ಹಾಡೂನ್.ಜ.17-ಉತ್ತರಾಖಂಡ ರಾಜ್ಯದ ಪ್ರಭಾವಿ ಸಚಿವ ಹರಕ್ ಸಿಂಗ್ ರಾವತ್ ಅವರನ್ನು ಸಂಪುಟದಿಂದ ಕೃಬಿಡಲ್ಲಾಗಿದ್ದು ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಅಶಿಸ್ತಿನ ಕಾರಣದಿಂದ ಉಚ್ಚಾಟಿಸಲಾಗಿದೆ. ಅರಣ್ಯ ಮತ್ತು ಪರಿಸರ, ಕಾರ್ಮಿಕ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ರಾವತ್ ಅವರು ಕಳೆದ ತಿಂಗಳು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತನ್ನ ಕ್ಷೇತ್ರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಪಟ್ಟು ಹಿಡಿದು ಆಕ್ರೋಷದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು.
ತಾವು ಶಾಸಕರಾಗಿರುವ ಕೋಟ್ದ್ವಾರ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಯಾವುದೇ ಹಂತಕ್ಕೂ ಹೋಗುವುದಾಗಿ ಹೇಳಿಕೆ ನೀಡಿದ್ದರು.ನಂತರ ಸರ್ಕಾರದ ವಿರುದ್ದ ಬಂಡಾಯ ಸಾರಿದ್ದರು. ಇದರ ನಡುವೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಬಂಧಿಯೊಬ್ಬರಿಗೆ ಪಕ್ಷದ ಟಿಕೆಟ್ ಬೇಕೆಂದು ರಾವತ್ ಬಯಸಿದ್ದರು ಮತ್ತು ಕಾಂಗ್ರೆಸ್ ಪಕ್ಷ ಸೇರಲು ಪ್ರಯತ್ನಿಸಿದ್ದರು ಎಂಬ ಊಹಾಪೋಹಗಳು ಇತ್ತೀಚೆಗೆ ಹರಿದಾಡಿದ್ದವು.
ಕಳೆದ ರಾತ್ರಿ ಆವರನ್ನು ಆರು ವರ್ಷಗಳ ಕಾಲ ಉಚ್ಚಾಟಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ತಿಳಿಸಿದ್ದರು.ನÀಂತರ ರಾಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಶಿಫಾರಸಿನ ಮೇರೆಗೆ ಉತ್ತರಾಖಂಡ ರಾಜ್ಯಪಾಲ ಗುರ್ಮಿತ್ ಸಿಂಗ್ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗೊಳಿಸಿದರು.
2016 ರಲ್ಲಿ ಆಗಿನ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಯೊಂದಿಗೆ ಕೈಜೋಡಿಸಿದ ಒಂಬತ್ತು ಕಾಂಗ್ರೆಸ್ ಬಂಡಾಯ ಶಾಸಕರಲ್ಲಿ ರಾವತ್ ಒಬ್ಬರು. 2012 ರಲ್ಲಿ, ಮುಖ್ಯಮಂತ್ರಿ ಹುದ್ದಾಯ ರೇಸ್‍ನಲ್ಲಿ ರಾವತ್ ವಿಜಯ್ ಬಹುಗುಣ ವಿರುದ್ಧ ಸೋತ್ತಿದ್ದರು ಕಳೆದ 1991 ರಲ್ಲಿ ತಮ್ಮ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಪೌರಿಯಿಂದ ಬಿಜೆಪಿಯಿಂದ ಗೆದ್ದು ಅವಿಭಜಿತ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿ ಸೇವೆ ಸಲ್ಲಿಸಿದರು.
ಬಳಿಕ ಬಿಎಸ್ಪಿ ಸೇರಿದ್ದರು. 1998 ರಲ್ಲಿ, ಬಿಎಸ್‍ಪಿಯಿಂದ ಟಿಕೆಟ್ ನಿರಾಕರಿಸಿದ ನಂತರ ರಾವತ್ ಕಾಂಗ್ರೆಸ್‍ಗೆ ಹೊಗಿದ್ದರು 2002 ಮತ್ತು 2007 ರಲ್ಲಿ ಲ್ಯಾನ್ಸ್ಡೌನ್ನಿಂದ ಶಾಸಕರಾಗಿ ಆಯ್ಕೆಯಾದರು. ಅವರು 2007 ರಿಂದ 2012 ರವರೆಗೆ ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದರು. ಇಂದು ಬೆಳ್ಳಿಗೆ ಮತ್ತೆ ಕಾಂಗ್ರೆಸ್ ಸೇರಿದ್ದಾರೆ.
