ಚುನಾವಣೆಗೆ ಬಿಜೆಪಿ ತಯಾರಿ: ಪ್ರಣಾಳಿಕೆ, ಪ್ರಚಾರಕ್ಕಾಗಿ ಉಸ್ತುವಾರಿಗಳ ನೇಮಕ

Social Share

ಬೆಂಗಳೂರು,ಫೆ.8- ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಆಡಳಿತಾರೂಢ ಬಿಜೆಪಿ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ, ಜಿಲ್ಲಾ ಮೋರ್ಚಾ, ಫಲಾನುಭವಿಗಳ ಸಮ್ಮೇಳನ, ಯಾತ್ರ ಪ್ರಮುಖ್ ಸೇರಿದಂತೆ ಮತ್ತಿತರ ಸಮಿತಿಗಳಿಗೆ ನೇಮಕ ಮಾಡಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು, ಸಚಿವರು, ಶಾಸಕರು, ವಿಧಾನಸಭಾ ಸದಸ್ಯರು ಹಾಗೂ ಪದಾಕಾರಿಗಳನ್ನೊಳಗೊಂಡ ಸಮಿತಿಗಳನ್ನು ನೇಮಿಸಿದ್ದಾರೆ. ಯಾತ್ರಾ ಪ್ರಮುಖ್‍ಗೆ ಸಚಿವ ಸಿ.ಸಿ.ಪಾಟೀಲ್, ವಿಧಾನಪರಿಷತ್ ಸದಸ್ಯ ರವಿಕುಮಾರ್ ಹಾಗು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರನ್ನು ನೇಮಿಸಿದೆ.

ಯಾತ್ರೆ 1ಗೆ ಎಂ.ರಾಜೇಂದ್ರ ಸಂಚಾಲಕರು, ಎಂ.ದತ್ತಾತ್ರಿ, ಕಿಶೋರ್ ಅವರನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ. ಯಾತ್ರೆ 2ಕ್ಕೆ ಸಂಚಾಲಕರಾಗಿ ಛಲವಾದಿ ನಾರಾಯಣಸ್ವಾಮಿ ಹಾಗೂ ಸಚ್ಚಿದಾನಂದಮೂರ್ತಿ, ಅ.ದೇವೇಗೌಡ ಅವರು ಸಹಸಂಚಲಾಕರಾಗಿದ್ದಾರೆ.

ಮತ್ತೆ ರೆಪೊ ದರ ಏರಿಸಿದ ಆರ್‌ಬಿಐ, ಹೆಚ್ಚಾಗಲಿದೆ ಬ್ಯಾಂಕ್ ಬಡ್ಡಿ

ಯಾತ್ರೆ 3ಕ್ಕೆ ಅರುಣ್ ಶಹಾಪುರ ಸಂಚಾಲಕರು ಹಾಗೂ ವಿವೇಕಾನಂದ ಡಬ್ಬಿ, ಮತ್ತು ಮಲ್ಲಿಕಾರ್ಜುನ ಬಾಳೆಕಾಯಿ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ. ಯಾತ್ರೆ 4ಕ್ಕೆ ರಘುನಾಥರಾವ್ ಮಲ್ಕಾಪುರೆ ಸಂಚಾಲಕರು, ಅಮರನಾಥ್ ಪಾಟೀಲ್ ಮತ್ತು ಸಿದ್ದೇಶ್ ಯಾದವ್ ಅವರುಗಳನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.

ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಸಂಚಾಲಕರಾಗಿ ಬಿ.ವೈ.ವಿಜಯೇಂದ್ರ, ಸಹಸಂಚಾಲಕರಾಗಿ ಜಗದೀಶ್ ಹೀರೇಮನಿ ಮತ್ತು ಯಶಪಾಲ್ ಸುವರ್ಣ ಅವರನ್ನು ನೇಮಿಸಲಾಗಿದೆ. ಸದಸ್ಯರಾಗಿ ಈರಣ್ಣ ಕಡಾಡಿ, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ, ನರೇಂದ್ರಬಾಬು,ತಿಪ್ಪರಾಜು ಹವಾಲ್ದಾರ್, ಸಂದೀಪ್‍ಕುಮಾರ್ ಹಾಗೂ ಸಯ್ಯದ್ ಸಲಾಂ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಸರ್ಕಾರಿ ಖರ್ಚಿನಲ್ಲಿ ಹಿಂದುತ್ವದ ಶಂಖನಾದ ಊದಿದರೆ ಸುನಿಲ್ ಕುಮಾರ್?

ಫಲಾನುಭವಿಗಳ ಸಮ್ಮೇಳನಕ್ಕೆ ಸಚಿವ ಆಚಾರ್ ಹಾಲಪ್ಪ ಸಂಚಾಲಕರಾದರೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ಶಾಸಕ ಪಿ.ರಾಜೀವ್ ಅವರನ್ನು ಸಹಸಂಚಾಲಕರನ್ನಾಗಿ, ಸದಸ್ಯರಾಗಿ ವೈ.ಎ.ನಾರಾಯಣಸ್ವಾಮಿ, ಪಿ.ಮುನಿರಾಜು ಗೌಡ, ಹೇಮಲತಾ ನಾಯಕ್ ಮತ್ತು ಜಯತೀರ್ಥ ಕಟ್ಟಿ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ವಿಡಿಯೋ ವ್ಯಾನ್ ಪ್ರಚಾರಕ್ಕೆ ಎಸ್.ವಿ.ರಾಘವೇಂದ್ರ ಸಂಚಾಲಕರಾಗಿ, ಪ್ರೇಮಾನಂದ ಶೆಟ್ಟಿ ಭಾರತಿ ಮದ್ಗುಲ್ ಹಾಗೂ ಅಜಿತ್ ಹೆಗಡೆ ಬೆಳ್ಳಿಕೇರಿ ಅವರನ್ನು ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ.

ಚುನಾವಣಾ ತಯಾರಿಕಾ ಸಲಹಾ ಅಭಿಯಾನದ ಸಂಚಾಲಕರಾಗಿ ಡಾ.ಕೆ.ಸುಧಾಕರ್, ಸಹ ಸಂಚಾಲಕರಾಗಿ ಬಿ.ಸಿ.ನಾಗೇಶ್, ತೇಜಸ್ವಿನಿ ಅನಂತಕುಮಾರ್, ತೇಜಸ್ವಿ ಸೂರ್ಯ, ಎಸ್.ಸುರೇಶ್‍ಕುಮಾರ್, ಅಭಯ್ ಪಾಟೀಲ್, ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್, ಎನ್.ಮಹೇಶ್, ಪಿ.ರಾಜೀವ್, ಕೆ.ಎಸ್.ನವೀನ್, ಸಮೀರ್ ಕಾಗಲ್ಕರ್, ಡಾ.ಪ್ರಕಾಶ್, ರವೀಂದ್ರ ಪೈ, ವಿಶ್ವನಾಥ್ ಭಟ್ ಮತ್ತು ಮಾಳವಿಕ ಅವಿನಾಶ್ ಅವರನ್ನು ಬಿಜೆಪಿ ನೇಮಿಸಿದೆ.

BJP, Assembly election, manifesto, campaign, committees,

Articles You Might Like

Share This Article