮಾರು 20 ವಿದ್ಯಾರ್ಥಿನಿಯರು ಕೈ-ಕೈ ಮಿಲಾಯಿಸಿಕೊಂಡು ಜಡೆ ಎಳೆದು ಹೊಡೆದಾಡಿದ್ದಾರೆ.

ಯಾವ ವಿಷಯಕ್ಕೆ ವಿದ್ಯಾರ್ಥಿನಿಯರು ಜಗಳ ಮಾಡಿಕೊಂಡರು ಎಂಬುದು ಸಧ್ಯಕ್ಕೆ ತಿಳಿದು ಬಂದಿಲ್ಲ. ಘಟನೆ ಬಗ್ಗೆ ಇದುವರೆಗೂ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ಯಾರೂ ದೂರು ಕೊಟ್ಟಿಲ್ಲ.

Facebook Comments