ಕಾಂಗ್ರೆಸ್‍ ಖಾಲಿ ಚೊಂಬು ಜಾಹೀರಾತಿಗೆ ರೊಚ್ಚಿಗೆದ್ದ ಬಿಜೆಪಿ ನಾಯಕರಿಂದ ಸುದ್ದಿಗೋಷ್ಠಿ

ಬೆಂಗಳೂರು,ಏ.21-ಮುಸ್ಲಿಂ ಗೂಂಡಾಗಳು ನಡೆಸುವ ದಬ್ಬಾಳಿಕೆ ಮತ್ತು ಹಲ್ಲೆಗೆ ರಕ್ಷಣೆ ನೀಡುವುದೇ ಕಾಂಗ್ರೆಸ್ ಗ್ಯಾರಂಟಿ. ಜನರ ಬದುಕನ್ನು ಕಿತ್ತುಕೊಂಡು ದಿವಾಳಿ ಮಾಡಿರುವುದು ಸರ್ಕಾರದ ಸಾಧನೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಡ ಕಾರಿದ್ದಾರೆ. ಕಾಂಗ್ರೆಸ್‍ನ ಜಾಹೀರಾತಿಗೆ ಪ್ರತ್ಯುತ್ತರ ಎಂಬಂತೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಮಾತಿನುದ್ದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದರು. ದರೋಡೆಕೋರರು, ಭಯೋತ್ಪಾದಕರಿಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಸರ್ವಜನಾಂಗದ ಶಾಂತಿಯ ತೋಟವಾದ ಕರ್ನಾಟಕ ಒಂದೇ ವರ್ಷದಲ್ಲಿ ಮತಾಂಧರ ಯುದ್ಧಭೂಮಿಯಾಗಿ … Continue reading ಕಾಂಗ್ರೆಸ್‍ ಖಾಲಿ ಚೊಂಬು ಜಾಹೀರಾತಿಗೆ ರೊಚ್ಚಿಗೆದ್ದ ಬಿಜೆಪಿ ನಾಯಕರಿಂದ ಸುದ್ದಿಗೋಷ್ಠಿ