ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ : ಸಿ.ಟಿ.ರವಿ

Social Share

ಬೆಂಗಳೂರು,ಜ.13- ಜನಸಂಖ್ಯೆಗೆ ಅನುಗುಣವಾಗಿ ಪ್ರತಿಯೊಂದು ಸಮುದಾಯಕ್ಕೂ ನಮ್ಮ ಸರ್ಕಾರ ಮೀಸಲಾತಿ ಕೊಡಲು ಬದ್ದವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಕ್ಕೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಹೆಚ್ಚಳ ಮಾಡುವ ಸಂಬಂಧ ಸಚಿವ ಸಂಪುಟದ ತೀರ್ಮಾನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲಯಕ್ಕೆ ನಮ್ಮ ಸರ್ಕಾರ ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂಬುದು ಸರ್ಕಾರದ ಒತ್ತಾಸೆಯಾಗಿದೆ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ಕೊಡುತ್ತೇವೆ. ಸಮುದಾಯದವರ ಅಪೇಕ್ಷೆ ಏನಿದೆ ಅದಕ್ಕೆ ತಕ್ಕಂತೆ ಕೊಟ್ಟಿದ್ದೇವೆ ಎಂಬುದನ್ನು ಸರ್ಕಾರ ಮನವರಿಕೆ ಮಾಡಿಕೊಡುತ್ತದೆ ಎಂದರು.

ಹಸಿದವರಿಗೆ ಊಟ ಬೇಕು. ಎಲೆಯಲ್ಲಿ ಕೊಡುತ್ತೀರೋ ತಟ್ಟೆಯಲ್ಲಿ ಕೊಡುತ್ತೀರೋ ಎಂದು ಹಸಿದವರು ಕೇಳುವುದಿಲ್ಲ. ಆ ವರ್ಗದ ಯಾರಿಗೆ ಮೀಸಲಾತಿ ಬೇಕೋ ಅವರಿಗೆ ಯಾವ ಕಡೆಯಿಂದ ಕೊಟ್ಟರೂ ತೆಗೆದುಕೊಳ್ಳುತ್ತಾರೆ. ತಟ್ಟೆಯಲ್ಲಿ ಬಡಿಸಿಕೊಟ್ಟರೂ ತೆಗೆದುಕೊಳ್ಳುತ್ತಾರೆ, ಬಾಳೆಎಲೆಯಲ್ಲಿ ಬಡಿಸಿಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.

ಆದಿಯೋಗಿ ಪ್ರತಿಮೆ ಉದ್ಘಾಟನೆಗೆ ಹೈಕೋರ್ಟ್ ಹಸಿರು ನಿಶಾನೆ

ಆಯಾ ಸಮುದಾಯಗಳಿಗೆ ಊಟ ಬಡಿಸಿ ಮೀಸಲಾತಿ ಕೊಡುವುದು ಮುಖ್ಯ. ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ.

ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಲ್ಕು ದಶಕಗಳ ರಾಜಕಾರಣದಲ್ಲಿ ತವರು ಜಿಲ್ಲೆ ಮೈಸೂರಿನಲ್ಲೇ ನಿಂತು ಗೆಲ್ಲುವ ವಿಶ್ವಾಸ ಅವರಿಗಿಲ್ಲ. ಬಾದಾಮಿಯಲ್ಲಿ ಮತ್ತೆ ಗೆದ್ದು ಬರುವ ವಿಶ್ವಾಸವಿಲ್ಲ. ವಿಶ್ವಾಸ ಇದ್ದಿದ್ದರೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ನಿಂತು ಗೆಲ್ಲುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರಿಗೆ ಈ ಎರಡು ಕಡೆಗಳಿಂದಲೂ ಸೋಲುವ ಭೀತಿ ಇರುವುದರಿಂದ ಕೋಲಾರದಲ್ಲಿ ಸ್ರ್ಪಧಿಸುತ್ತಿದ್ದಾರೆ. ಅವರದ್ದು ನೀತಿಯ ನಡುವಿನ ಹೋರಾಟ ಹಾಗೂ ಓಲೈಕೆ ರಾಜನೀತಿ, ಪಿಎಫ್‍ಐ-ಎಸ್‍ಡಿಪಿಐ ಓಲೈಕೆ ಮಾಡುತ್ತಾರೆ. ಹೀಗಾಗಿ ಅವರ ವಿರುದ್ಧ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸವಾಲನ್ನು ಕೋಲಾರದ ಜನ ಸ್ವೀಕಾರ ಮಾಡುತ್ತಾರೆ, ನಾನು ಸ್ವೀಕಾರ ಮಾಡುವುದಿಲ್ಲ. ಇದು ನೀತಿಯ ನಡುವಿನ ಯುದ್ಧ. ಇದು ವ್ಯಕ್ತಿಗತವಾದ ಸಿದ್ದರಾಮಯ್ಯ ಹೋರಾಟ ಅಲ್ಲ. ನೋಡೋಣ ಏನಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ರೌಡಿಶೀಟರ್ ಸ್ಯಾಂಟ್ರೋ ರವಿ ಬಂಧನ ವಿಳಂಬ ವಿಚಾರವಾಗಿ ಮಾತನಾಡಿದ ಸಿ.ಟಿ.ರವಿ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನಿಗೆ ಯಾರೂ ಅತೀತರಲ್ಲ. ಪೊಲೀಸ್ ನೇಮಕಾತಿ ಅಕ್ರಮದ ವೇಳೆಯೂ ಇದೇ ಪ್ರಶ್ನೆಯನ್ನು ಎದುರಾಗಿತ್ತು. ಈಗ ಪ್ರಶ್ನಿಸಿದವರು ಬಾಯಿ ಮುಚ್ಕೊಂಡಿದ್ದಾರೆ. ಹಾಗೇ ಇದಕ್ಕೂ ಒಂದು ದಿನ ಬಾಯಿ ಮುಚ್ಕೋಬೇಕಾಗುತ್ತದೆ ಎಂದರು.

ಸ್ಯಾಂಟ್ರೋ ರವಿ ಎಷ್ಟು ದಿನ ತಲೆ ಮರೆಸಿಕೊಂಡು ಓಡಾಡೋಕ್ಕಾಗುತ್ತದೆ? ಹಿಡಿಲೇಬೇಕಾಗುತ್ತದೆ. ಪೊಲೀಸರು ಹಿಡಿದೇ ಹಿಡೀತಾರೆ ಎಂದು ಹೇಳೀದರು.

ಹೈದ್ರಾಬಾದ್ ತಜ್ಞರ ಭೇಟಿ, ಮೆಟ್ರೋ ದುರಂತ ಮುಚ್ಚಿಹಾಕಲು ನಡೆದಿದೆಯಾ ಯತ್ನ..?

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಿರಿಯ ನಾಯಕರು. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬೇರೆ ಬೇರೆ ಕಾರಣಗಳಿಂದ ವ್ಯತ್ಯಾಸವಾಗಿರಬಹುದು. ವೇದಿಕೆಯಲ್ಲಿ ಯಾರು ಇರಬೇಕು ಎಂಬುದನ್ನು ಪ್ರಧಾನಿ ಕಾರ್ಯಾಲಯ ನಿರ್ಧರಿಸುತ್ತದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

BJP, CT Ravi, Reservation, community, population,

Articles You Might Like

Share This Article