ಜೈಪುರ,ಮಾ.14- ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರಸ್ ಮುಖಂಡ ಸುಖ್‍ಜಿಂದರ್ ಸಿಂಗ್ ರಾಂಧವಾ ನೀಡಿರುವ ಹೇಳಕೆ ಬಿಜೆಪಿ ಪಕ್ಷವನ್ನು ಕೆರಳಿಸಿದೆ.
ನಾನು ಎಲ್ಲಾ ನಾಯಕರನ್ನು ಒತ್ತಾಯಿಸುತ್ತಿದ್ದೇನೆ – ನಿಮ್ಮೊಳಗೆ ಜಗಳವಾಡುವುದನ್ನು ನಿಲ್ಲಿಸಿ ಮತ್ತು ಮೋದಿಯನ್ನು ಮುಗಿಸಲು ಯೋಚಿಸಿ ಮೋದಿಯನ್ನು ಮುಗಿಸಿದರೆ ಹಿಂದುಸ್ಥಾನ ಉಳಿಯಬಹುದು. ಮೋದಿ ಇದ್ದರೆ ಹಿಂದುಸ್ತಾನ ಮುಗಿದೇ ಹೋಯಿತು,” ಎಂದು ಸುಖ್‍ಜಿಂದರ್ ಸಿಂಗ್ ರಾಂಧವಾ ಹೇಳಿದ್ದರು.
ರಾಹುಲ್‍ಗಾಂಧಿ ಅವರು ದೇಶದ ಮಾನವನ್ನು ವಿದೇಶದಲ್ಲಿ ತೆಗೆದ ಹಾಗೆ ಅವರದೆ ಪಕ್ಷದ ಮುಖಂಡ ಸುಖ್‍ಜಿಂದರ್‍ಸಿಂಗ್ ಮೋದಿ ವಿರುದ್ಧ ಮಾತನಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುವುದಾಗಿ ಬಿಜೆಪಿ ಮುಖಂಡರು ಗುಡುಗಿದ್ದಾರೆ.
“ಕೋಮುದ್ವೇಷದ ವಿಷ ಬೀಜ ಬಿತ್ತಲು ತನು-ಮನ-ಧನ ಅರ್ಪಿಸುವ ಪಕ್ಷ ಬಿಜೆಪಿ”
ಹಿಂಡನ್‍ಬರ್ಗ್ ವರದಿ ಮೇಲೆ ಕ್ರಮಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರಾಜಸ್ಥಾನದ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಾಂಧವಾ ಅವರು, ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಭಿನ್ನಾಭಿಪ್ರಾಯ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಮೋದಿ ಮುಗಿಸಲು ಎಲ್ಲರೂ ಒಂದಾಗುವಂತೆ ನೀಡಿರುವ ಹೇಳಿಕೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಪುಲ್ವಾಮಾ ಹೇಗೆ ಸಂಭವಿಸಿತು? ಚುನಾವಣೆಗೆ ಸ್ರ್ಪಧಿಸಲು ಹೀಗೆ ಮಾಡಿದ್ದೀರಾ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ರಾಂಧವ ಅವರು ಮೋದಿಗಿಂತ ದೊಡ್ಡ ದೇಶಭಕ್ತರಿಲ್ಲ ಎನ್ನುತ್ತಾರೆ. ಮೋದಿಯವರಿಗೆ ದೇಶಭಕ್ತಿಯ ಅರ್ಥವೇ ಗೊತ್ತಿಲ್ಲ. ಬಿಜೆಪಿಯ ಯಾವ ನಾಯಕ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹೃದಯ ಹಾಗೂ ಆರೋಗ್ಯಕ್ಕೆ ಡೇಂಜರ್ ಎಲೆಕ್ಷನ್ ಟೆನ್ಷನ್
ರಾಂಧವಾ ಅವರು, ದೇಶದಲ್ಲಿ ಹುತಾತ್ಮತೆಗೆ ಅವಮಾನ ಮಾಡಿದ್ದಾರೆ, ಗೌರವಾನ್ವಿತ ಪ್ರಧಾನಿ ಹುದ್ದೆಯ ಘನತೆಗೆ ಅವಮಾನ ಮಾಡಿದ್ದಾರೆ, ಇಡೀ ದೇಶವನ್ನು ಅವಮಾನಿಸಲಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ವಾಗ್ದಾಳಿ ನಡೆಸಿದ್ದಾರೆ.
BJP, hits, back, Congress, leader, Randhawa, defeat Modi, Pulwama, remarks,