ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಬಿಎಸ್‌ವೈ

Social Share

ಬೆಂಗಳೂರು,ಫೆ.4- ರಾಜ್ಯದಲ್ಲಿ ಈ ಬಾರಿ ಬಿಜೆಪಿ ಯಾರ ಮೇಲೆಯೂ ಅವಲಂಬಿತವಾಗದೆ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲಿದೆ. ಇದನ್ನು ಯಾವುದೇ ಶಕ್ತಿಗಳು ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೂ ತಲುಪಿದೆ ಎಂದು ತಿಳಿಸಿದರು.

ನಮ್ಮ ಯೋಜನೆಗಳನ್ನು ಪ್ರತಿಯೊಬ್ಬರ ಮನೆಗೂ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ಯಾರ ಮನೆಗೆ ಯೋಜನೆಗಳು ತಲುಪಿಲ್ಲವೋ ಪಟ್ಟಿ ಮಾಡಿ ತಲುಪಿಸುವ ಕೆಲಸವಾಗಬೇಕು. ಆಗ ಪಕ್ಷದ ಬಗ್ಗೆ ಎಲ್ಲರಿಗೂ ಅಭಿಮಾನ ಮೂಡುತ್ತದೆ ಎಂದು ಸಲಹೆ ಮಾಡಿದರು.

ಬರಲಿರುವ ಚುನಾವಣೆಯಲ್ಲಿ ಬಿಜೆಪಿ 130-140 ಸ್ಥಾನ ಗೆಲ್ಲುತ್ತದೆ. ಪಕ್ಷ ಬಿಜೆಪಿ ಅಕಾರಕ್ಕೆ ಬಂದೇ ಬರುತ್ತದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ನಾನೇ ಸಿಎಂ ಎಂಬ ಸಂಘರ್ಷ ಶುರುವಾಗಿದೆ. ಕಾಂಗ್ರೆಸ್ ನಾಯಕ ಯಾರು? ರಾಹುಲ್ ಗಾಂಧಿನಾ? ಎಂದು ಪ್ರಶ್ನಿಸಿದರು.

3 ದಿನ ಸರಕು ಸಾಗಣೆ ವಾಹನಗಳ ಬೆಂಗಳೂರು ಪ್ರವೇಶ ನಿಷೇಧ

ಗೋಹತ್ಯೆ ನಿಷೇಧ ಕಾಯಿದೆ ತಂದಿದ್ದೇವೆ. ಅಯೋಧ್ಯೆ ಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ವಿಕಾಸಸೌಧದ ಮುಂದೆ ಅಂಬೇಡ್ಕರ್ ಸ್ಪೂರ್ತಿ ಭವನ ನಿರ್ಮಾಣವಾಗುತ್ತಿದೆ. ಪಕ್ಷ ಯಾರ ಮೇಲೆ ಅವಲಂಬಿತರಾಗದೇ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ. ಬರುವ ಬಜೆಟ್ ಕೂಡ ನಮಗೆ ಶಕ್ತಿಯ ಯಾಗಲಿದೆ ಎಂದರು.

ಕಾಂಗ್ರೆಸ್ ಬಸ್ ಯಾತ್ರೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗುತ್ತದೆ. ಇದರಲ್ಲಿ ಯಾರಿಗೂ ಯಾವುದೇ ಅನುಮಾನವೇ ಬೇಡ ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಬಿಜೆಪಿಯಲ್ಲಿರುವ ಸಂಘಟನೆ ಬೇರೆ ಯಾವ ಪಕ್ಷಗಳಲ್ಲೂ ಇಲ್ಲ. ನಮಗೆ ಸಿಕ್ಕ ಕಾರ್ಯಕರ್ತರು ದೇವರ ಕೊಡುಗೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸಂಘಟನೆ, ಕಾರ್ಯಕರ್ತರು ಇರಲು ಸಾಧ್ಯವೇ ಇಲ್ಲ ಎಂದರು.

ಯಡಿಯೂರಪ್ಪ ಸರ್ಕಾರ, ಬೊಮ್ಮಾಯಿ ಸರ್ಕಾರ ಹಲವು ಜನೋಪಯೋಗಿ ಯೋಜನೆಗಳನ್ನು ನೀಡಿದೆ. ಇದರ ಸಹಾಯದಿಂದ ನಾವು ರಾಜ್ಯದಲ್ಲಿ ಮತ್ತೆ ಗೆದ್ದು ಅಕಾರ ಹಿಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಿಟ್ಟು ಹಲವರು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನೇತಾರನೂ ಇಲ್ಲ, ನಾಯಕತ್ವವೂ ಇಲ್ಲ. ಕಾಂಗ್ರೆಸ್ನವರರಿಗೆ ರೀತಿ-ನೀತಿ ಇಲ್ಲ ಓಲೈಕೆ ರಾಜಕಾರಣವೇ ಅವರ ಆಸ್ತಿ. ರಾಹುಲ್ ಗಾಂಧಿ ಯಾವಾಗ ಏನ್ ಮಾತನಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿಲ್ಲ ಟೀಕಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂಗಳನ್ನು ಅಪಮಾನ ಮಾಡುವ ಹೇಳಿಕೆ ಕೊಡುತ್ತಾರೆ. ಅವರು ಹಿಂದೂಗಳನ್ನು ಅಪಮಾನ ಮಾಡುವ ಬಗ್ಗೆ ಜನತೆಗೆ ಅರಿವಿದೆ. ಚುನಾವಣೆಯಲ್ಲಿ ಅವರಿಗೆ ಜನ ಪಾಠ ಕಲಿಸುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ನವರು ಬಾಯಿಗೆ ಬಂದ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಆಶ್ವಾಸನೆ ಕೊಡಿತ್ತಾರೆ. ಆರ್ಥಿಕ ಜ್ಞಾನ ಇಲ್ಲದೇ ಉಚಿತ ವಿದ್ಯುತ್ ಘೋಷಣೆ ಮಾಡಿದ್ದಾರೆ. 200 ಯುನಿಟ್ ಕರೆಂಟ್ ಫ್ರೀ ಎನ್ನುತ್ತಾರೆ. ಕೊಡುವುದಾಗಿದ್ದರೆ ಸಿದ್ದರಾಮಯ್ಯ ಸರ್ಕಾರದ ಅವಯಲ್ಲೇ ಏಕೆ ಕೊಡಲಿಲ್ಲ.

ಕೆಜಿಎಫ್ ಬಾಬು ಮನೆಗೆ ಪೆಟ್ರೋಲ್ ಸುರಿದು ಬೆಂಕಿ

ಸುಳ್ಯದಲ್ಲಿ ಕರೆಂಟ್ ಕೇಳಿದ್ದಕ್ಕೆ ಯುವಕನನ್ನು ಜೈಲಿಗೆ ಹಾಕಿದ್ದರು. 2012 ರಲ್ಲಿ 3 ದಿನ ಇಡೀ ಉತ್ತರ ಭಾರತ ಕತ್ತಲೆಯಲ್ಲಿ ಇತ್ತು. ಇಂತಹವರು ಇಂದು ಉಚಿತ ವಿದ್ಯುತ್ ಕೊಡುವ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ನವರು ಪಂಚರತ್ನ ಯಾತ್ರೆಗೆ ಹೊರಟಿದ್ದಾರೆ. ಪಂಚರತ್ನ ಎಂದು ಯಾಕೆ ಹೆಸರು ಇಟ್ಟಿದ್ದಾರೋ ಗೊತ್ತಿಲ್ಲ. ದೇವೇಗೌಡರ ಮನೆಯಲ್ಲಿ 9 ಜನ ಇದ್ದಾರೆ. ಅವರು ನವಗ್ರಹ ಯಾತ್ರೆ ಎಂದು ಇಡಬೇಕಿತ್ತು. ಇರುವ 5 ಜಿಲ್ಲೆಯಲ್ಲಿ 9 ಜನ ಇವರ ಮನೆಯವರೇ ಇದ್ದಾರೆ. ಇವರು ರಾಜ್ಯ ಉದ್ದಾರ ಮಾಡುತ್ತಾರಾ? ಎಂದು ವ್ಯಂಗ್ಯವಾಡಿದರು.

BJP, executive, meeting, yediyurappa,

Articles You Might Like

Share This Article