ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಿ.ಟಿ. ರವಿ

Social Share

ಬೆಂಗಳೂರು,ಜ.2- ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಬದ್ದತೆಯನ್ನು ಪ್ರದರ್ಶಿಸಿದೆ. ಕಾಂಗ್ರೆಸ್ ಪಕ್ಷ ಯಾರ ವಿರುದ್ಧ ಪಾದಯಾತ್ರೆ ನಡೆಸುತ್ತದೆ ಎಂಬುದನ್ನು ಜನತೆಗೆ ತಿಳಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಪಾದಯಾತ್ರೆ ನಡೆಸಲು ಮುಂದಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಆಂತರಿಕ ಗದ್ದುಗೆ ಗುದ್ದಾಟಕ್ಕೆ ಪಾದಯಾತ್ರೆ ನಡೆಸುತ್ತಿರಬಹುದು. ಸುಳ್ಳು ಹೇಳಿಕೊಂಡು ಪಾದಯಾತ್ರೆ ಮಾಡಬೇಡಿ, ಆರೋಗ್ಯ ಸುಧಾರಣೆಗೆ ಬೇಕಾದರೆ ಪಾದಯಾತ್ರೆ ಮಾಡಿ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯನ್ನು ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ. ಆ ಬದ್ದತೆ ಇರುವುದರಿಂದಲೇ ಕೇಂದ್ರ ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಲಾಗಿದೆ. ಕೇಂದ್ರವು ಇದಕ್ಕೆ ತಾತ್ವಿಕ ಅನುಮೋದನೆಯನ್ನು ಕೊಟ್ಟಿದೆ. ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಬೇಕಾಗಿರುವುದರಿಂದ ವಿಳಂಬವಾಗಿರಬಹುದು. ಆರು ವರ್ಷ ಅಧಿಕಾರ ನಡೆಸಿದ ನೀವು ಈ ಯೋಜನೆಯನ್ನು ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಯಾರ ವಿರುದ್ದ ಪಾದಯಾತ್ರೆ ಮಾಡುತ್ತದೆ? ಏನು ಉದ್ದೇಶ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತೀದ್ದೀರಿ? ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದವರು, ಅವರ ಕಾಲದಲ್ಲಿ ಏನು ಮಾಡಿದರು? ಹಿಂದೆ ಕೃಷ್ಣೆ ಯೋಜನೆ ಇಟ್ಟುಕೊಂಡು ಯಾತ್ರೆ ಮಾಡಿದ್ದರು. ಆಗ ಅಧಿಕಾರಕ್ಕೆ ಬಂದಿದ್ದರೂ ಈಗಲೂ ಹಾಗೇ ಆಗಬಹುದು ಎನ್ನುವ ಭ್ರಮೆ ಇರಬಹುದೇನೋ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮ ಕಾಲದಲ್ಲಿ ವಿಸ್ತೃತ ಯೋಜನಾ ವರದಿ(ಡಿಪಿಆರ್) ಆಯಿತು ಎಂದು ಹೇಳುತ್ತಾರೆ. ಕಾಂಗ್ರೆಸ್‍ನವರು ನಮ್ಮ ಕಾಲದಲ್ಲಿ ಎನ್ನುತ್ತಾರೆ. ಯಾವುದು ಸತ್ಯ, ಯಾವುದು ಮಿಥ್ಯ ಎಂದು ಪ್ರಶ್ನಿಸಿದರು. ಈಗ ಜೈಲು, ಬೈಲು ಅಥವಾ ಭ್ರಷ್ಟಾಚಾರ ಮಾದರಿ ಹೋಗಿದೆ. ಜನರು ಅಭಿವೃದ್ಧಿ ಮಾದರಿಗೆ ಮತ ಹಾಕುತ್ತಾರೆ ಎಂಬುದನ್ನು ಮರೆಯಬಾರದು. ಭ್ರಷ್ಟಾಚಾರವೇ ಸಾಧನೆ ಎಂದರೆ ಅದಕ್ಕಿಂತ ನಾಚಿಗೇಡಿನ ಸಂಗತಿ ಇನ್ನೊಂದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕೆಂಬುದನ್ನು ಸಿದ್ದರಾಮಯ್ಯ ಯಾರಿಗೆ ಹೇಳಿದರು ಎಂಬುದನ್ನು ಡಿ.ಕೆ.ಶಿವಕುಮಾರ್ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಬಿಜೆಪಿ ಏನೇ ಯೋಜನೆ ತಂದರೂ ಕಾಂಗ್ರೆಸ್ ವಿರೋಧಿಸುತ್ತದೆ. ಇದು ದೇಶಕ್ಕೆ ಅಪಾಯಕಾರಿ. ಸಿಎಎ ಜÁರಿಗೆ ತಂದಾಗ ಕೂಡ ಕಾಂಗ್ರೆಸ್ ವಿರೋಧಿಸಿತ್ತು ನೆಹರೂ ಅವರೇ ತಂದಿದ್ದರು, ಅದನ್ನು ನಾವು ಜÁರಿಗೆ ತಂದಾಗ ವಿರೋಧ ಮಾಡಿದರು ಎಂದು ದೂರಿದರು.
ಸಂವಿಧಾನ 370ನೇ ವಿಧಿ ತಂದಾಗಲೂ ಕಾಂಗ್ರೆಸ್ ವಿರೋಧಿಸಿತು. ರಾಷ್ಟ್ರೀಯ ಶಿಕ್ಷಣ ನೀತಿ( ಎನ್ ಇ ಪಿ),ಗೋ ಹತ್ಯೆ ನಿಷೇಧ ಕಾಯಿದೆ,ಮತಾಂತರ ನಿಷೇಧ ಕಾಯಿದೆ, ಲವ್ ಜಿಹಾದ್ ನಿಷೇಧಕ್ಕೂ ಕಾಂಗ್ರೆಸ್ ವಿರೋಧಿಸಿತು. ಈಗ ಮತಾಂತರಕ್ಕೆ ವಿರೋಧ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ಇದೇ 7, 8 , 9ರಂದು ಚಿಂತನಾ ಬೈಠಕ್ ನಡೆಯಲಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿವೆಯೇ ಎಂಬುದರ ಬಗ್ಗೆ ಪರಾಮರ್ಶೆ ನಡೆಯಲಿದೆ. ಪಕ್ಷದ ಸಂಘಟನೆ, 2023ರ ಚುನಾವಣೆ ಸೇರಿದಂತೆ ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶದ ಬಗ್ಗೆಯೂ ಆತ್ಮಾವಲೋಕ ನಡೆಯಲಿದೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಯಾವ ಕಾಲದಲ್ಲಿ ಏನು ನಿರ್ಧಾರ ಮಾಡಬೇಕು ಎಂಬುದು ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಪಕ್ಷದ ನಿರ್ಣಯವನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಹೇಳಿದರು.

Articles You Might Like

Share This Article