ಪತ್ನಿ-ಇಬ್ಬರು ಮಕ್ಕಳೊಂದಿಗೆ ಬಿಜೆಪಿ ನಾಯಕ ಆತ್ಮಹತ್ಯೆ

Social Share

ಮಧ್ಯ ಪ್ರದೇಶ (ವಿದಿಶಾ), ಜ.27- ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಬಿಜೆಪಿ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದಿಶಾ ಪಟ್ಟಣದಲ್ಲಿ ನಡೆದಿದೆ. ಕುಟುಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮಾತ್ರೆ ಸೇವಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದಿಶಾ ನಗರದ ಮಂಡಲ ಉಪಾಧ್ಯಕ್ಷ ಮತ್ತು ಬಿಜೆಪಿ ಕಾಪೆರ್ರೇಟರ್ ಸಂಜೀವ್ ಮಿಶ್ರಾ (45) ಎಂಬುವವರು ತಮ್ಮ ಮಕ್ಕಳ ಅನಾರೋಗ್ಯದ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಬರೆದುಕೊಂಡಿದ್ದರು.

ಜನರ ನೋವಿನ ಧ್ವನಿಯಾಗಿ 32ನೇ ವರ್ಷಕ್ಕೆ ಕಾಲಿಟ್ಟಿ `ಈ ಸಂಜೆ’

ತೀವ್ರವಾಗಿ ಬೇಸತ್ತಿದ್ದ ಅವರು ಎಲ್ಲರಿಗೂ ಸಲಾಸ್ ಮಾತ್ರೆ ನೀಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರು ತನ್ನ ಶತ್ರುವಿನ ಮಕ್ಕಳಿಗೂ ಗುಣಪಡಿಸಲಾಗದ ಮಸ್ಕ್ಯುಲರ್ ಡಿಸ್ಟ್ರೋಪಿ ಸಮಸ್ಯೆಯನ್ನು ನೀಡಬಾರದು ಎಂದು ಅವರು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ನೋಡಿದ್ದ ಅವರ ಪರಿಚಯಸ್ಥರು ಅವರ ಮನೆಗೆ ತೆರಳಿದ್ದರು. ಅಷ್ಟೊತ್ತಿಗಾಗಲೇ ಪತ್ನಿ ನೀಲಂ ಮತ್ತು ಇಬ್ಬರು ಮಕ್ಕಳೊಂದಿಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

BJP leader, wife, 2 sons, commit suicide,

Articles You Might Like

Share This Article