ವಲಸಿಗರ ಚಲನವಲನಗಳ ಮೇಲೆ ಬಿಜೆಪಿ ಹದ್ದಿನ ಕಣ್ಣು

Social Share

ಬೆಂಗಳೂರು,ಡಿ.11- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದ ವಲಸಿಗರ ಚಲನವಲನಗಳ ಮೇಲೆ ಬಿಜೆಪಿ ಹದ್ದಿನ ಕಟ್ಟಿದೆ. ಏಕೆಂದರೆ ಈಗಾಗಲೇ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ,
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರನ್ನು ಭೇಟಿಯಾಗಿದ್ದಾರೆ.

ವಿಶ್ವನಾಥ್ ಪಕ್ಷ ಬಿಡುವುದು ಬಹುತೇಕ ಖಚಿತವಾಗಿರುವುದರಿಂದ ಉಳಿದ ಶಾಸಕರು ಮತ್ತು ಸಚಿವರ ಮೇಲೆ ಬಿಜೆಪಿ ಒಂದು ಕಣ್ಣಿಟ್ಟಿದೆ. ಈಗಾಗಲೇ ಪಕ್ಷ ಬಿಡುವುದಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದರೂ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದೆಂಬುದನ್ನು ಚೆನ್ನಾಗಿ ಅರಿತಿರುವ ಬಿಜೆಪಿ ಅವರ ಪ್ರತಿಧಿನಿಸುವ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಸಹ ಕಣಕ್ಕಿಳಿಸಲು ತಯಾರಿ ನಡೆಸಿದೆ.

ಕೊನೆ ಕ್ಷಣದಲ್ಲಿ ಪಕ್ಷ ಬಿಟ್ಟು ಅನ್ಯಪಕ್ಷದತ್ತ ಹೋದರೆ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬುದನ್ನು ಅರಿತಿರುವ ಸಂಘ ಪರಿವಾರದವರು ಯಾವುದಕ್ಕೂ ಇರಲಿ ಎಂದು ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶೋಧ ನಡೆಸಿದೆ.

ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM

ವಲಸಿಗರ ನಾಯಕನಾಗಿದ್ದ ರಮೇಶ್ ಜಾರಕಿಹೊಳಿ ಅಸಮಾಧಾನ ಹಾಗೂ ಬಾಂಬೇ ಟೀಂನಲ್ಲಿ ಹಿರಿಯರಾಗಿದ್ದ ಎಚ್‍ವಿಶ್ವನಾಥ್ ಅವರ ನಡೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದು, ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ರಿವರ್ಸ್ ಆಪರೇಷನ್ ನಡೆಯುತ್ತದೆಯೇ ಎಂಬ ಕುತೂಹಲ ಕೆರಳಿದೆ.

ಈ ನಡುವೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಟೀಂ ಆಂತರಿಕವಾಗಿ ಪಕ್ಷದ ಕೆಲವು ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದೆ. ಸಿ.ಡಿ ಹಗರಣದಿಂದ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ, ಅವರ ಆಪ್ತ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ ಅವರುಗಳ ನಡೆಯೂ ಸಾಕಷ್ಟು ಕುತೂಹಲ ಉಂಟು ಮಾಡಿವೆ.

ಸಚಿವ ಎಂಟಿಬಿ ನಾಗರಾಜ್ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಾನು ಕಾಂಗ್ರೆಸ್ ಸೇರುತ್ತಿಲ್ಲವೆಂದು ಸ್ವತಃ ಅವರೇ ಸ್ಪಷ್ಟ ಪಡಿಸಿದ್ದಾರೆ. ಇನ್ನು ಬಿಜೆಪಿ ಆಂತರಿಕ ವಲಯದಲ್ಲೂ ಮೂಲ ಹಾಗೂ ವಲಸಿಗರ ನಡುವಿನ ಜಟಾಪಟಿ ಶೀತಲ ಸಮರದಂತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲೂ ಇದು ಬಹಿರಂಗವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ.

ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ : ಆಸ್ಪತ್ರೆಗೆ ಸ್ಥಳಾಂತರಿಸಿದ ಪೊಲೀಸರು

ಆಪರೇಷನ್ ಕಮಲಕ್ಕೆ ಪ್ರಮುಖ ಕಾರಣಕರ್ತರಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಸದ್ಯ ರಾಜ್ಯ ಬಿಜೆಪಿಯಲ್ಲಿ ಸಕ್ರಿಯರಾಗಿಲ್ಲ. ಪಕ್ಷದ ಪ್ರಮುಖ ನೀತಿ ನಿರೂಪಣೆಯಲ್ಲಿ ಅವರ ಪಾತ್ರ ಇಲ್ಲ. ಈ ಪರಿಸ್ಥಿತಿ ವಲಸಿಗರಲ್ಲೂ ಆತಂಕ ಸೃಷ್ಟಿಸಿದೆ.

ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯರನ್ನು ಭೇಟಿಯಾಗಿರುವ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಹಾಲಿ ಬಿಜೆಪಿ ಶಾಸಕರುಗಳೇ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾದು ನೋಡಿ ಯಾರ್ಯಾರು ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಹೇಳುವ ಮೂಲಕ ರಿವರ್ಸ್ ಆಪರೇಷನ್ ಸುಳಿವು ನೀಡಿದ್ದಾರೆ.

ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಪತ್ನಿಗೆ ತಳಿಸಿ ತಲೆಬೋಳಿಸಿದ ಸೈಕೋ ಪತಿ

ಆದರೆ ವಲಸಿಗರು ಯಾರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ. ನಾವು ಬಿಜೆಪಿ ಪಕ್ಷದಲ್ಲೇ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಹೀಗಿದ್ದರೂ ಆಂತರಿಕವಾಗಿ ನಡೆಯುತ್ತಿರುವ ಭೇಟಿ ಹಾಗೂ ಚರ್ಚೆಗಳು ರಿವರ್ಸ್ ಆಪರೇಷನ್ ಅನುಮಾನಗಳನ್ನು ದಟ್ಟಗೊಳಿಸಿದೆ.

BJP leaders, join Congress,

Articles You Might Like

Share This Article