Saturday, September 23, 2023
Homeಇದೀಗ ಬಂದ ಸುದ್ದಿಬಿಜೆಪಿ ಸರ್ಕಾರ ಅವಧಿಯ 20,000 ಕೋಟಿ ರೂ.ಗಳ ಬಿಲ್ ಪಾವತಿಗೆ ತಡೆ

ಬಿಜೆಪಿ ಸರ್ಕಾರ ಅವಧಿಯ 20,000 ಕೋಟಿ ರೂ.ಗಳ ಬಿಲ್ ಪಾವತಿಗೆ ತಡೆ

- Advertisement -

ಬೆಂಗಳೂರು,ಮೇ 30- ಕಾಂಗ್ರೆಸ್‍ನ ಗ್ಯಾರಂಟಿ ಯೋಜನೆಗಳ ಜಾರಿಯ ಕಾರಣದಿಂದಾಗಿ ಹಿಂದಿನ ಸರ್ಕಾರ ನಿರ್ವಹಿಸಿದ್ದ ಕಾಮಗಾರಿಗಳ 20 ಸಾವಿರ ಕೋಟಿ ರೂಪಾಯಿ ಬಾಕಿ ಬಿಲ್ ಪಾವತಿ ತಡೆ ಹಿಡಿಯುವ ಸಾಧ್ಯತೆ ಇದೆ.

ಕಳೆದ ಮೂರೂವರೆ ವರ್ಷಗಳಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ಪ್ರಭಾವಗಳಿಗೆ ಮಣಿದು ಸಾವಿರಾರು ಕೋಟಿ ರೂಪಾಯಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಅದರಲ್ಲಿ ಬಹುತೇಕ ಕಾಮಗಾರಿಗಳು ಅನಗತ್ಯ ಎಂದು ಹೇಳಲಾಗಿದೆ. ಪ್ರಭಾವಿಗಳು ಪತ್ರ ನೀಡಿದ್ದಾರೆ ಎಂಬ ಕಾರಣಕ್ಕೆ ಕೆಲಸ ನಿರ್ವಹಿಸಲು ಅವಕಾಶ ಮಾಡಿ ಕೊಡಲಾಗಿದೆ.

- Advertisement -

ಯಾವುದೇ ರೀತಿ ತನಿಖೆ ಎದುರಿಸಲು ಸಿದ್ಧ: ಬೊಮ್ಮಾಯಿ

ಈ ಮೊದಲು ಸುಸ್ಥಿತಿಯಲ್ಲಿದ್ದ ರಸ್ತೆಯಲ್ಲೇ ಮತ್ತೆ ಕಾಮಗಾರಿ ನಡೆಸಿರುವುದು, ಪುಟ್‍ಪಾತ್ ದುರಸ್ತಿ, ಚರಂಡಿಹೂಳು ತೆಗೆಯುವ ಕಾಮಗಾರಿ ಸೇರಿದಂತೆ ಅನೇಕ ಕೆಲಸಗಳನ್ನು ಉದ್ದೇಶ ಪೂರ್ವಕವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಬಹುತೇಕ ಈ ಕಾಮಗಾರಿಗಳಿಗೆ ಕಿಕ್‍ಬ್ಯಾಕ್ ಪಡೆದು ಗುತ್ತಿಗೆ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಿಲ್ ಕೂಡ ಪಾವತಿಯಾಗಿಲ್ಲ. ಈ ರೀತಿ ಸುಮಾರು 20 ಸಾವಿರ ಕೋಟಿ ರೂಪಾಯಿಗೂ ಅಕ ಮೊತ್ತದ ಬಿಲ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.

ಮುಂದೇ ತಮ್ಮದೇ ಸರ್ಕಾರ ಬರಲಿದೆ ಎಂಬ ಕಾರಣಕ್ಕೆ ಗುತ್ತಿಗೆ ನೀಡಿದ್ದ ಬಿಜೆಪಿ ಸರ್ಕಾರದ ಸಚಿವರು ಕೆಲವು ಕಡೆ ವರ್ಕ್ ಆಡರ್ ಕೂಡ ನೀಡಿಲ್ಲ ಎನ್ನಲಾಗಿದೆ. ಬಹುತೇಕ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೆ ಕಾಮಗಾರಿಗಳನ್ನು ನಿರ್ವಹಣೆ ಮಾಡಿದ್ದಾರೆ.

ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಇಂಧನ, ನಗರಾಭಿವೃದ್ಧಿ, ಪೌರಾಡಳಿತ, ಜಲಸಂಪನ್ಮೂಲ ಸೇರಿದಂತೆ ಅನೇಕ ಕಡೆಗಳಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಭಾರೀ ಪ್ರಮಾಣದ ಬಿಲ್ ಪಾವತಿಸಬೇಕಿದೆ ಎಂದು ನಿನ್ನೆ ನಡೆದ ಹಣಕಾಸು ಇಲಾಖೆ ಅಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗೆ ಮಾಹಿತಿ ನೀಡಲಾಗಿದೆ.

BIG NEWS: ಯಾವುದೇ ಷರತ್ ಇಲ್ಲ, ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ

ಕಾಂಗ್ರೆಸ್ ಅಕಾರಕ್ಕೆ ಬಂದರೆ ಕಳೆದ ಆರು ತಿಂಗಳಲ್ಲಿ ನೀಡಲಾಗಿರುವ ಗುತ್ತಿಗೆಗಳಲ್ಲಿ ಮರು ಪರಿಶೀಲಿಸುವುದಾಗಿ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಶೇ.40ರಷ್ಟು ಕಮಿಷನ್ ಪಡೆದು ನೀಡಲಾಗಿರುವ ಗುತ್ತಿಗೆಗಳ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದರು.

ಈಗ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಕಾರಕ್ಕೆ ಬಂದಿದೆ. ಚುನಾವಣೆಯ ವೇಳೆ ನೀಡಿದ್ದ ಭರವಸೆಯಂತೆ ಎಲ್ಲಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗುವುದು ಮತ್ತು ಬಿಲ್ ಪಾವತಿಯನ್ನು ತಡೆ ಹಿಡಿಯಲಾಗುವುದು ಎಂದು ಹೇಳಲಾಗಿದೆ.

ಕಾಂಗ್ರೆಸ್ ನಾಯಕರ ಧೋರಣೆಗೆ ತಕ್ಕ ಹಾಗೆ ಬಿಜೆಪಿ ಮುಖಂಡರು ಕೂಡ ಐದು ಗ್ಯಾರಂಟಿಗಳನ್ನು ಮೊದಲು ಅನುಷ್ಠಾನ ಮಾಡಿ ಎಂದು ಪದೇ ಪದೇ ಒತ್ತಡ ಹೇರುತ್ತಿದ್ದಾರೆ. ಅವರ ಅಭಿಪ್ರಾಯದಂತೆ ಸರ್ಕಾರ ಮುಂದಿನ ತಿಂಗಳಿನಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬದಲಾಗಿ ಹಿಂದೆ ನೀಡಿದ್ದ ಗುತ್ತಿಗೆಗಳ ಬಿಲ್ ಪಾವತಿಯನ್ನು ತಡೆ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‍ನ ಈ ರಣತಂತ್ರ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಬಿಜೆಪಿಗೆ ಬಿಸಿ ತುಪ್ಪವಾಗುತ್ತಿದೆ.

BJP, #government, #period, #working, #bill, #Block,

- Advertisement -
RELATED ARTICLES
- Advertisment -

Most Popular