ಬೆಂಗಳೂರು,ಡಿ.12- ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸುವ ಮೂಲಕ ಬಿಜೆಪಿ ಸರ್ಕಾರ ದಲಿತರ ವಿರುದ್ಧ ತನ್ನೊಳಗಿದ್ದ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಟ್ವೀಟ್ ಮಾಡಿದೆ. ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ ಈ ಸರ್ಕಾರದಲ್ಲಿ ರಾಜಮರ್ಯಾದೆ ಸಿಗುತ್ತಿದೆ. ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ, ರೌಡಿಗಳಿಗೆ, ಕ್ರಿಮಿನಲ್‍ಗಳಿಗೆ ರಾಜಮರ್ಯಾದೆ ಸಿಗುತ್ತಿದೆ.
ಆದರೆ, ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ ಲಾಠಿಏಟು ಬೀಳುತ್ತಿದೆ. ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‍ಗಳಂತೆ ಕಾಣುವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಮತ್ತೊಂದೆಡೆ ಬೆಂಗಳೂರಲ್ಲಿ ರಾತ್ರಿ ಗಸ್ತು ತಿರುಗುತ್ತಾ ಜನತೆಗೆ ರಕ್ಷಣೆ ನೀಡಬೇಕಾದ ಪೋಲಿಸರು ರಾತ್ರಿ ಮನೆಗೆ ನಡೆದು ಹೋಗುತ್ತಿದ್ದ ಅಮಾಯಕ ದಂಪತಿಗಳಿಗೆ ಬೆದರಿಸಿ ಥೇಟ್ ದರೋಡೆಕೋರರಂತೆ ವರ್ತಿಸಿ ಹಣ ವಸೂಲಿ ಮಾಡಿರುವುದು ವರದಿಯಾಗಿದೆ. ಬಹುಶಃ ರಾಜ್ಯ ರೋಲ್ಕಾಲ್ ಸರ್ಕಾರದ ಪೊಲೀಸ್ ವ್ಯವಸ್ಥೆಯ ಇಂದಿನ ಪರಿಸ್ಥಿತಿ ಅರಿಯಲು ಈ ಒಂದು ಘಟನೆ ಸಾಕಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಚಳಿಗಾಲದ ಅಧಿವೇಶನ: ಅಗತ್ಯ ಸೌಲಭ್ಯಗಳಿಗೆ ಸ್ಪೀಕರ್ ಸೂಚನೆ
ತನಗೂ ಇಲಾಖೆಗೂ ಸಂಬಂಧ ಇಲ್ಲದಂತೆ ವರ್ತಿಸುವ ಬೇಜವಾಬ್ದಾರಿ ಗೃಹ ಸಚಿವರ ಅಡಿಯಲ್ಲಿ ಲಕ್ಷ-ಕೋಟಿಗಳ ಲೆಕ್ಕದಲ್ಲಿ ಲಂಚ ಕೊಟ್ಟು ಆಯಕಟ್ಟಿನ ಜಾಗಕ್ಕೆ ಬಂದಿರುವ ಅಧಿಕಾರಿಗಳು ಅಕ್ಷರಶಃ ದರೋಡೆಕೋರಂತೆ ಜನರ ಲೂಟಿಗೆ ಇಳಿದಿದ್ದಾರೆ.
40 ಪಸೇಂಟೆಜ್ ಸರ್ಕಾರ ತನ್ನ ಕಮಿಷನ್ ಎಣಿಸಿಕೊಂಡು ಮೋದಿ ಭಜನೆ ಮಾಡುತ್ತಾ ಕಾಲಕಳೆಯುತ್ತಿದೆ ಎಂದು ತರಾಟೆಗೆ ತೆಗೆದುಕೊಳ್ಳಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಗಳಲ್ಲಿ ಲೋಪಗಳನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಪ್ರಯಾಣಿಕರಿಗೆ ತೊಂದರೆ ಕೊಡುವ ನರಕದ ದಾರಿಗಳಾಗಿವೆ.
ಕೆ.ಆರ್.ಪುರ ಶೂಟ್‍ಔಟ್ ಪ್ರಕರಣ: 3 ದಿನದ ಹಿಂದೆಯೇ ಹತ್ಯೆಗೆ ಸ್ಕೆಚ್
ಡಬಲ್ ಇಂಜಿನ್ ಸರ್ಕಾರವಿದ್ದರೂ, 25 ಬಿಜೆಪಿ ಸಂಸದರಿದ್ದರೂ ಅನುದಾನವಿಲ್ಲ, ಕಾಮಗಾರಿಗಳ
ಪ್ರಗತಿ ಇಲ್ಲದಿರುವುದು ಬಿಜೆಪಿ ಸರ್ಕಾರಗಳ ನಿಷ್ಕ್ರೀಯತೆಗೆ ಹಿಡಿದ ಕನ್ನಡಿಯಾಗಿದೆ. ಇದು ಡಬಲ್ ಇಂಜಿನ್ ಸರ್ಕಾರವಲ್ಲ ಇದು ಟ್ರಬಲ್ ಇಂಜಿನ್ ಸರ್ಕಾರ ಎಂದು ಕಾಂಗ್ರೆಸ್ ಕಿಡಿಕಾರಿದೆ.
BJP government, Corruption, Congress,