ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ : ಹಾಡು, ನೃತ್ಯ, ಭಜನೆ ಮಾಡಿ ರಾತ್ರಿಕಳೆದ ಶಾಸಕರು

ಬೆಂಗಳೂರು,ಜು.25- ಮೈಸೂರಿನ ಮೂಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಬಿಜೆಪಿ-ಜೆಡಿಎಸ್‌ ಶಾಸಕರು ಕಳೆದ ರಾತ್ರಿ ಹಾಡು, ಭಜನೆ, ನೃತ್ಯ ಮಾಡಿದ್ದಾರೆ. ನಿನ್ನೆ ಸಂಜೆ ಆರಂಭಿಸಿದ ಧರಣಿಯನ್ನು ರಾತ್ರಿ ಕೂಡಾ ಮುಂದುವರೆಸಿದ್ದರು. ರಾತ್ರಿ ವೇಳೆ ಶಾಸಕರು ಹಾಡು, ನೃತ್ಯ, ಭಜನೆ ಮೂಲಕ ಸಮಯ ಕಳೆದಿದ್ದಾರೆ. ವಿರೋಧಪಕ್ಷದ ಮೊಗಸಾಲೆಯಲ್ಲಿ ತಡರಾತ್ರಿ ಸುಮಾರು 1 ಗಂಟೆವರೆಗೂ ಹಾಡು ಹೇಳಿ ರಂಜಿಸುವುದು, ಭಜನೆ ಮಾಡುವುದು ಹಾಗೂ ಶಾಸಕ ಪ್ರಭು ಚೌವ್ಹಾಣ್‌ ಅವರು ಹಾಡು ಮತ್ತು … Continue reading ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ : ಹಾಡು, ನೃತ್ಯ, ಭಜನೆ ಮಾಡಿ ರಾತ್ರಿಕಳೆದ ಶಾಸಕರು