ಹೈಕೋರ್ಟ್ CJ ನಿಗಾದಲ್ಲಿ PSI ಹಗರಣ ತನಿಖೆಗೆ ಸುರ್ಜೆವಾಲ ಆಗ್ರಹ

Social Share

ಬೆಂಗಳೂರು,ಜ.25- ಪಿಎಸ್‍ಐ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಸರ್ಕಾರ ವ್ಯವಸ್ಥಿತವಾದ ವ್ಯೂಹ ರಚನೆ ಮಾಡಿದೆ, ತನಿಖೆ ನಡೆಸುವ ತನಿಖಾಕಾರಿಗಳನ್ನೇ ವಿಚಾರಣೆಗೆ ಒಳಪಡಿಸುವ ಅಗತ್ಯ ಇರುವುದರಿಂದ ಹೈಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳ ನಿಗಾವಣೆಯಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಹಿಂದಿನ ಗೃಹ ಸಚಿವ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ವಿಚಾರಣೆ ನಡೆಸಿಲ್ಲ. ಇವರಿಬ್ಬರ ಮೂಗಿನಡಿಯೇ ಏನೇಲ್ಲಾ ನಡೆಯುತ್ತಿದೆ ಎಂದು ಪ್ರಶ್ನಿಸಿದರು.

ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು, ಇಲ್ಲವಾದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಠಾಣ್ ಚಿತ್ರದ ವಿರುದ್ಧ ಕರ್ನಾಟಕದಲ್ಲೂ ಭುಗಿಲೆದ್ದ ಆಕ್ರೋಶ

ಆರೋಪಿಯ ಪತ್ರ:
ಪಿಎಸ್‍ಐ ಹಗರಣದಲ್ಲಿ ಬಂನತನಾಗಿ, ಈಗ ಜಾಮೀನಿನ ಮೇಲೆ ಹೊರಗಿದ್ದ ಪ್ರಮುಖ ಆರೋಪಿ ಡಿ.ಆರ್.ಪಾಟೀಲ್ ಲೋಕಾಯುಕ್ತರಿಗೆ ಬರೆದಿರುವ ಪತ್ರವನ್ನು ಪತ್ರಿಕಾಗೋಷ್ಠಿಯಲ್ಲಿ ಸುರ್ಜೇವಾಲ ಬಿಡುಗಡೆ ಮಾಡಿದರು.

ಪತ್ರದಲ್ಲಿ ಆರೋಪಿ ಡಿ.ಆರ್.ಪಾಟೀಲ್ ಲೋಕಾಯುಕ್ತರ ಜೊತೆಗೆ, ಸಿಐಡಿಯ ಎಡಿಜಿಪಿ, ಕಲಬುರಗಿ ಪೆÇಲೀಸ್‍ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಗೃಹ ಸಚಿವ ಅರಗಜ್ಞಾನೇಂದ್ರ ಸೇರಿ ಎಲ್ಲಾ ಮಾಧ್ಯಮಗಳಿಗೆ ಪತ್ರ ಬರೆದಿದ್ದು, ಜೊತೆಯಲ್ಲಿ ಪಿಎಸ್‍ಐ ಹಗರಣದ ತನಿಖಾಕಾರಿ ಶಂಕರಗೌಡ ಪಾಟೀಲ್‍ರೊಂದಿಗೆ ನಡೆಸಿದ ಸಂಭಾಷಣೆಯ ಧ್ವನಿಮುದ್ರಿಕೆ ಇರುವ ಪೆನ್ ಡ್ರೈವ್ ಅನ್ನು ಅಂಟಿಸಿ ರವಾನಿಸಿದ್ದಾನೆ.

ಪತ್ರದಲ್ಲಿ ನಾನು ಪ್ರಕರಣದ ಆರೋಪಿಯಾಗಿದ್ದು, ಸದ್ಯಕ್ಕೆ ಜಾಮೀನಿನ ಮೇಲೆ ಹೊರಗಿದ್ದೇನೆ. ಡಿವೈಎಸ್‍ಪಿ ಶಂಕರ ಗೌಡ ಪಾಟೀಲ್ ತನಿಖಾಕಾರಿಯಾಗಿದ್ದಾರೆ. ತನಿಖೆಯ ಸಂದರ್ಭದಲ್ಲಿ ಮೂರು ಕೋಟಿ ಲಂಚ ನೀಡಿದರೆ ಈ ಕೇಸ್‍ನಿಂದ ನಿನಗೆ ಬಿಡುಗಡೆ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು. ಅಷ್ಟೊಂದು ಹಣ ನೀಡಲು ನನಗೆ ಸಾಧ್ಯವಿಲ್ಲ ಎಂದು ಹೇಳಿದ್ದೆ. ಹಣ ಕೊಡದೇ ಇದ್ದರೆ ಬಾಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಡಿವೈಎಸ್‍ಪಿ ಎದರಿಸಿದರು.

ಕೊನೆಗೆ ನಾನು ಒಪ್ಪಿಕೊಂಡೆ ನ. ನಂತರ ನನ್ನ ಅಳಿಯ ಶ್ರೀಕಾಂತ್ ಕಡೆಯಿಂದ 76 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದೇನೆ. ಉಳಿದ ಹಣವನ್ನು ಜಾಮೀನು ಆದ ಮೇಲೆ ಕೊಡುತ್ತೇನೆ ಎಮದು ಹೇಳಿದ್ದೆ. ಈಗ ನನಗೆ ಜಾಮೀನು ದೊರೆತು ಹೊರಗೆ ಇದ್ದೇನೆ. ಡಿವೈಎಸ್‍ಪಿ ಶಂಕರಗೌಡ ಪಾಟೀಲ್ ಬಾಕಿ 2 ಕೋಟಿ 24 ಲಕ್ಷ ರೂಪಾಯಿಗಳನ್ನು ನೀಡುವಂತೆ ಕಿರುಕೂಳ ನೀಡುತ್ತಿದ್ದಾರೆ.

ನನಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹಣ ಕೊಡದೆ ಇದ್ದರೆ ನಿನ್ನ ಮೇಲೆ ಅನೇಕ ಎಫ್‍ಐ ಆರ್ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಈ ಭ್ರಷ್ಟ ಅಕಾರಿಯ ವಿರುದ್ಧ ಶಿಸ್ತು ಕಾನುನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡುವುದಾಗಿ ಕೇಳಿಕೊಂಡಿದ್ದೇನೆ.

ಪತ್ರ ಮತ್ತು ಆಡಿಯೋ ಬಿಡುಗಡೆ ಮಾಡಿದ ಬಳಿಕ ಮಾತು ಮುಂದುವರೆಸಿದ ರಣದೀಪ್‍ಸಿಂಗ್ ಸುರ್ಜೇವಾಲ, ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಮಾರಾಟಕ್ಕಿಡಲಾಗಿದೆ. ವಿಧಾನಸೌಧವನ್ನು ಹುದ್ದೆಗಳ ಮಾರಾಟದ ಮಂಡಿ ಅಥವಾ ಮಾರುಕಟ್ಟೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಕರ್ನಾಟಕದಲ್ಲಿ ಸಿಎಂ ಹುದ್ದೆಯ ಹೆಸರನ್ನು ಬದಲಿಸಬೇಕಿದೆ. ಮುಖ್ಯಮಂತ್ರಿಗಳು ಹಾಗೂ ಅವರ ಸಚಿವರು ರಾಜ್ಯದ ಯುವಕರ ಭವಿಷ್ಯವನ್ನು ಪ್ರತಿ ನಿತ್ಯ ಸರ್ವನಾಶ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ರಾಜ್ಯದ ಯುವ ಜನರಿಗೆ 1 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಇವರ ಆಡಳಿತದಲ್ಲಿ 1300 ಕೈಗಾರಿಕಾ ಕೇಂದ್ರಗಳು ಬಂದ್ ಆಗಿದ್ದು ಇದರ ಪರಿಣಾಮವಾಗಿ 1 ಲಕ್ಷ ಉದ್ಯೋಗಗಳು ನಷ್ಟವಾಗಿವೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ

ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಹೆಚ್ಚು ಮೊತ್ತ ನೀಡಿದವರಿಗೆ ಹರಾಜು ಮಾಡಲಾಗುತ್ತಿದೆ. ಇದು ಸರ್ಕಾರಿ ಉದ್ಯೋಗಗಳ ಮಾರಾಟವಾಗುವ ಮಂಡಿ ಮಾರುಕಟ್ಟೆ ಯಂತಾಗಿದೆ. ಲೋಕೋಪಯೋಗಿ ಇಲಾಖೆಯ. ಎಇಇ, ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ, ಸಹಕಾರ ಇಲಾಖೆಯಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್, ಕೆಪಿಟಿಸಿಎಲ್‍ನಲ್ಲಿ ಹಲವು ಹುದ್ದೆ ಸೇರಿದಂತೆ ಎಲ್ಲವನ್ನೂ ಮಾರಾಟವಾಗುತ್ತಿದೆ. ಇನ್ನು ಆಘಾತಕಾರಿ ಸಂಗತಿ ಎಂದರೆ ಪಿಎಸ್‍ಐ ಹುದ್ದೆಗಳು ಕೂಡ ಮಾರಾಟವಾಗಿವೆ. ಆಮೂಲಕ ಕರ್ನಾಟಕದ ಯುವಕರು ತತ್ತರಿಸಿದ್ದಾರೆ ಎಂದರು.

545 ಪಿಎಸ್‍ಐ ಹುದ್ದೆಗಳಿಗೆ 54 ಸಾವಿರಕ್ಕೂ ಹೆಚ್ಚು ಯುವಕರು ಅರ್ಜಿ ಹಾಕಿ, ಪರೀಕ್ಷೆ ಬರೆದಿದ್ದರು. ಪರೀಕ್ಷಾ ಕೇಂದ್ರದಲ್ಲಿ ಕ್ಯಾಮೆರಾ ಬಂದ್ ಮಾಡಿ, ಬ್ಲೂಟೂತ್ ಬಳಸಿ ಪರೀಕ್ಷೆ ಬರೆಸಲಾಗಿತ್ತು. ಒಎಂ ಆರ್ ಉತ್ತರ ಪತ್ರಿಕೆ ತಿದ್ದುವ ಮೂಲಕ ಅಕ್ರಮ ಮಾಡಲಾಗಿತ್ತು. ಪ್ರತಿ ಹುದ್ದೆಯನ್ನು 80 ಲಕ್ಷಕ್ಕೂ ಹೆಚ್ಚು ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ವಿವರಿಸಿದರು.

ಆರಂಭದಲ್ಲಿ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಯಾವುದೇ ಅಕ್ರಮ ನಡೆದಿಲ್ಲ, ಎಲ್ಲವೂ ಸರಿಯಾಗಿದೆ ಎಂದು ವಾದಿಸಿದರು. ರಾಜ್ಯಾದ್ಯಂತ ಪ್ರತಿಭಟನೆಗಳು ತೀವ್ರವಾದಾಗ ತನಿಖೆ ಆರಂಭವಾಯಿತು. 100ಕ್ಕೂ ಹೆಚ್ಚು ಮಂದಿ ಬಂಧನವಾಗಿದೆ. ಶಾಸಕರ ಭವನದಲ್ಲಿ ಬಿಜೆಪಿ ಶಾಸಕರು ಪಿಎಸ್‍ಐ ಹುದ್ದೆಗಳ ಮಾರಾಟಕ್ಕೆ ಮಧ್ಯವರ್ತಿಗಳಾಗಿದ್ದಾರೆ. ಬಿಜೆಪಿ ಭ್ರಷ್ಟ ಜನತಾ ಪಕ್ಷವಾಗಿ ವಿಧಾನಸೌಧವನ್ನು ಹಣ ಪಡೆಯುವ ಭ್ರಷ್ಟಾಚಾರ ಕೇಂದ್ರವಾಗಿ ಮಾಡಿದೆ ಎಂದು ಟೀಕಿಸಿದರು.

ಈ ಹಗರಣದಲ್ಲಿ ಬಂಧನವಾಗಿರುವ ಎಡಿಜಿಪಿ ಅಕಾರಿ ನ್ಯಾಯಮೂರ್ತಿಗಳ ಮುಂದೆ ಹೇಳಿಕೆ ನೀಡಲು ಸಿದ್ಧರಾಗಿದ್ದು, ಸರ್ಕಾರ ಇದಕ್ಕೆ ಅವಕಾಶ ನೀಡುತ್ತಿಲ್ಲ. ಬಿಜೆಪಿ ಶಾಸಕ ಯತ್ನಾಳ್ ಅವರು ಈ ಹಗರಣದಲ್ಲಿ ಬಿಜೆಪಿಯ ಹಿರಿಯ ಸಚಿವರು, ನಾಯಕರು ಅವರ ಮಕ್ಕಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಮಾಡಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇತ್ತೀಚಿನ ಬೆಳವಣಿಗೆಗಳು ಇನ್ನಷ್ಟು ಆಘಾತಕಾರಿಯಾಗಿವೆ. ಈ ಹಗರಣದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಪೆÇಲೀಸರನ್ನು ದಬ್ಬಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಈಗ ಆತ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ರ್ಪಸುವ ಇಂಗಿತ ವ್ಯಕ್ತಪಡಿಸಿದ್ದ.

ಈಗ ಆತ ಲೋಕಾಯುಕ್ತರಿಗೆ ಬರೆದ ಪತ್ರ ಬೆಳಕಿಗೆ ಬಂದಿದ್ದು, ಇದರಲ್ಲಿ ಪ್ರಕರಣದ ತನಿಖಾಧಿಕಾರಿ 3 ಕೋಟಿ ಲಂಚದ ಬೇಡಿಕೆ ಇಟ್ಟಿದ್ದು, ಅದರಲ್ಲಿ 76 ಕೋಟಿ ಹಣವನ್ನು ನೀಡಿದ್ದೇನೆ ಎಂದು ಹೇಳಿದ್ದಾನೆ. ಇಡೀ ಹಗರಣವನ್ನು ಮುಚ್ಚಲು ಈ ಬೇಡಿಕೆ ಇಡಲಾಗಿತ್ತು ಎಂದು ಲೋಕಾಯುಕ್ತಕ್ಕೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ. ಸಿಎಂ ಬೊಮ್ಮಾಯಿ ಹಾಗೂ ಗೃಹಸಚಿವ ಅರಾಗ ಜ್ಞಾನೇಂದ್ರ ಅವರ ಮೂಗಿನ ಕೆಳಗೆ ಏನೆಲ್ಲಾ ಆಗುತ್ತಿದೆ? ಸರ್ಕಾರ ಸರಿಯಾದ ತನಿಖೆ ನಡೆಸುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹುದ್ದೆ ಮಾರಾಟವಾಗುತ್ತಿವೆ. ಮಾಜಿ ಗೃಹಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಅವರ ನೆರಳಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿವೆ. ಯತ್ನಾಳ್ ಅವರು ಆರೋಪಿಸಿರುವಂತೆ ಇದೆಲ್ಲದರ ಹಿಂದೆ ಪ್ರಬಲ ರಾಜಕೀಯ ನಾಯಕರ ಪ್ರಭಾವವಿದೆ. ಈ ಪ್ರಕರಣ ಮುಚ್ಚಲು, ಪ್ರಮುಖ ಅಪರಾಗಳ ರಕ್ಷಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಈ ಎಲ್ಲಾ ಬೆಳವಣಿಗೆಗಳು ಸ್ಪಷ್ಟಪಡಿಸುತ್ತವೆ. ರಾಜ್ಯ ಸರ್ಕಾರದಿಂದ ನ್ಯಾಯಯುತ ತನಿಖೆ ಅಸಾಧ್ಯ.

ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು

ಈ ಪ್ರಕರಣದ ತನಿಖಾಕಾರಿಗಳನ್ನು ತನಿಖೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.2011ರ ಕೆಪಿಎಸ್ ಸಿ ನೇಮಕಾತಿ ಅಕ್ರಮವನ್ನು ಈ ಸರ್ಕಾರ ಮುಚ್ಚಿಹಾಕಲು ಪ್ರಯತ್ನಿಸಿದೆ. ಅದೇ ರೀತಿ ಈಗ ಪಿಎಸ್‍ಐ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಬಿಜೆಪಿ ಬಿ ಟೀಮ್ ವಿಚಾರವಾಗಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರ ರೈತರ ವಿರುದ್ಧ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ತಂದಾಗ ಅದಕ್ಕೆ ಬೆಂಬಲ ನೀಡಿದವರು ಯಾರು? ಮೈಸೂರಿನಲ್ಲಿ ಬಿಜೆಪಿ ಮೊದಲ ಮೇಯರ್ ಆಯ್ಕೆ ಮಾಡಲು ಬೆಂಬಲ ನೀಡಿದವರು ಯಾರು? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ಅವರು ಆತ್ಮಸಾಕ್ಷಿಯ ಉತ್ತರ ನೀಡಲಿ ಎಂದು ತಿರುಗೇಟು ನೀಡಿದರು.

BJP, govt, trying, cover up, PSI, scam, Karnataka, Randeep SinghSurjewala,

Articles You Might Like

Share This Article