ಬೆಂಗಳೂರು,ಜ.4- ಅಭಿವೃದ್ಧಿಯನ್ನು ಕೇಳಬೇಡಿ, ದ್ವೇಷ ಬಿತ್ತುವುದನ್ನು ಬಿಡಬೇಡಿ ಇದು ಚುನಾವಣೆಗೆ ಬಿಜೆಪಿಯ ಘೋಷವಾಕ್ಯ ಹಾಗೂ ಕಾರ್ಯಕರ್ತರಿಗೆ ಕಾರ್ಯಸೂಚಿ. ಧರ್ಮ, ದ್ವೇಷಗಳ ಮೊರೆ ಹೋಗಲು ತೀರ್ಮಾನಿಸಿದ ಬಿಜೆಪಿ, ತಮ್ಮ ಸರ್ಕಾರ ಅಭಿವೃದ್ಧಿಯಲ್ಲಿ ವಿಫಲವಾಗಿದೆ, ಹೇಳಿಕೊಳ್ಳಲು ಯಾವ ಸಾಧನೆಯನ್ನೂ ಮಾಡಿಲ್ಲ ಎಂಬುದನ್ನು ಘಂಟಾಘೋಷವಾಗಿ ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಟ್ವೀಟ್ ಮಾಡಿರುವ ಕಾಂಗ್ರೆಸ್, ಒಳಚರಂಡಿ ಮತ್ತು ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರ ಹೇಳಿತ್ತು, ರಾಜ್ಯಕ್ಕೆ ನಯಾಪೈಸೆ ಅಭಿವೃದ್ಧಿ ಕೊಡುಗೆ ನೀಡದ ಬಿಜೆಪಿಗೆ ಇಂದು ಅಭಿವೃದ್ಧಿ ಎಂಬುದು ಸಣ್ಣ ವಿಷಯವಾಗಿದೆ, ಅದರ ಬಗ್ಗೆ ಮಾತೇ ಆಡಬೇಡಿ ಎನ್ನುತ್ತಿದೆ ಎಂದು ಆರೋಪಿಸಿದೆ.
ಅಭಿವೃದ್ಧಿ ಶೂನ್ಯತೆ, ನಿರುದ್ಯೋಗ ಹೆಚ್ಚಳ, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ರಸ್ತೆ ಗುಂಡಿಯ ಸಾವುಗಳು, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನೇಮಕಾತಿ ಹಗರಣಗಳು, ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳಾಗಿವೆ. ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ ಲವ್ ಜಿಹಾದ್ ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸಿ ಜನರ ಗಮನ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ. ಇದು ಸರ್ಕಾರದ ವೈಫಲ್ಯವಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಲವ್ ಜಿಹಾದ್ ಬಗ್ಗೆ ಮಾತನಾಡಿ ಕೋಮು ಪ್ರಚೋದನೆ ಮಾಡುವುದನ್ನು ಬಿಟ್ಟು, ಮೊದಲು ಡಾಲರ್ ಬಗ್ಗೆ ಮಾತಾಡಲಿ. ಡಾಲರ್ ಎದುರು ರೂಪಾಯಿ ಮೌಲ್ಯ 83 ರೂಪಾಯಿಗಿಂತಲೂ ತಳಮಟ್ಟಕ್ಕೆ ಕುಸಿದಿದೆ.
ಸಿಂಗಾರಗೊಂಡ ಸಿಎಂ ತವರು ಜಿಲ್ಲೆ ಹಾವೇರಿ, ಅಕ್ಷರ ಜಾತ್ರೆಗೆ ಕ್ಷಣಗಣನೆ
ಈಗ ಡಾಲರ್ ಎದುರು ರೂಪಾಯಿ ಅಪಮೌಲ್ಯದ ಬಗ್ಗೆ ಮಾತಾಡಲು ನಳೀನ್ ಕುಮಾರ್ ಕಟೀಲ್ರಿಗೆ ಹಿಂಜರಿಕೆ ಏಕೆ. ವೈಫಲ್ಯಗಳ ಪ್ರಶ್ನೆಗಳನ್ನು ಎದುರಿಸಲಾಗದೆ ಲವ್ ಜಿಹಾದ್ ಮೊರೆ ಹೋಗಿದ್ದಾರೆ ಎಂದು ಲೇವಡಿ ಮಾಡಿದೆ.
BJP, Hate religion, Congress, development,