ದ್ವೇಷ ಬಿತ್ತುವುದು ಬಿಜೆಪಿ ಅಜೆಂಡಾ : ಡಿಕೆಶಿ

Social Share

ಬೆಂಗಳೂರು,ಜ.4- ಸಮಾಜದಲ್ಲಿ ಶಾಂತಿ ಕದಡುವುದು, ದ್ವೇಷ ಬಿತ್ತುವುದು ಬಿಜೆಪಿಯ ಅಜೆಂಡಾವಾಗಿದ್ದು, ಅಭಿವೃದ್ಧಿಗೆ ಪೂರಕವಾದ ಚರ್ಚೆಗಳನ್ನು ಆ ಪಕ್ಷದ ನಾಯಕರು ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಭಿವೃದ್ಧಿಯ ಅಜೆಂಡಾವನ್ನು ಪ್ರತಿಪಾದನೆ ಮಾಡುತ್ತದೆ. ಹಸಿದವರ ಹೊಟ್ಟೆಗೆ ಅನ್ನು ನೀಡುವುದು, ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ನಮ್ಮ ಉದ್ದೇಶ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಭಿವೃದ್ಧಿಗೆ ತಲೆ ಕೆಡಿಸಿಕೊಳ್ಳಬೇಡಿ. ಲವ್ ಜಿಹಾದ್ ನಂತಹ ವಿಷಯಗಳಿಗೆ ಒತ್ತು ನೀಡುವಂತೆ ಕರೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಿಜೆಪಿಯಲ್ಲಿನ ಮುಖಂಡರು, ಅಧ್ಯಕ್ಷರು ಈ ರೀತಿ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ರಾಹುಲ್‍ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ. ದ್ವೇಷವನ್ನು ಹತ್ತಿಕ್ಕುವುದು ಅವರ ಮೂಲ ಉದ್ದೇಶವಾಗಿದೆ. ಯಾತ್ರೆಯ ಮೂಲಕ ದೇಶದ ಜನರ ಮನ ಗೆದಿದ್ದಾರೆ ಎಂದರು.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತು ಬದ್ಧ ರಜೆ ಘೋಷಣೆ

ಬಿಜೆಪಿ ನಾಯಕರ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತಿದೆ. ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿಲ್ಲ. ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಯುವಕರ ಬದುಕು ಅತಂತ್ರವಾಗಿದೆ. ಜನ ಜೀವನ ದುಸ್ತರವಾಗಿದೆ. ಆರ್ಥಿಕ ಚೇತರಿಕೆ ಇಲ್ಲದೆ ಜನ ಸಾಮಾನ್ಯರು ಕಷ್ಟ ಪಡುತ್ತಿದ್ದಾರೆ ಎಂದು ವಿವರಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಪ್ರಸ್ತುತ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಶೀಘ್ರವೇ ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿಯೂ ಪ್ರಿಯಾಂಕ ಭಾಗವಹಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮಹಿಳೆಯರ ಅಭಿವೃದ್ಧಿಗೆ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಒಂದು ಪುಟದಲ್ಲಿ ತಮ್ಮ ಸಲಹೆಗಳನ್ನು ಬರೆದು ಕೆಪಿಸಿಸಿ ಅಧ್ಯಕ್ಷರು, ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಅಥವಾ ಮೈಲ್ ಮೂಲಕ ಕಳುಹಿಸಬಹುದು ಎಂದರು.

ಅಭ್ಯರ್ಥಿಗಳ ಪಟ್ಟಿಗೆ ಶುಭ ಮೂಹೂರ್ತ ಬೇಕಿದೆ. ಈಗಾಗಲೇ ಆಭ್ಯರ್ಥಿಗಳ ಆಯ್ಕೆಗೆ ಪ್ರತಿಕ್ರಿಯೆ ಶುರು ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿಗಳು ಸಭೆ ನಡೆಸುತ್ತಿವೆ. ಚುನಾವಣಾ ಸಮಿತಿಗಳು ಸಭೆ ನಡೆಸಿ ಚರ್ಚೆ ನಡೆಸಿವೆ. ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜೊತೆಗೆ ಪಕ್ಷದ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದೆ.

ಅಲ್ಲಿ ದೊರೆಯುವ ಅಭಿಪ್ರಾಯಗಳು ಮಹತ್ವದ್ದಾಗಿವೆ. ನಮ್ಮಲ್ಲಿ 78 ಲಕ್ಷ ಸದಸ್ಯರಿದ್ದಾರೆ ಅವರ ಅಭಿಪ್ರಾಯಗಳನ್ನು ಆಲಿಸಲಾಗುವುದು. ನಂತರ ಪಟ್ಟಿಯನ್ನು ಹೈಕಮಾಂಡ್‍ಗೆ ರವಾನೆ ಮಾಡಲಾಗುತ್ತದೆ ಎಂದು ಹೇಳಿದರು.

ಸಿಂಗಾರಗೊಂಡ ಸಿಎಂ ತವರು ಜಿಲ್ಲೆ ಹಾವೇರಿ, ಅಕ್ಷರ ಜಾತ್ರೆಗೆ ಕ್ಷಣಗಣನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಧಾನಿಯವರ ಮುಂದೆ ನಾಯಿ ಮರಿ ರೀತಿ ಇರುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಆ ಹೇಳಿಕೆಯ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ನಮ್ಮ ಮನೆಯಲ್ಲೂ ನಾಯಿ ಇದೆ. ನನಗೆ ನಾಯಿ ಬಗ್ಗೆ ಬಹಳ ಗೌರವ ಇದೆ. ಹಾಗೇಲ್ಲಾ ನಾನು ನಾಯಿU ಹೋಲಿಕೆ ಮಾಡಿ ಮಾತನಾಡುವುದಿಲ್ಲ ಎಂದರು.

BJP, disturb, peace, society, kpcc president, dk shivakumar,

Articles You Might Like

Share This Article