Friday, March 29, 2024
Homeರಾಷ್ಟ್ರೀಯಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಹರ್ಷೋದ್ಘಾರ

ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಗಿಲು ಮುಟ್ಟಿದ ಬಿಜೆಪಿ ಹರ್ಷೋದ್ಘಾರ

ನವದೆಹಲಿ,ಡಿ.3- ನಿರೀಕ್ಷೆಯಂತೆ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತಪಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಎರಡು ರಾಜ್ಯಗಳಲ್ಲೂ ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸುತ್ತಿದ್ದು, ಜೈ ಮೋದಿಜೀ ಘೋಷಣೆ ಕೂಗುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿರುವುದರಿಂದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿವಾಸದ ಮುಂದೆ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು ಜಯಘೋಷ ಮೊಳಗಿಸುತ್ತಿದ್ದಾರೆ. ಮಹಿಳೆಯರು ಕುಣಿದು ಕುಪ್ಪಳಿಸಿ ಬಣ್ಣದೋಕುಳಿ ಎರಚಿ ತಮ್ಮ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ನಾಲ್ಕಂತಸ್ತಿನ ಕಟ್ಟಡಕ್ಕೆ ಬೆಂಕಿ, ಇಬ್ಬರ ಸಜೀವ ದಹನ, ಮೂವರ ರಕ್ಷಣೆ

ಅದೇ ರೀತಿ ರಾಜಸ್ಥಾನದಲ್ಲೂ ಆಡಳಿತರೂಢ ಕಾಂಗ್ರೆಸ್ ಹಿನ್ನಡೆಯಲ್ಲಿದ್ದು, ಅಲ್ಲೂ ಕೇಸರಿ ಪಡೆ ಕಮಾಲು ಮಾಡುತ್ತಿರುವುದರಿಂದ ಬಿಜೆಪಿ ಕಾರ್ಯಕರ್ತರು ರಾಜ್ಯದೆಲ್ಲೇಡೆ ಸಂಭ್ರಮಿಸುತ್ತಿದ್ದಾರೆ.ರಸ್ತೆ, ರಸ್ತೆಗಳಲ್ಲಿ ಜಮಾಯಿಸಿರುವ ಬಿಜೆಪಿ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗುತ್ತಿದ್ದಾರೆ.

ಒಟ್ಟಾರೆ, ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಕಮಲ ಅರಳುವುದು ಖಚಿತವಾಗಿದ್ದು, ಛತೀಸ್‍ಗಢದಲ್ಲೂ ಆರಂಭಿಕ ಹಿನ್ನೆಡೆ ನಂತರ ಬಿಜೆಪಿ ಪಕ್ಷ ಚೇತರಿಸಿಕೊಂಡಿರುವುದರಿಂದ ಚುನಾವಣಾ ಫಲಿತಾಂಶ ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡುವುದು ಬಹುತೇಕ ಖಚಿತಪಟ್ಟಿದ್ದು, ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಷೋದ್ಘಾರ ಮುಗಿಲು ಮುಟ್ಟಿದೆ.

RELATED ARTICLES

Latest News