Saturday, September 23, 2023
Homeಇದೀಗ ಬಂದ ಸುದ್ದಿವಿಶೇಷ ಸಂಸತ್ ಅಧಿವೇಶನ : ಬಿಜೆಪಿ ಸಂಸದರಿಗೆ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ

ವಿಶೇಷ ಸಂಸತ್ ಅಧಿವೇಶನ : ಬಿಜೆಪಿ ಸಂಸದರಿಗೆ ಕಡ್ಡಾಯ ಹಾಜರಾತಿಗೆ ವಿಪ್ ಜಾರಿ

- Advertisement -

ನವದೆಹಲಿ,ಸೆ.15- ಸೆಪ್ಟೆಂಬರ್ 18ರಿಂದ ಪ್ರಾರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದ ಸಮಯದಲ್ಲಿ ಬಿಜೆಪಿಯ ಎಲ್ಲಾ ಸಂಸದರು ಕಡ್ಡಾಯವಾಗಿ ಮತ್ತು ಸಕ್ರಿಯವಾಗಿ ಹಾಜರಿರಬೇಕು ಎಂದು ಬಿಜೆಪಿ, ಎಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ ವಿಪ್ ಜಾರಿ ಮಾಡಿದೆ. ಲೋಕಸಭೆಯಲ್ಲಿ ಬಿಜೆಪಿಯ ಎಲ್ಲಾ ಸದಸ್ಯರು ಎಲ್ಲಾ ಐದು ದಿನಗಳ ಕಾಲ ಅಂದರೆ ಸೆ.18ರಿಂದ 22ರವರೆಗೆ ಸದನದಲ್ಲಿ ಸಕಾರಾತ್ಮಕವಾಗಿ ಹಾಜರಾಗಲು ಮತ್ತು ಸರ್ಕಾರದ ನಿಲುವನ್ನು ಬೆಂಬಲಿಸಲು ವಿಪ್ನಲ್ಲಿ ವಿನಂತಿಸಲಾಗಿದೆ.

ವಿಶೇಷ ಅಧಿವೇಶನ ಸಮಯದಲ್ಲಿ ಕೆಲವು ಚರ್ಚೆಗಳನ್ನು ಕೈಗೆತ್ತಿಕೊಂಡು ಕೆಲವು ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಗುತ್ತಿದ್ದು, ಲೋಕಸಭೆಯಲ್ಲಿ ಕೆಲವು ಪ್ರಮುಖ ಶಾಸಕಾಂಗ ವ್ಯವಹಾರ ವನ್ನು ಚರ್ಚೆಗೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

- Advertisement -

ಸಂಸತ್ತಿನ ವಿಶೇಷ ಅಧಿವೇಶನ ಕುರಿತಾದ ಊಹಾಪೋಹಗಳ ಮಧ್ಯೆ ವಿಶೇಷ ಅಧಿವೇಶನ ಕರೆದಿರುವುದರ ನಿಲುವು, ಉದ್ದೇಶ ಮತ್ತು ಅಜೆಂಡಾವನ್ನು ಸರ್ಕಾರ ಬಹಿರಂಗಪಡಿಸಿಲ್ಲ.ಕಳೆದ 75 ವರ್ಷಗಳ ಸಂಸತ್ತಿನ ಇತಿಹಾಸದಲ್ಲಿ ವಿಶೇಷ ಚರ್ಚೆಯನ್ನು ಸರ್ಕಾರ ಪಟ್ಟಿ ಮಾಡಿದ ಒಂದು ದಿನದ ನಂತರ ಈ ವಿಪ್ ಬಂದಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಪರಿಗಣಿಸಲು ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳುವಂತೆ ಸರ್ಕಾರವು ಪಟ್ಟಿ ಮಾಡಿದೆ.

ಬಿಡಿಎ ನಿವೇಶನಕ್ಕೆ ಕಾದಿರುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಲೋಕಸಭೆಯ ಇತರ ಪಟ್ಟಿ ಮಾಡಲಾದ ವ್ಯವಹಾರವು ‘ದಿ ಅಡ್ವಕೇಟ್ಸ್ (ತಿದ್ದುಪಡಿ) ಮಸೂದೆ, 2023 ಮತ್ತು ನಿಯತಕಾಲಿಕಗಳ ಪತ್ರಿಕಾ ಮತ್ತು ನೋಂದಣಿ ಮಸೂದೆ, 2023 ನ್ನು ಒಳಗೊಂಡಿದೆ, ಇದನ್ನು ಈಗಾಗಲೇ ರಾಜ್ಯಸಭೆಯು ಆ.3ರಂದು ಅಂಗೀಕರಿಸಿದೆ.

ಸೆ.17ಕ್ಕೆ ಸರ್ವಪಕ್ಷ ಸಭೆ:
ಪೋಸ್ಟ್ ಆಫೀಸ್ ಬಿಲ್, 2023ನ್ನು ಲೋಕಸಭೆಯ ವ್ಯವಹಾರದಲ್ಲಿ ಪಟ್ಟಿ ಮಾಡಲಾಗಿದೆ. ಈ ಮಸೂದೆಯನ್ನು ಮೊದಲು 2023ರ ಆಗಸ್ಟ್ 10 ರಂದು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು. ವ್ಯವಹಾರದ ಪಟ್ಟಿಯು ತಾತ್ಕಾಲಿಕವಾಗಿದೆ. ಐದು ದಿನಗಳ ವಿಶೇಷ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿ ಸೆ.17 ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ.

ಸರ್ವಪಕ್ಷ ಸಭೆ ಕರೆದಿರುವ ಉದ್ದೇಶವೇನು ಸರ್ಕಾರ ಅಜೆಂಡಾ ಏಕೆ ನೀಡಿಲ್ಲ ಎಂದು ಸೋನಿಯಾ ಗಾಂಧಿ ಈ ಹಿಂದೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು.ಈ ಅಧಿವೇಶನದಲ್ಲಿ ಚರ್ಚೆಯಾಗ ಬಹುದು ಎಂದು ಅಂದಾಜಿಸಲಾಗಿದ್ದ ವಿಷಯಗಳನ್ನು ಹೊರತುಪಡಿಸಿ ಹೊಸ ವಿಷಯಗಳನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಸಂಸತ್ತಿನ 75 ವರ್ಷಗಳ ಇತಿಹಾಸದ ಬಗ್ಗೆ ಮೊದಲ ದಿನದ ಕಲಾಪದಲ್ಲಿ ಚರ್ಚಿಸಲಾಗು ತ್ತದೆ. ಜೊತೆಗೆ 3 ಮಸೂದೆಗಳನ್ನು ಮಂಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ನೇಮಕಕ್ಕೆ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಓರ್ವ ಕೇಂದ್ರ ಸಚಿವರನ್ನು ಒಳಗೊಂಡ ಸಮಿತಿ ರಚನೆಯ ಮಸೂದೆ, ವಕೀಲರ ತಿದ್ದುಪಡಿ ಮಸೂದೆ 2023 ಮತ್ತು ಪೊೀಸ್ಟ್ ಆಫೀಸ್ ಮಸೂದೆ 2023ನ್ನು ಮಂಡಿಸಲಾಗುವುದು ಎಂದು ತಿಳಿಸಲಾಗಿದೆ.

ಈ 3 ಮಸೂದೆಗಳನ್ನು ಈಗಾಗಲೇ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ವಕೀಲರ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಏಕರೂಪ ನಾಗರಿಕ ಸಂಹಿತೆ, ಒಂದು ದೇಶ ಒಂದು ಚುನಾವಣೆ, ಇಂಡಿಯಾ ಹೆಸರನ್ನು ಭಾರತ ಎಂದು ಬದಲಿಸುವುದು, ಅವಧಿಪೂರ್ವ ಚುನಾವಣೆ ಘೋಷಿಸಿ ಸಂಸತ್ತನ್ನು ವಿಸರ್ಜಿಸುವುದು.. ಇತ್ಯಾದಿ ಮಹತ್ವದ ವಿಚಾರಗಳು ಸರ್ಕಾರದ ಅಜೆಂಡಾದಲ್ಲಿ ಇವೆ ಎನ್ನಲಾಗಿತ್ತಾದರೂ ಅದಾವ್ಯುದೂ ಅಧಿಕೃತ ಕಾರ್ಯಸೂಚಿಯಲ್ಲಿ ಇಲ್ಲ.

#BJP, #issues, #whip, #present, #specialParliamentsession,

- Advertisement -
RELATED ARTICLES
- Advertisment -

Most Popular