ಬೆಂಗಳೂರು,ಮಾ.10- ರಾಜ್ಯ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸಿರುವ ಆಡಳಿತಾರೂಢ ಬಿಜೆಪಿ ಪ್ರಚಾರ ಸಮಿತಿ ಹಾಗೂ ನಿರ್ವಹಣಾ ಸಮಿತಿಯನ್ನು ರಚಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಚಾರ ಸಮಿತಿ ಹಾಗೂ ನಿರ್ವಹಣಾ ಸಮಿತಿಯನ್ನು ರಚಿಸಿ ಎಲ್ಲ ಸಮುದಾಯಗಳಿಗೂ ಇದರಲ್ಲಿ ಆದ್ಯತೆ ಕೊಟ್ಟಿದ್ದಾರೆ.
ಆದರೆ, ಪ್ರಚಾರ ಸಮಿತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷರಾಗುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬದಲಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರಗೆ ಮಹತ್ವದ ಪ್ರಚಾರ ಸಮಿತಿಯಲೂ ಸ್ಥಾನ ಕಲ್ಪಿಸಿರುವುದು ವಿಶೇಷವಾಗಿದೆ. ಉಳಿದಂತೆ ಸಮಿತಿಯಲ್ಲಿ ಕೇಂದ್ರ ಸಚಿವರು, ರಾಜ್ಯದ ಹಾಲಿ ಸಚಿವರು, ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಮತ್ತಿತರ ರಿಗೆ ಅವಕಾಶ ಕಲ್ಪಿಸಲಾಗಿದೆ.
BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್
ಮತ್ತೊಂದು ವಿಶೇಷವೆಂದರೆ ನಿರ್ವಹಣಾ ಸಮಿತಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಚಾಲಕರನ್ನಾಗಿ ಪಕ್ಷವು ನೇಮಿಸಿದೆ. ಜಾತಿ, ಹಿರಿತನ, ಪ್ರದೇಶವಾರು ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಮಣೆ ಹಾಕಲಾಗಿದೆ.
ಪ್ರಚಾರ ಸಮಿತಿ: ಬಸವರಾಜ ಬೊಮ್ಮಾಯಿ- ಅಧ್ಯಕ್ಷರು, ಬಿ.ಎಸ್.ಯಡಿಯೂರಪ್ಪ, ನಳೀನ್‍ಕುಮಾರ್ ಕಟೀಲ್ , ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಕೆ.ಎಸ್.ಈಶ್ವರಪ್ಪ , ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆರ್.ಅಶೋಕ್, ಶಶಿಕಲಾ ಜೊಲ್ಲೆ ,
ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್ , ಪ್ರಭು ಚವ್ಹಾಣ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಸಿ.ಟಿ.ರವಿ, ವಿ.ಶ್ರೀನಿವಾಸ್ ಪ್ರಸಾದ್, ಪಿ.ಸಿ.ಮೋಹನ್ ಅರವಿಂದ ಲಿಂಬಾವಳಿ, ಲಕ್ಷ್ಮಣ್ ಸವದಿ, ರಮೇಶ್ ಜಾರಕಿಹೊಳಿ , ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ.
ಕಾಂಗ್ರೆಸ್‌ಗೆ ಜಂಪ್ ಮಾಡಲು ಸೋಮಣ್ಣ, ನಾರಾಯಣಗೌಡ, ಪೂರ್ಣಿಮ ತಯಾರಿ
ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ: ಶೋಭ ಕರಂದ್ಲಾಜೆ -ಸಂಚಾಲಕರು, ಭಗವಂತ ಕೂಬಾ, ಕೋಟಾ ಶ್ರೀನಿವಾಸ ಪೂಜಾರಿ, ಅರವಿಂದ ಲಿಂಬಾವಳಿ , ರಘುನಾಥ್ ರಾವ್ ಮಲ್ಕಾಪುರೆ, ನಿರ್ಮಲ್‍ಕುಮಾರ್ ಸುರಾನ, ತೇಜಸ್ವಿನಿ ಅನಂತಕುಮಾರ್, ಎನ್.ರವಿಕುಮಾರ್, ಸಿದ್ದರಾಜು, ಅಶ್ವಥ್ ನಾರಾಯಣ , ಮಹೇಶ್ ತೆಂಗಿನಕಾಯಿ, ಎಸ್.ಕೇಶವಪ್ರಸಾದ್ , ಛಲವಾದಿ ನಾರಾಯಣಸ್ವಾಮಿ , ಗೀತಾ ವಿವೇಕಾನಂದ.
BJP, Election, Campaign, Committee,