ತಮಿಳುನಾಡು : ಬಿಜೆಪಿ SC-ST ವಿಭಾಗದ ಜಿಲ್ಲಾಧ್ಯಕ್ಷನ ಬರ್ಬರ ಕೊಲೆ
ಚೆನ್ನೈ, ಮೇ 25- ಬಿಜೆಪಿ ಎಸ್ಸಿ- ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷನನ್ನು ಮೂವರು ಅಪರಿಚಿತರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಚಿಂತಾದ್ರಿಪೇಟ್ನಲ್ಲಿ ನಡೆದಿದೆ. ಬಾಲಚಂದ್ರನ್ ಕೊಲೆಯಾಗಿರುವ ಕೇಂದ್ರ ಜಿಲ್ಲಾಧ್ಯಕ್ಷ.
ಬಾಲಚಂದ್ರನ್ ಅವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅವರಿಗೆ ರಾಜ್ಯ ಸರ್ಕಾರದಿಂದ ವೈಯಕ್ತಿಕ ಭದ್ರತಾ ಅಧಿಕಾರಿಯನ್ನು (ಪಿಎಸ್ಒ) ಒದಗಿಸಲಾಗಿತ್ತು. ಬಾಲಚಂದ್ರನ್ ಅವರು ಟೀ ಕುಡಿಯಲು ಹೋಟೆಲ್ಗೆ ಹೋಗಿದ್ದ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೂಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದೇವೆ. ಯಾವುದೇ ರೀತಿಯ ಲೋಪವಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ. ಪೂಲೀಸ್ ಅಧಿಕಾರಿಗಳು ಕೊಲೆ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ ಚೆನ್ನೈ ಪೆÇಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ.
ಘಟನೆ ಕುರಿತು ಪ್ರತಿಪಕ್ಷದ ನಾಯಕ ಎಐಡಿಎಂಕೆಯ ಇಕೆ ಪಳನಿಸ್ವಾಮಿ ರಾಜ್ಯ ಪೂಲೀಸರ ವೈಫಲ್ಯದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 18 ಕೊಲೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಈ ರೀತಿಯ ಘಟನೆಗಳು ರಾಜಧಾನಿಯನ್ನು ಕೊಲೆಗಾರರ ನಗರವನ್ನಾಗಿ ಮಾಡಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರಲಾಗಿದೆ ಮತ್ತು ಜನರ ಸುರಕ್ಷತೆಯ ಬಗ್ಗೆ ಪ್ರಶ್ನಿಸಿದ್ದಾರೆ.
ಚೆನ್ನೈ ತಮಿಳುನಾಡಿನ ರಾಜಧಾನಿಯೋ ಅಥವಾ ಕೊಲೆಯ ರಾಜಧಾನಿಯೋ ಗೊತ್ತಿಲ್ಲ. ಡಿಎಂಕೆ ಆಡಳಿತದ ಮಾದರಿ ಇದೇನಾ? ನಾವು ದೂರು ದಾಖಲಿಸಿದ್ದೇವೆ. ಆರೋಪಿಗಳನ್ನು 48 ಗಂಟೆಯೊಳಗೆ ಬಂಸಲಾಗುವುದೆಂದು ಪೂಲೀಸರು ತಿಳಿಸಿದ್ದಾರೆ. ಮಾತಿನಂತೆ ನಡೆದುಕೊಳ್ಳದಿದ್ದರೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಚೆನ್ನೈನ ಬಿಜೆಪಿ ಉಪಾಧ್ಯಕ್ಷ ಕರು ನಾಗರಾಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.