ಯುದ್ಧಕ್ಕೆ ಹೊರಟ ಸಾಮಂತರಿಗೆ ದಂಡನಾಯಕನ ಕೊರತೆ

Social Share

ಕೇಂದ್ರದಲ್ಲಿ ಸರ್ಕಾರ ಬದಲಾಗಬೇಕು ಎಂಬ ದೊಡ್ಡ ಕೂಗು ದಕ್ಷಿಣ ಭಾರತದಲ್ಲಿ ಎದ್ದಿದೆ, ಆದರೆ ಬದಲಾವಣೆಯಾಗುವುದಾದರೆ ಪರ್ಯಾಯ ನಾಯಕತ್ವ ಯಾರದು ಎಂಬ ವಿಷಯದಲ್ಲಿ ಒಮ್ಮತ ಮೂಡದೆ ಸಂಭವನೀಯ ರಾಜಕೀಯ ಉದಯೋನ್ಮಖ ಶಕ್ತಿ ಮೊಳಕೆಯಲ್ಲೇ ಅಪೌಷ್ಠಿಕತೆಯಿಂದ ಸೊರಗಲಾರಂಭಿಸಿದೆ.

ಕಳೆದ ಎರಡು ತಿಂಗಳ ಅಂತರದಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಎರಡು ಮಹತ್ವದ ಸಭೆಗಳು ದೇಶದ ರಾಜಕೀಯದಲ್ಲಿನ ಬದಲಾವಣೆ ಮುನ್ಸೂಚನೆ ನೀಡಿದವಾದರೂ ಐಕ್ಯತಾ ಕೂಟ ರಚಿಸುವಲ್ಲಿ ವಿಫಲವಾಗಿವೆ.

2004ರಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಮೈತ್ರಿಕೂಟ ತಮಿಳುನಾಡು ಮತ್ತು ಪಾಂಡಿಚೇರಿ ಪ್ರದೇಶಗಳಲ್ಲಿ ಸಂಸತ್‍ನ 40 ಸ್ಥಾನಗಳನ್ನು ಸಂಪೂರ್ಣವಾಗಿ ಗೆದ್ದು, ಆಗಿನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಆನೆ ಬಲ ತಂದುಕೊಟ್ಟಿತ್ತು.

ಜಾತ್ಯತೀತ ಶಕ್ತಿಗಳು ಛಿದ್ರವಾಗದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ಇದೇ ಮೈತ್ರಿ ಮುಂದುವರೆಯುವ ನಿಶ್ಚಳತೆ ಕಂಡು ಬಂದಿದೆ. ಹಿಂದೆ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಡಿಎಂಕೆಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿತ್ತು.

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ವಿಧಾನಸಭೆಗೆ ಇನ್ನೇನು ಚುನಾವಣೆ ಘೋಷಣೆಯಾಗುವ ಕಾಲ ಸನ್ನಿತವಾಗಿದೆ. ಹೇಗಾದರೂ ಮಾಡಿ ಈ ಬಾರಿ ಕರುನಾಡಿನಲ್ಲಿ ಸ್ವಂತ ಬಲದ ಮೂಲಕ ಅಪತ್ಯ ಸಾಧಿಸಬೇಕು ಎಂಬ ಹಠಕ್ಕೆ ಬಿದ್ದು ಬಿಜೆಪಿ ತನ್ನ ಪೂರ್ಣ ಪ್ರಮಾಣದ ಬಲ ಪ್ರಯೋಗ ಮಾಡಲಾರಂಭಿಸಿದೆ.

ಬಿಜೆಪಿ ಮೇಲೆ ಮುನಿಸಿಕೊಂಡ ವಿ.ಸೋಮಣ್ಣ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಪುಟದ ಇತರ ಸಚಿವರು ರಾಜ್ಯದಲ್ಲೇ ಠಿಕಾಣಿ ಹೂಡುವ ಸಾಧ್ಯತೆಯೂ ಇದೆ.

ಕರ್ನಾಟಕವನ್ನು ಗೆದ್ದಿದ್ದೆ ಆದರೆ ಮುಂದಿನ ದಿನಗಳಲ್ಲಿ ನಡೆಯುವ ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಖಾತೆ ತೆರೆಯಲು ತನ್ಮೂಲಕ ವಿಧಾನಸಭೆಗಳಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ವೇದಿಕೆಯಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿಯದು.

ಈ ಮೊದಲು ಎಷ್ಟೆ ಪ್ರಯತ್ನ ಪಟ್ಟರು ತಮಿಳುನಾಡು, ಕೇರಳದಲ್ಲಿ ಕೇಸರಿ ಬಾವುಟ ಸ್ವತಂತ್ರವಾಗಿ ಹಾರಾಟ ನಡೆಸಲು ಸಾಧ್ಯವಾಗಿಲ್ಲ. ಆಂಧ್ರಪ್ರದೇಶದಲ್ಲಿ ವೈ.ಎಸ್.ಆರ್.ಕಾಂಗ್ರೆಸ್‍ನ ನಾಯಕ ಹಾಗೂ ಮುಖ್ಯಮಂತ್ರಿ ಜಗಮೋಹನ್‍ರೆಡ್ಡಿ ಪ್ರಧಾನಿ ಅವರ ಜೊತೆ ಸ್ನೇಹದಿಂದ ಇದ್ದು, ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಮುಂದೆ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಇದೇ ರಾಜಕೀಯ ನಿಲುವು ಮುಂದುವರೆಯಲಿದೆಯೇ ಎಂಬ ಕುರಿತು ಈಗಲೇ ಸ್ಪಷ್ಟತೆ ಇಲ್ಲ. ಏಕೆಂದರೆ ತೆಲಂಗಾಣದಲ್ಲಿ ಜಗನ್ಮೋಹನ ರೆಡ್ಡಿ ಅವರ ಸಹೋದರಿ ಚಂದ್ರಶೇಖರ್‍ರಾವ್ ಅವರ ಸರ್ಕಾರದ ವಿರುದ್ಧ ಜಂಗಿಕುಸ್ತಿಗೆ ಇಳಿದಿದ್ದಾರೆ.

ಬಿಜೆಪಿಯ ರಾಜಕೀಯ ಆಪೋಶನ ಪ್ರವೃತ್ತಿ ದಕ್ಷಿಣ ರಾಜ್ಯಗಳ ನಾಯಕರಲ್ಲಿ ಸಣ್ಣದಾದ ಅಳುಕನ್ನು ಸೃಷ್ಟಿಸಿದೆ. ಹಿಂದೆಂದಿಗಿಂತಲೂ ಬಲಾಢ್ಯವಾಗಿರುವ ಬಿಜೆಪಿ ಕಾಂಗ್ರೆಸ್‍ಗಿಂತಲೂ ಅಪಾಯಕಾರಿಯಾಗಿ ಪರಣಮಿಸಿದೆ. ಅದರ ರಾಜಕೀಯ ಭ್ರಹ್ಮರಾಕ್ಷಸ ಸ್ವರೂಪ ಸಣ್ಣಪುಟ್ಟ ಪಕ್ಷಗಳನ್ನು ಹೊಸಕಿ ಹಾಕಿಯೇ ಮುಂದೆ ಸಾಗುತ್ತಿದೆ.

ಉತ್ತರ ಭಾರತದಲ್ಲಿ ಬಹುತೇಕ ಕಡೆ ಕಳೆದ ಎಂಟು ವರ್ಷಗಳಿಂದಲೂ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಜ್ಜುಗುಜ್ಜು ಮಾಡಿದೆ. ಅದರ ಹೊಡೆತ ತಡೆದುಕೊಂದೂ, ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಹಿಡಿತ ಸಾಧಿಸಿವೆಯಾದರೂ ಲೋಕಸಭೆ ಚುನಾವಣೆಯಲ್ಲಿ ಸಾಮಥ್ರ್ಯ ಪ್ರದರ್ಶನದಲ್ಲಿ ವೈಪಲ್ಯ ಅನುಭವಿಸಿದೆ.

ಈ ಹಿನ್ನೆಲೆಯಲ್ಲಿ ದಕ್ಷಿಣದ ಭಾಗದ ಸಾಮಂತರಂತಿರುವ ತೆಲಂಗಾಣದ ಚಂದ್ರಶೇಖರ್ ರಾವ್, ತಮಿಳುನಾಡಿನ ಎಂ.ಕೆ.ಸ್ಟಾಲೀನ್, ಕೇರಳದ ಪಿಣರಾಯಿ ವಿಜಯನ್ ಬಿಜೆಪಿಯನ್ನು ಹತ್ತಿಕ್ಕಲು ಸಂಕಲ್ಪ ಮಾಡಿದಂತಿದೆ. ಆದರೆ ಕೇಸರಿ ವಿರುದ್ಧ ಹೋರಾಟಕ್ಕೆ ದಂಡನಾಯತ್ವ ಯಾರದು ಎಂಬ ಪ್ರಶ್ನೆ ಎಲ್ಲರ ಎದುರು ಬೃಹದಾಕಾರವಾಗಿ ಕಾಡುತ್ತಿದೆ.

ಕಳೆದ ಜನವರಿ 18ರಂದು ಚಂದ್ರಶೇಖರ್ ರಾವ್ ತಮ್ಮ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ-ಟಿಆರ್‍ಎಸ್‍ಯನ್ನು ರಾಷ್ಟ್ರ ರಾಜಕಾರಣದ ಆಕಾಂಕ್ಷೆಯೊಂದಿಗೆ ಭಾರತ ರಾಷ್ಟ್ರ ಸಮಿತಿ-ಬಿಆರ್‍ಎಸ್ ಪಕ್ಷವನ್ನಾಗಿ ಪರಿವರ್ತನೆ ಮಾಡಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ : ಮತ್ತೋರ್ವ ಆರೋಪಿಯನ್ನು ಬಂಧಿಸಿದ NIA

ಅನಂತರ ತೆಲಂಗಾಣದಲ್ಲಿ ಎರಡು ಭಾರಿ ಬೃಹತ್ ಕಾರ್ಯಕ್ರಮಗಳನ್ನು ಮಾಡಿ ಜಾತ್ಯತೀತ ನಿಲುವಿನ ಸಮಾನ ಮನಸ್ಕ ಪಕ್ಷಗಳ ನಾಯಕರನ್ನು ಕರೆಸಿದ್ದಾರೆ. ಪಿಣರಾಯಿ ವಿಜಯನ್, ಜೊತೆಗೆ ಜಮ್ಮು ಕಾಶ್ಮೀರದ ಫಾರುಕ್ ಅಬ್ದುಲ್ಲಾ, ದೆಹಲಿಯ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸೇರಿ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆದರೆ ಯಾರು ಕೂಡಾ ಬಾಯಿ ತಪ್ಪಿಯೂ ಚಂದ್ರಶೇಖರ್‍ರಾವ್‍ರನ್ನು ತಮ್ಮ ನಾಯಕ ಎಂದು ಹೇಳಲಿಲ್ಲ. ಎಂ.ಕೆ.ಸ್ಟಾಲಿನ್ ಆರಂಭದಲ್ಲಿ ಚಂದ್ರಶೇಖರ್‍ರಾವ್ ಜೊತೆ ಕೈ ಜೋಡಿಸಿದ್ದರು, ಯಾವಾಗ ಬಿಆರ್‍ಎಸ್ ರಚನೆಯಾಯಿತೋ ಅಂದಿನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು.

ಇನ್ನೂ ಕರ್ನಾಟಕದ ಜಾತ್ಯತೀತ ಜನತಾದಳ ಚಂದ್ರ ಶೇಖರ್‍ರಾವ್ ಜೊತೆ ಒಳ್ಳೆಯ ಸ್ನೇಹವನ್ನು ನಿರ್ವಹಣೆ ಮಾಡುತ್ತಿದೆಯಾರೂ ರಾಜಕೀಯದ ವಿಷಯ ಬಂದಾಗ ಅಂತರ ಕಾಯ್ದುಕೊಳ್ಳುತ್ತಿದೆ. ಹಿಂದೊಮ್ಮೆ ನಾನು ದೆಹಲಿ ರಾಜಕಾರಣಕ್ಕೆ ಬಂದರೆ ಮೋದಿಯನ್ನು ಸೋಲಿಸುತ್ತೇನೆ ಎಂದು ಸವಾಲು ಹಾಕಿದ್ದ ತೆಲಂಗಾಣದ ನಾಯಕ ಆರಂಭದಲ್ಲೇ ಸೋರಗುವಂತಾಗಿದ್ದಾರೆ.

ಈ ನಡುವೆ ಮಾರ್ಚ್ 1ರಂದು ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್ ತಮ್ಮ ಹುಟ್ಟು ಹಬ್ಬದ ಅಂಗವಾಗಿ ನಡೆಸಿದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‍ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು.

ಅಲ್ಲಿ ಸ್ಟಾಲಿನ್ ಮುಂದೆ ರಾಷ್ಟ್ರ ರಾಜಕಾರಣ ಪ್ರವೇಶಿಸುವ ಕುರುಹುಗಳನ್ನು ಬಿಡಲಾಯಿತು.
ಹೀಗಾಗಿ ದಕ್ಷಿಣ ಭಾರತದ ಇಬ್ಬರು ಪ್ರಮುಖರ ನಡುವೆಯೇ ಪೈಪೆÇೀಟಿ ಶುರುವಾಗಿದೆ. ಇಬ್ಬರಿಗೂ ರಾಷ್ಟ್ರೀಯ ನಾಯಕರ ಜೊತೆ ಉತ್ತಮ ಬಾಂಧವ್ಯವಿದೆ. ಆರಂಭದಲ್ಲಿ ಪರಸ್ಪರ ಕೈಜೋಡಿಸಿದ್ದ ಚಂದ್ರಶೇಖರ್‍ರಾವ್ ಮತ್ತು ಸ್ಟಾಲಿನ್ ಪರಸ್ಪರ ರಾಷ್ಟ್ರದ ಗದುಗೆಗೆ ಸ್ರ್ಪಗಳಾಗುವ ಲಕ್ಷಣಗಳು ಗೋಚರಿಸಿವೆ.

ಇತ್ತ ಕಾಂಗ್ರೆಸ್ ಸದ್ದಿಲ್ಲದೆ ಎಲ್ಲರನ್ನು ಅಪ್ಪಿಕೊಳ್ಳುವ ಯತ್ನ ನಡೆಸುತ್ತಿದೆ. ತಮಿಳುನಾಡಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಎಲ್ಲಿಯೂ ಕಾಂಗ್ರೆಸ್ ಪಕ್ಷದ ಆಕಾಂಕ್ಷೆಯನ್ನು ವ್ಯಕ್ತಪಡಿಸಲಿಲ್ಲ. ಬದಲಿಗೆ ಮುಂದಿನ ಚುನಾವಣೆಯಲ್ಲಿ ಸಾಮಾಜಿಕ ಮೌಲ್ಯಗಳ ಸಾಮ್ಯತೆ ಇರುವ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಹೊಂದಾಣಿಕೆ ಮುಂದುವರೆಯುವ ಪ್ರಸ್ತಾಪ ಮಾಡಿದ್ದಾರೆ.

ಮಾ.24ರಿಂದ ಮೆತ್ತೆ ಸಾರಿಗೆ ನೌಕರರ ಮುಷ್ಕರ

ಡಿಎಂಕೆ-ಕಾಂಗ್ರೆಸ್ ಜೊತೆ ಕೈಜೋಡಿಸುವುದೇ ಆದರೆ ತೃತೀಯ ರಂಗ ರಚನೆಯ ಪ್ರಯತ್ನ ಮತ್ತೊಮ್ಮೆ ವಿಫಲತೆ ಅನುಭವಿಸಲಿದೆ. ಹೀಗಾಗಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ರ್ಪಸುವ ಘೋಷಣೆ ಮಾಡಿದ್ದಾರೆ. ದಕ್ಷಿಣದ ಗೋವಾ ಚುನಾವಣೆಯಲ್ಲಿ, ಈಶಾನ್ಯದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ದಿದಿ ಅವರ ಟಿಎಂಸಿ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಿದೆ. ಇತ್ತ ಎಡ ಪಕ್ಷಗಳು ಕೂಡ ಜಾತ್ಯತೀತ ಮತಗಳ ಮೇಲೆಯೇ ಕಣ್ಣಿಟ್ಟಿವೆ. ಬಿಆರ್‍ಎಸ್ ಹೊಸ ಸೇರ್ಪಡೆಯಾಗುತ್ತಿದೆ.

ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು ಎಂದು ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಲೇ ದಕ್ಷಿಣ ಭಾರತದ ನಾಯಕರು ಜಾತ್ಯತೀತ ಮತಗಳ ವಿಭಜನೆ ಮೂಲಕ ಬಿಜೆಪಿಗೆ ಕೆಂಪು ಹಾಸಿನ ಸ್ವಾಗತ ಕೋರುತ್ತಿದ್ದಾರೆ.

ಪ್ರಾದೇಶಿಕವಾಗಿ ಹಿಡಿತ ಸಾಸಿದರೂ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡುವ ಅನುಮಾನಗಳು ದಟ್ಟವಾಗಿದೆ. ಹೀಗಾಗಿ ತೃತೀಯ ರಂಗ ಬಲವರ್ಧನೆ, ಕೋಮುವಾದಿಗೆ ವಿರುದ್ಧವಾಗಿ ಪರ್ಯಾಯ ಶಕ್ತಿ ಉದಯ ಎಂಬ ಚರ್ಚೆಗಳು ನಡೆದಾಗ ಬಿಜೆಪಿ ಒಳಗೊಳಗೆ ಮುಸಿಮುಸಿ ನಗುವಂತಾಗಿದೆ.

#UMESHKOLIGERE, BJP, government, South State, leadership,

Articles You Might Like

Share This Article