ಬಿಜೆಪಿ ಬಿ-ರಿಪೋರ್ಟ್, ಭರವಸೆಗಳ ಸರ್ಕಾರ : ಡಿಕೆಶಿ

Social Share

ಹುಬ್ಬಳ್ಳಿ,ಜ.19- ರಾಜ್ಯ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳಲ್ಲಿ ಬರೀ ಭರವಸೆಗಳನ್ನೇ ನೀಡಿದೆ. ಇದು ಬಿ- ರಿಪೋರ್ಟ್ ಮತ್ತು ಭರವಸೆಗಳ ಸರ್ಕಾರವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಟೀಕಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಭ್ರಷ್ಟಾಚಾರ, ಹಗರಣಗಳು ನಡೆದಿವೆ. ಪಿಎಸ್‍ಐ ನೇಮಕಾತಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರತಿಯೊಂದು ಕಾಮಗಾರಿಯಲ್ಲಿ ಕಮಿಷನ್ ದಂಧೆ ನಡೆಸುತ್ತಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಪತ್ರಕ್ಕೆ ಉತ್ತರಿಸಿಲ್ಲ. ಬೆಲೆ ಏರಿಕೆ ಏಕೆ ಇಳಿಸಲಿಲ್ಲ? ಯತ್ನಾಳ, ನಿರಾಣಿ ಅವರ ಹೇಳಿಕೆಗಳಿಗೆ ಪ್ರಧಾನಿ ಮೋದಿ ಉತ್ತರ ಕೊಟ್ಟರೆ ಒಳ್ಳೆಯದು ಎಂದರು.

ಕೋರೆಗಾಂವ್-ಭೀಮಾ ಹಿಂಸಾಚಾರ ತನಿಖಾ ಆಯೋಗದ ಅಧಿಕಾರವಧಿ ವಿಸ್ತರಣೆ

ಚುನಾವಣೆ ಬಂದಿದೆ ಎಂದು ಮೋದಿಯವರು ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳು ತಾಂಡವಾಡುತ್ತಿವೆ. ಲಂಬಾಣಿ ಜನಕ್ಕೆ ಹಕ್ಕುಪತ್ರ ನೀಡಲು ಮೋದಿ ಬಂದಿದ್ದಾರೆ. ಇದರಲ್ಲಿ ಏನೂ ವಿಶೇಷವಿಲ್ಲ ಎಂದರು.

ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಕನಿಕರ ಬಂದಿದೆ. ಹುಬ್ಬಳ್ಳಿ, ಬೆಂಗಳೂರು, ಶಿವಮೊಗ್ಗ, ಮಂಗಳೂರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದವರು, ಅವರ ಮೇಲೆ ಹಾಕಬಾರದ ಕೇಸ್ ಹಾಕಿ ಅಮಾಯಕರನ್ನು ಜೈಲಿಗೆ ಅಟ್ಟಿದವರು ಇವರು. ಬೇರೆಯವರಿಗೆ ತೊಂದರೆ ಕೊಟ್ಟು ಜೈಲಿಗೆ ಅಟ್ಟುವುದೇ ಅವರ ದೊಡ್ಡ ಸಾಧನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

BJP, BReport, Government, KPCC, President, DK Shivakumar,

Articles You Might Like

Share This Article