ಬೆಂಗಳೂರು,ಜ.9- ಪಿಎಸ್ಐ ಹಗರಣದಲ್ಲಿ ಬಂಧಿತರಾಗಿ ಜಾಮೀನು ಪಡೆದು ಹೊರ ಬಂದ ಆರೋಪಿಗಳಿಗೆ ಭವ್ಯ ಸ್ವಾಗತ ನೀಡುವ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ಹೊರಬಂದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕೆಲ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಫೋ ಮಾಡಿರುವ ಕಾಂಗ್ರೆಸ್, ಸರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ ಪಿಎಸ್ಐ ಹಗರಣದ ಆರೋಪಿಗಳಿಗೆ ಬಿಜೆಪಿ ಕಾರ್ಯಕರ್ತರಿಂದ ಭವ್ಯ ಸ್ವಾಗತ ಕೋರಿದ್ದಾರೆ. ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು ಎಂದರು.
ಸರ್ಕಾರದ ಸಹಕಾರದಿಂದ ಜಾಮೀನು ಪಡೆದು ಬಂದ PSI ಆರೋಪಿಗಳಿಗೆ @BJP4Karnataka ಕಾರ್ಯಕರ್ತರಿಂದ ಭವ್ಯ ಸ್ವಾಗತ.
ಭವಿಷ್ಯ ಕಳೆದುಕೊಂಡು ನೊಂದಿರುವ 56 ಸಾವಿರ ಅಭ್ಯರ್ಥಿಗಳನ್ನು ಅಣಕಿಸುವ ಚಿತ್ರವಿದು.
ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು.
ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು. pic.twitter.com/Q45ZuWl42O
— Karnataka Congress (@INCKarnataka) January 9, 2023
ಬಿಜೆಪಿ ಸರ್ಕಾರದ ಭ್ರಷ್ಟಸ್ನೇಹಿ ನೀತಿಯನ್ನು ತೆರೆದಿಡುವ ಚಿತ್ರವಿದು. ಬಿಜೆಪಿಯ ನೀತಿಗೆಟ್ಟ ಆಡಳಿತಕ್ಕೆ ಕನ್ನಡಿಯಾದ ಚಿತ್ರವಿದು ಎಂದು ಆಕ್ರೋಶ ವ್ಯಕ್ತಪಡಿಸಿದೆ. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿದೆ ಎಂದಿದೆ.
ಅಖಾಡ ಆಯ್ದುಕೊಂಡ ಟಗರು, ಕೋಲಾರದಲ್ಲೇ ಸಿದ್ದರಾಮಯ್ಯ ಸ್ಪರ್ಧೆ
ಕರ್ನಾಟಕದ ಸುಬ್ರಹ್ಮಣ್ಯ ಸ್ವಾಮಿಯಾದ ಯತ್ನಾಳ್ ಸಿಡಿ ಬ್ಲಾಕ್ಮೇಲ್ ಮಾಡಿ ನಿರಾಣಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ. ಯಾರ ಸಿಡಿ? ಸಿಡಿ ಮಾಡಿಕೊಟ್ಟಿದ್ದು ಸ್ಯಾಂಟ್ರೋ ರವಿಯೇ? ನಿರಾಣಿ ಹಣ ಕೊಟ್ಟಿದ್ದು ಯಾರಿಗೆ? ಆ ಹಣದ ಬಗ್ಗೆ ಇಡಿ ತನಿಖೆ ಏಕಿಲ್ಲ ? ಈ ಎಲ್ಲಾ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕಿದೆ ಎಂದು ಆಗ್ರಹಿಸಿದೆ.
ಇನ್ನೂ ಬಿಜೆಪಿ ಪ್ರಣಾಳಿಕೆ ಕುರಿತು ಟೀಕೆ ಮಾಡಿರುವ ಕಾಂಗ್ರೆಸ್, ಚುನಾವಣೆಗೂ ಮೊದಲು ರೈತರ ಬೆಂಬಲಕ್ಕಾಗಿ ರೈತ ಬಂಧು ಅವರ್ತ ನಿ ಸ್ಥಾಪಿಸುತ್ತೇವೆ ಎಂದು ಬಿಜೆಪಿ ಹೇಳಿತ್ತು. ಅವರ್ತ ನಿಧಿ ಇರಲಿ, ನೆರೆ ಪರಿಹಾರವನ್ನೇ ನೀಡಿಲ್ಲ, ಬೆಂಬಲ ಬೆಲೆ ಕೊಟ್ಟಿಲ್ಲ, ಸಬ್ಸಿಡಿ ಕಡಿತಗೊಳಿಸಲಾಗುತ್ತಿದೆ. ಕಬ್ಬಿನ ಬಾಕಿ ಕೊಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ರೈತರಿಗೆ ನಿ ಸ್ಥಾಪಿಸುವ ಬದಲು ಬಿಜೆಪಿ ಪೇ ಸಿಎಂ ನಿ ಸಂಗ್ರಹ ನಡೆಸುತ್ತಿದೆ ಎಂದು ಆರೋಪಿಸಿದೆ.
BJP, corrupt, friendly, policy, Congress,