ನವದೆಹಲಿ,ಡಿ.17- ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾಲ್ ಭುಟ್ಟೋ ವಿರುದ್ಧ ದೇಶಾದ್ಯಂತ ಇಂದು ಪ್ರತಿಭಟನೆಗಳು ನಡೆದಿದ್ದು, ಭಾರೀ ಆಕ್ರೋಗಳು ವ್ಯಕ್ತವಾಗಿವೆ.
ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ರಾಜಧಾನಿ ಕೇಂದ್ರ ಹಾಗೂ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ವರದಿಯಾಗಿವೆ. ಮಹಾರಾಷ್ಟದ ಪುಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ಸ ಬವಾಂಕುಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಮುಂಬೈನಲ್ಲೂ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪಾಕಿಸ್ತಾನ ಮತ್ತು ಅಲ್ಲಿನ ವಿದೇಶಾಂಗ ಸಚಿವನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಲಾಗಿದೆ. ದೆಹಲಿಯಲ್ಲಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯ ಮುಂಭಾಗದಲ್ಲೂ ಪ್ರತಿಭಟನೆಗಳಾಗಿವೆ. ಪ್ರತಿಭಟನೆಗಾಗಿಯೇ ಸಿದ್ಧ ಪಡಿಸಿದ ಪಾಕಿಸ್ತಾನ ಮತ್ತು ಅಲ್ಲಿನ ಸರ್ಕಾರದ ವಿರುದ್ಧ ಹಾಡುಗಳನ್ನು ನುಡಿಸಲಾಗಿದೆ.
ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಬಸ್..!
ನ್ಯೂಯಾರ್ಕ್ನ ವಿಶ್ವಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಲಾಲ್ ಪ್ರಧಾನಿ ಅವರನ್ನು ನಿಂಸಿದ್ದರು. ಇದು ಜಾಗತಿಕವಾಗಿ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಎಂದು ಬಿಜೆಪಿ ಆರೋಪಿಸಿದೆ.
ಪಾಕಿಸ್ತಾನದಲ್ಲಿ ಸರ್ಕಾರ ಮತ್ತು ಅಲ್ಲಿನ ಸೇನೆಯ ನಡುವೆ ಭಿನ್ನಾಭಿಪ್ರಾಯಗಳಿವೆ. ಅದನ್ನು ಮುಚ್ಚಿಕೊಳ್ಳುವ ಯತ್ನ ನಡೆಸಲಾಗಿದೆ. ಅದೇ ರೀತಿಸ ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿದಿದೆ, ಕಾನೂನು ನಿಷ್ಕ್ರೀಯವಾಗಿದೆ. ಅರಾಜಕತೆ ತಾಂಡವವಾಡುತ್ತಿದೆ. ಇದನ್ನು ಮರೆ ಮಾಚಲು ಅಲ್ಲಿನ ರಾಜಕಾರಣಿಗಳು ವಿವಾದಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
#BJP, #NationwideProtests, #Pakistan, #BilawalBhuttos, #ForeignMinister, #PMModi,