ವಿಧಾನಪರಿಷತ್ ನಲ್ಲಿ ಬಿಟ್ ಕಾಯಿನ್ ವಿಚಾರ ಪ್ರಸ್ತಾಪ

Social Share

ಬೆಂಗಳೂರು, ಮಾ.7- ಬಹಳ ದಿನಗಳ ನಂತರ ವಿಧಾನ ಪರಿಷತ್ ನಲ್ಲಿ ಬಹುಕೋಟಿ ಹಗರಣ ಬಿಟ್‍ ಕಾಯಿನ್ ಪ್ರಸ್ತಾಪವಾಯಿತು. ಬೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ, ಸಾರ್ವಜನಿಕ ಮಹತ್ವ ವಿಷಯದಡಿ ಕಾಂಗ್ರೆಸ್‍ ಸದಸ್ಯ ಯು.ಬಿ.ವೆಂಕಟೇಶ್‍ ಅವರು ಬಿಟ್ ಕಾಯಿನ್ ಹಗರಣ ಕುರಿತು ಆಗಿರುವ ತನಿಖೆ ಪ್ರಗತಿ ಹಾಗೂ ಬೆಳವಣಿಗೆಗಳ ಬಗ್ಗೆ ಮಾಹಿತಿ ಬಯಸಿದರು.
ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‍, ಆಡಳಿತ ಪಕ್ಷದ ಆಯನೂರು ಮಂಜುನಾಥ್, ತೇಜೆಶ್ವಿನಿಗೌಡ ಮತ್ತಿತರರು ಮಾತನಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಅರಗಜ್ಞಾನೇಂದ್ರ, ಬಿಟ್‍ ಕಾಯಿನ್‍ ಹಾಗೂ ರಾಜ್ಯ ಸರ್ಕಾರದ ಇ-ಪೋರ್ಟಲ್ ಹ್ಯಾಕ್‍ ಪ್ರಕರಣವನ್ನು ರಾಜ್ಯದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳು ಆರೋಪ ಮಾಡುವಂತೆ ಹಗರಣದಲ್ಲಿ ಐಪಿಗಳು, ಐಪಿಎಸ್‍ ಅಧಿಕಾರಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಭಾಪತಿ ಅವರಿಗೆ ಕೊಡಿ, ಅದನ್ನು ಆಧರಿಸಿ ನಾವು ತಕ್ಷಣ ತನಿಖೆ ಮಾಡಿಸುತ್ತೇವೆ ಎಂದರು.
ಸರ್ಕಾರ ಇ-ಪೋರ್ಟಲ್ ಹ್ಯಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಧ್ಯ ಇರುವ ಎಲ್ಲಾ ಸೆಕ್ಷನ್‍ಗಳ ಅಡಿ ಆರೋಪಿ ಶ್ರೀಕಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರೀಕಿ ತಂದೆ ತಾಯಿ ಮೇಲೆ ಕೇಸು ದಾಖಲಿಸಿ ತನಿಖೆಯ ಹೆಸರಿನಲ್ಲಿ ಕಿರುಕುಳ ನೀಡುವುದು ಸರಿಯಲ್ಲ. ಅವರು ಅಮಾಯಕರಿದ್ದಾರೆ.
ಹ್ಯಾಕಿಂಗ್ ಮಾಡಿದ ಹಣವನ್ನು 36 ಎನ್‍ಜಿಒಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ 17 ಜನರನ್ನು ಬಂಧಿಸಲಾಗಿದೆ. ಹಗರಣದಲ್ಲಿ ಭಾಗಿಯಾದ ಯಾರನ್ನು ಬಿಡುವುದಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪ್ರಯತ್ನಿಸಲಾಗುವುದು. ಬಿಟ್ ಕಾಯಿನ್ ಹಗರಣ 2017ನೇ ಸಾಲಿಗೆ ಮುಗಿದು ಹೋಗುತ್ತದೆ. ಅನಂತರ ಬೇರೆ ಬೇರೆ ಬೆಳವಣಿಗೆಗಳಾಗಿವೆ. ಈ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸುತ್ತೇವೆ ಎಂದರು.
ನಾನು ಮೃಧುವಾಗಿ ಮಾತನಾಡುತ್ತೇನೆ ಎಂದು ಶ್ರೀಕಂಠೇಗೌಡರು ಹೇಳಿದ್ದಾರೆ, ನಾನು ಮಂಡ್ಯದಲ್ಲಿ ಹುಟ್ಟಿದ ಗೌಡ ಅಲ್ಲ, ಮಲೆನಾಡಿನಲ್ಲಿ ಹುಟ್ಟಿದ ಗೌಡ, ಅವರಷ್ಟು ಒರಟುತನದಲ್ಲಿ ಮಾತನಾಡಲು ಬರಲ್ಲ ಎಂದರು.

Articles You Might Like

Share This Article