ಶನಿ ಸಂತಾನದಂತೆ ಬಿಜೆಪಿ ಆಡಳಿತ : ವೀರಪ್ಪ ಮೊಯ್ಲಿ ಟೀಕೆ

Social Share

ಬೆಂಗಳೂರು, ನ.14- ಕೃತಜ್ಞತೆ ಇಲ್ಲದ ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಶನಿ ಸಂತಾನದಂತೆ ಆಡಳಿತ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಕಿಡಿಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಜವಾಹರ್‍ಲಾಲ್ ನೆಹರು ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆಹರು ಅವರ ತಂದೆ ಸ್ವತಂತ್ರ ಹೋರಾಟಗಾರರಾಗಿದ್ದರು. ದೇಶಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದರು.

ನೆಹರು ಅವರು ಕೂಡ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದರು. ಇಂದು ಅವರ ಹುಟ್ಟುಹಬ್ಬ. ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಕನಿಷ್ಟ ಅವರನ್ನು ಸ್ಮರಿಸಿಕೊಳ್ಳುವ, ಆಚರಣೆ ಮಾಡುವ ಕೆಲಸ ಮಾಡಿಲ್ಲ. ಇದೊಂದು ಕೃತಘ್ನ ಸರ್ಕಾರ ಎಂದು ಕಿಡಿಕಾರಿದರು.

ದೇಶದ ಸಾಕ್ಷರತೆಗೆ ಬುನಾದಿ ಹಾಕಿದವರು ನೆಹರು. ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಲ್ಲಿ ಅವರ ಮಾದರಿ ಅನುಕರಣೀಯ. ದೇಶದ ನೆಲ-ಜಲ-ಗಡಿ ವಿಷಯದಲ್ಲಿ ಅತ್ಯಂತ ಸೂಕ್ಷ್ಮಮತಿಯಾಗಿದ್ದರು. ನೆಹರು ಒಬ್ಬ ದಾರ್ಶನಿಕರು.

ಕಾಂಗ್ರೆಸ್ ಟಿಕೆಟ್‍ಗೆ ಮುಗಿಬಿದ್ದ ಆಕಾಂಕ್ಷಿಗಳು

ಸುಂದರ ಭಾರತದ ಕನಸು ಕಂಡವರು. ಅವರ ಕಾಲದಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಸ್ಥಾಪನೆ ಸೇರಿದಂತೆ ಹಲವು ಪ್ರಗತಿಗಳಾಗಿದ್ದವು. ಬಿಜೆಪಿಗೆ ಇದಾವುದರ ಸ್ಮರಣೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಎಲ್ಲೆಡೆ ಅರಾಜಕತೆ ಇದೆ. ಶಿಕ್ಷಣ ವ್ಯವಸ್ಥೆ ಶೀಥಲವಾಗಿದೆ. ಜನರನ್ನು ಪರಸ್ಪರ ಎತ್ತಿ ಕಟ್ಟಲಾಗುತ್ತಿದೆ. ಬಿಜೆಪಿ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಅವೈಜ್ಞಾನಿಕ ಮೂಢನಂಬಿಕೆಗಳಿಗೆ ಅವಕಾಶ ನೀಡುತ್ತಿದೆ. ಮತೀಯ ವಾದ ಹೆಚ್ಚಾಗಿದೆ. ರಾಜಕೀಯದಲ್ಲಿ ಧರ್ಮ ಬೆರೆತಿದೆ. ಈ ರೀತಿಯ ಒಡೆದು ಆಳುವ ನೀತಿಯನ್ನು ಬ್ರಿಟಿಷರು ಅನುಸರಿಸಿದ್ದರು ಎಂದು ಹೇಳಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಷಯದಲ್ಲಿ ಇಂದು ಗೊಂದಲ ಸೃಷ್ಟಿಸಲಾಗಿದೆ. 1993ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂ ಸ್ವಾೀಧಿನಪಡಿಸಿಕೊಳ್ಳಲಾಗಿತ್ತು. ಜಾಗತಿಕ ಟೆಂಡರ್‍ನಲ್ಲಿ ರತನ್ ಟಾಟಾ ಮತ್ತು ರೈತಾನ್ ಎಂಬ ಸಂಸ್ಥೆಗಳು ಯಶಸ್ವಿಯಾಗಿದ್ದವು.

ಆದರೆ, ತಮ್ಮ ನಂತರದ ಮುಖ್ಯಮಂತ್ರಿಯಾಗಿದ್ದವರ ಭಂಟನೊಬ್ಬ ರತನ್‍ಟಾಟಾ ಅವರಿಂದ ಲಂಚ ಕೇಳಿದ್ದ. ಇದಕ್ಕೆ ಅಧಿಕೃತ ದಾಖಲೆ ಇದೆ. ಪತ್ರಿಕಾ ಹೇಳಿಕೆಯೂ ಇದೆ. ರತನ್ ಟಾಟಾ ಅವರು ಲಂಚ ಕೊಟ್ಟು ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಯಿಂದ ಹಿಂದೆ ಸರಿದರು.

ನಂತರ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾದಾಗ ಕಾಮಗಾರಿ ಮುಂದುವರೆಯಿತು. ನಿಲ್ದಾಣ ಉದ್ಘಾಟನೆಯಾಯಿತು. ಈ ವಿಮಾನ ನಿಲ್ದಾಣಕ್ಕಾಗಿ ಏನೂ ಮಾಡದಿದ್ದವರು ಮೊನ್ನೆ ಕಾರ್ಯಕ್ರಮ ಮಾಡಿ ಭಾರೀ ಪ್ರಚಾರ ಪಡೆದಿದ್ದಾರೆ. ನಿಲ್ದಾಣ ನಿರ್ಮಿಸಿದ ಎಸ್.ಎಂ.ಕೃಷ್ಣ ಅವರನ್ನು ವೇದಿಕೆ ಮೇಲೆ ಕೂರಿಸದೆ ಕೆಳಗೆ ಆಸನ ವ್ಯವಸ್ಥೆ ನೀಡಲಾಗಿತ್ತು ಎಂದು ಹೇಳಿದರು.

ಸಿಗರೇಟ್ ವಿಚಾರಕ್ಕೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದಿನ ರಾತ್ರಿ ತಮಗೂ ಕರೆ ಮಾಡಿದರು. ನಾನು ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದೆ. ಅವರಿಗೂ ಕರೆ ಬಂದಿತ್ತು. ಆದರೆ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ ಕಾರಣ ನಾವು ಹೋಗಲಿಲ್ಲ. ಕಾರ್ಯಕ್ರಮಕ್ಕೆ ಹೋಗಿ ಮೋದಿಯವರ ಪೊಳ್ಳು ಭಾಷಣ ಕೇಳಬೇಕಿತ್ತು. ಅದಕ್ಕಾಗಿ ಹೋಗಲಿಲ್ಲ ಎಂದು ಹೇಳಿದರು.

ಬಿಜೆಪಿ ಸುಳ್ಳನ್ನೇ ಸತ್ಯ ಮಾಡುತ್ತಿದೆ. ನಾವು ಸತ್ಯವನ್ನು ಹೇಳಿ ಅವರನ್ನು ಬೆತ್ತಲೆ ಮಾಡಬೇಕು. ನೋಟು ಅಮಾನೀಕರಣದಿಂದ ದೇಶದ ಆರ್ಥಿಕತೆ ಅಧ್ವಾನವಾಗಿದೆ. ಅವೈಜ್ಞಾನಿಕ ಜಿಎಸ್‍ಟಿಯಿಂದ ಹಣದುಬ್ಬರ ತೀವ್ರವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Articles You Might Like

Share This Article