ಬೆಂಗಳೂರು,ಫೆ.24- ಯಾವುದೇ ಕಾರಣಕ್ಕೂ ನಾನು ಮನೆಯಲ್ಲೇ ಕೂರುವ ಪ್ರಶ್ನೆಯೇ ಇಲ್ಲ. ನಾಳೆಯಿಂದಲೇ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ವಾದ ಮಾಡಿದರು.
15ನೇ ವಿಧಾನಸಭೆಯ ಕೊನೆಯ ದಿನವಾದ ಇಂದು ಅವರು ತಮ್ಮ ವಿದಾಯ ಭಾಷಣ ಮಾಡಿದ ಅವರು, ನಾನು ಈಗಾಗಲೇ ಘೋಷಣೆ ಮಾಡಿದಂತೆ ಮುಂದಿನ ವಿಧಾನಸಭೆ ಚುನಾವಣೆಗೆ ಸ್ರ್ಪಸುವುದಿಲ್ಲ. ಹೀಗಾಗಿ ಮತ್ತೆ ಈ ಸದನಕ್ಕೆ ಆಯ್ಕೆ ಬರುವುದಿಲ್ಲ. ಚುನಾವಣೆಗೆ ರ್ಸಸದಿದ್ದರೂ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುವುದು ನಮ್ಮ ಮುಂದಿನ ಗುರಿಯಾಗಿದೆ.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದರು.
ಶಿಕಾರಿಪುರದಲ್ಲಿ ಪುರಸಭೆ ಸದಸ್ಯನಾಗಿ, ಅಧ್ಯಕ್ಷನಾಗಿ ನಂತರ ನನ್ನ ರಾಜಕೀಯ ಜೀವನವನ್ನು ಆರಂಭಿಸಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಎಲ್ಲಿಯೂ ಹಿಂತಿರುಗಿ ನೋಡಿಲ್ಲ. ಇಬ್ಬರು ಸದಸ್ಯರು ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿ ಬಂದೆವು. ಅದರಲ್ಲಿ ವಸಂತ್ ಬಂಘೇರ ನನ್ನ ಪಕ್ಷ ಬಿಟ್ಟು ಹೋದರು. ಆದರೂ ನಾನು ಧೃತಿಗೆಡದೆ ಪಕ್ಷವನ್ನು ಸಂಘಟಿಸಿದ್ದೇನೆ. ಆ ತೃಪ್ತಿ ನನಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾನು ಇಂದು ಏನೆಲ್ಲ ಆಗಿದ್ದೇನೋ ಅದಕ್ಕೆಲ್ಲಕ್ಕೂ ಆರ್ಎಸ್ಎಸ್ ಕಾರಣ. ಅಲ್ಲಿ ಸಿಕ್ಕ ಅನುಭವ, ಮಾರ್ಗದರ್ಶನ, ಸಹಾಯ ಸಹಕಾರವನ್ನು ಎಂದಿಗೂ ಮರೆಯುವುದಿಲ್ಲ. ನನಗೆ ಅಧಿಕಾರ ಇದ್ದಾಗ ಇಲ್ಲದಿದ್ದಾಗಲೂ ಸಹಾಯ ನೀಡಿದ್ದಾರೆ ಎಂದು ಸ್ಮರಿಸಿದರು.
ನನ್ನ ಜೀವನದ ಕೊನೆಯುಸಿರು ಇರುವವರೆಗೂ ನಾನು ಹೋರಾಟ ಮಾಡುತ್ತಲೇ ಇರುತ್ತೇನೆ. ಅಧಿಕಾರ ಇರಲಿ, ಇಲ್ಲದಿರಲಿ ಎಂದಿಗೂ ಮನೆಯಲ್ಲಿ ಕೂರುವ ಜಾಯಮಾನ ನನ್ನದಲ್ಲ. ಪಕ್ಷ ನನಗೆ ಎಲ್ಲವೂ ಕೊಟ್ಟಿದೆ. ಅತ್ಯಂತ ಸಂತೃಪ್ತಿಯಾಗಿದ್ದೇನೆ. ಶಿಕಾರಿಪುರ ಜನತೆಯ ಆಶೀರ್ವಾದದಿಂದ ಮುಖ್ಯಮಂತ್ರಿಯೂ ಆಗಿದ್ದೆ. ಅವರ ಋಣವನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅವರಿಗೆ ನಾನು ಎಂದಿಂದೆಗೂ ಆಭಾರಿ ಎಂದರು.
ಅಟಲ್ ಬಿಹಾರಿ ವಾಜಪೇಯಿ, ಮುರುಳಿ ಮನೋಹನರ್ ಜೋಷಿ ಅವರಂತರೊಂದಿಗೆ ಪಕ್ಷ ಸಂಘಟಿಸಿದ್ದೇನೆ. ಶಿವಮೊಗ್ಗದಲ್ಲಿ ಬಗರ್ ಹುಕ್ಕಂಗಾಗಿ ಅಹೋರಾತ್ರಿ ಪ್ರತಿಭಟನೆ ನಡೆಸಿದೆ. ಅಲ್ಲಿಂದ ಬೆಂಗಳೂರುವರೆಗೂ ಪಾದಯಾತ್ರೆ ನಡೆಸಿ ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೇನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಈ ಸಮಸ್ಯೆಯನ್ನು ಬಗೆಹರಿಸಿದರು ಎಂದು ತಿಳಿಸಿದರು.
ಶಾಸಕರು ವಿಚಲಿತರಾಗಬೇಡಿ ಮುಂದೆಯೂ ಜನರು ನಿಮ್ಮನ್ನು ಕೈ ಹಿಡಿಯಲಿದ್ದಾರೆ. ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿದೆ. ಯಾರು ಅಪೇಕ್ಷೆ ಪಡುತ್ತಾರೆ ಅಲ್ಲಿಗೆ ಬಂದು ನಾನು ಪ್ರಚಾರ ಪ್ರವಾಸ ಮಾಡುತ್ತೇನೆ.
#AssemblyElection2023, #AssemblyElection, #KarnatakaAssemblyElection, #KarnatakaElections2023, #ವಿಧಾನಸಭೆಚುನಾವಣೆ, #ವಿಧಾನಸಭೆಚುನಾವಣೆ2023, #Yeddyurappa