ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ಜ.2- ರಾಜ್ಯದಲ್ಲಿ ಬಿಜೆಪಿ ನೂರಕ್ಕೆ ನೂರರಷ್ಟು ಮತ್ತೆ ಜನಾದೇಶ ಪಡೆದು ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಸಂತನಗರದ ರಜಪೂತ ಭವನದಲ್ಲಿ ನಡೆದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆ ಮೇಲೆ ನಾವು ಚುನಾವಣೆಗೆ ಹೋಗುತ್ತೇವೆ. ನಮ್ಮ ಕಾರ್ಯಕ್ರಮಗಳನ್ನು ಜನರು ಒಪ್ಪಿರುವುದರಿಂದ ಮುಂದಿನ ಚುನಾವಣೆಯಲ್ಲೂ ನಮ್ಮನ್ನು ಆಶೀರ್ವದಿಸುತ್ತಾರೆ ಎಂದರು.

ರಾಜಕಾರಣದಲ್ಲಿ ಎರಡು ಥರ ಇದೆ. ಒಂದು ಪವರ್ ಪೊಲಿಟಿಕ್ಸ್ ಇನ್ನೊಂದು ಪೀಪಲ್ಸ್ ಪೊಲಿಟಿಕ್ಸ್. ಜನರ ನಡುವೆ ಜಗಳ ಹಚ್ಚಿ ಕಾಂಗ್ರೆಸ್‍ನವರು ಅಧಿಕಾರಕ್ಕೆ ಬರುತ್ತಾರೆ. ಜಜಾತಿ, ಮತ, ಕೋಮು ದ್ವೇಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಮ್ಮದು ಪೀಪಲ್ ಪಾಲಿಟಿಕ್ಸ್ ಜನರಿಂದ ಜನರಿಗೋಸ್ಕರ ರಾಜಕಾರಣ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಜನರಿಗಾಗಿ ಸದಾ ಚಿಂತನೆ ಮಾಡುವ ಕಾರ್ಯಕರ್ತರಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದೆ. ಅವರ ಪಕ್ಷ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಬಿಜೆಪಿ ದೇಶದ ಅಭಿವೃದ್ದಿ ಬಗ್ಗೆ ಚಿಂತನೆ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಾಜಿನಗರ ಕ್ಷೇತ್ರದಿಂದ ನಮ್ಮ ವಿಜಯ ಸಂಕಲ್ಪ ಆರಂಭವಾಗಲಿದೆ. ರಾಷ್ಟ್ರ ಮತ್ತು ರಾಜ್ಯಾಧ್ಯಕ್ಷರ ಸೂಚನೆ ಮೇರೆಗೆ ಬೂತ್ ವಿಜಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿಂದಲೇ ಗೆದ್ದು ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವ ಶಪಥ ಮಾಡಿದರು.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಶಿವಾಜಿನಗರ ಒಂದು ಕಾಲದಲ್ಲಿ ಬಿಜೆಪಿ ಗೆದ್ದಿರುವ ಕ್ಷೇತ್ರ. ಆಗ ಬಿಜೆಪಿ ಇಷ್ಟೊಂದು ಬೆಳೆದಿರಲಿಲ್ಲ. ಆಗ ಕಟ್ಟಾ ಸುಬ್ರಮಣ್ಯ ನಾಯ್ಡು ಗೆಲುವು ಸಾಧಿಸಿದ್ದರು. ನಾವು ಇಲ್ಲಿ ಗೆಲುವು ಸಾಧಿಸಲು ಸ್ವಲ್ಪ ಶ್ರಮ ಹಾಕಬೇಕು. ಇಲ್ಲಿಗೆ ಬೇಕಾದ ಕಾರ್ಯಕ್ರಮಗಳನ್ನು ನೀಡುತ್ತೇನೆ. ಅದಕ್ಕೆ ಬೂತ್ ಸಶಕ್ತಗೊಳಿಸಬೇಕು. ಶಿವಾಜಿನಗರದಲ್ಲಿ ಬಿಜೆಪಿ ಗೆಲ್ಲುತ್ತದೆ ಅಂದರೆ ರಾಜ್ಯದಲ್ಲಿ ,ಬಿಜೆಪಿ 130 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದರು.

ಶಿವಾಜಿನಗರದ 197 ಬೂತ್ ಗಳು ಜಯಶಾಲಿಯಾಗಬೇಕು. ಕಳೆದ ಬಾರಿ 13000 ಮತಗಳಿಂದ ಸೋತಿದ್ದೇವೆ. ಈ ಬಾರಿ 13000 ಮತಗಳ ಅಂತರದಿಂದ ಗೆಲ್ಲುವ ಕಾರ್ಯವಾಗಬೇಕಿದೆ. ಕ್ಷೇತ್ರದಲ್ಲಿ ಗೆಲ್ಲಬೇಕಾದರೆ ನಾವು ಬೂತ್ ಮಟ್ಟದಲ್ಲಿ ಹೆಚ್ಚು ಪ್ರಬಲರಾಗಬೇಕು. ನಿರಂತರವಾಗಿ 3 ತಿಂಗಳು ಮನೆ-ಮನೆ ಅಭಿಯಾನ ಮಾಡಬೇಕು, ಕೇಂದ್ರ- ರಾಜ್ಯ ಸರ್ಕಾರದ ಯೋಜನೆಗಳು, ಕಾಂಗ್ರೆಸ್ ಜನ ವಿರೋಧಿ ಕೆಲಸಗಳನ್ನು ಜನರಿಗೆ ಮನವರಿಕೆ ಮಾಡಬೇಕಿದೆ ಎಂದರು.

ಕಾಂಗ್ರೆಸ್ 10 ವರ್ಷ ಕೇಂದ್ರದಲ್ಲಿ ಅಧಿಕಾರ ಮಾಡಿ ಒಂದು ನಯಾಪೈಸೆ ಯೋಜನೆ ಕೊಡಲಿಲ್ಲ. ನಾವು ಸ್ಮಾರ್ಟ್ ಸಿಟಿ ಯೋಜನೆ ಕೊಟ್ಟಿದ್ದೇವೆ, ಬೆಂಗಳೂರನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಶಿವಾಜಿನಗರ ಒಂದು ಸ್ಲಮ್ ಆಗಿ ಇಟ್ಕೊಂಡಿದ್ದರು ಈಗ ನಾವು ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.

ನಮ್ಮ ಸರ್ಕಾರ ಬಂದಮೇಲೆ ಬೆಂಗಳೂರಿಗೆ ಕೋಟ್ಯಾಂತರ ರೂ. ಅನುದಾನ ಕೊಟ್ಟಿದ್ದೇವೆ. ಕಾಂಗ್ರೆಸ್ ಆಡಳಿತದಲ್ಲಿ ನೆನೆಗುದಿಗೆ ಬಿದ್ದಿದ್ದ ಎಲ್ಲಾ ಕೆಲಸ ಮಾಡುತ್ತಿದ್ದೇವೆ. ಮೆಟ್ರೋ ಸೆಕೆಂಡ್ ಫೇಸ್ 2024 ರ ಒಳಗೆ ಮುಗಿಸುವಂತೆ ಹೇಳಿದ್ದೇವೆ, 3ಡಿಜ ಪೇಸ್ ಗೆ ಸಂಪುಟ ಅನುಮೋದನೆ ಕೊಟ್ಟಿದ್ದೇವೆ. ಸಬ್ ಅರ್ಬನ್ ಟ್ರೈನ್ ಗೆ ಚಾಲನೆ ಕೊಟ್ಟಿದ್ದೇನೆ. ಬೆಂಗಳೂರಿಗೆ 5ನೇ ಹಂತದ ಕಾವೇರಿ ನೀರು ತರುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ರಾಜ್ಯಾದ್ಯಂತ ಅಭಿಯಾನ:
ಪಕ್ಷವನ್ನು ಬೇರು ಮಟ್ಟದಿಂದ ಬಲವರ್ಧನೆಗೊಳಿಸಿ 150 ಸ್ಥಾನ ಗಳಿಸುವ ಬಿಜೆಪಿಯ ಬೂತ್ ವಿಜಯ ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರು ತವರು ಜಿಲ್ಲೆ ಮಂಗಳೂರಿನಲ್ಲಿ ಚಾಲನೆ ಕೊಟ್ಟರು.

ಇಂದಿನಿಂದ ಜ.12ರವರೆಗೆ ರಾಜ್ಯಾದ್ಯಂತ 39 ಸಂಘಟನೆ ಜಿಲ್ಲೆಗಳು, 312 ಮಂಡಲಗಳು, 1145 ಮಹಾಶಕ್ತಿ ಕೇಂದ್ರ, 11642 ಶಕ್ತಿಕೇಂದ್ರ ಹಾಗೂ 58,186 ಮತಗಟ್ಟೆಗಳಲ್ಲಿ ಅಭಿಯಾನ ನಡೆಯಲಿದೆ.

ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

ಇದೇ ರೀತಿ ಬೇರೆ ಬೇರೆ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕೇಂದ್ರ ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ಜಿಲ್ಲಾಧ್ಯಕ್ಷರು ಸೇರಿದಂತೆ ಮತ್ತಿತರರು ತಮ್ಮ ತಮ್ಮ ಮನೆಗಳು, ಕಚೇರಿಗಳ ಮೇಲೆ ಪಕ್ಷದ ಬಾವುಟ ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು , ಶಾಸಕರು, ಪದಾಕಾರಿಗಳು ಸೇರಿದಂತೆ 20 ಲಕ್ಷ ಕಾರ್ಯಕರ್ತರು ಭಾಗವಹಿಸುವರು. ಮತಗಟ್ಟೆ ಹಂತದ ಸಮಿತಿ, ಪೇಜ್ ಪ್ರಮುಖರ ನೀತಿ, ವಾಟ್ಸಪ್ ಗುಂಪು ರಚನೆ, ಮನ್ ಕೀ ಬಾತ್ ವೀಕ್ಷಣೆಗೆ 60 ಸಾವಿರ ಗುಂಪುಗಳ ರಚನೆ ಸೇರಿದಂತೆ 50 ಲಕ್ಷ ಮನೆಗಳ ಮೇಲೆ ಪಕ್ಷದ ಧ್ವಜ ಹಾರಿಸುವ ಕಾರ್ಯಕ್ರಮ ಇದಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಗೆ ಉದ್ದೇಶಿತ 150 ಸ್ಥಾನ ಗೆಲ್ಲಲು ಪ್ರೇರಣೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

BJP, booth vijay, campaign, CM Bommai,

Articles You Might Like

Share This Article