ಬಿಜೆಪಿಯಲ್ಲಿ ಸೋಮಣ್ಣಗೆ ಮಹತ್ವದ ಜವಾಬ್ದಾರಿ

Social Share

ಬೆಂಗಳೂರು,ಜ.4- ಮುನಿಸಿಕೊಂಡಿದ್ದ ಸಚಿವ ವಿ.ಸೋಮಣ್ಣ ಅವರಿಗೆ ಬಿಜೆಪಿ ಬರಲಿರುವ ಚುನಾವಣೆಗೆ ಮಹತ್ವದ ಜವಾಬ್ದಾರಿಯನ್ನು ನೀಡಲು ಮುಂದಾಗಿದೆ. ರಾಜ್ಯದಲ್ಲಿ ಪ್ರಬಲವಾಗಿರುವ ವೀರಶೈವ ಲಿಂಗಾಯಿತ ಸಮುದಾಯದ ಮತಗಳನ್ನು ಇನ್ನಷ್ಟು ಸೆಳೆಯಲು ಬಿಜೆಪಿ ರಣತಂತ್ರ ರೂಪಿಸಿದ್ದು, ಸೋಮಣ್ಣ ಅವರನ್ನು ಮೈಸೂರು ಭಾಗದಲ್ಲಿ ಮುನ್ನಲೆಗೆ ತರುವ ಲೆಕ್ಕಾಚಾರದಲ್ಲಿದೆ.

ಜೆಡಿಎಸ್‍ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದ ತುಮಕೂರು, ಚಾಮರಾಜನಗರ ಮತ್ತು ಮೈಸೂರಿನಲ್ಲಿ ವೀರಶೈವ ಲಿಂಗಾಯಿತ ಮತಗಳು ಸಾಕಷ್ಟು ಇರುವುದರಿಂದ ಅದೇ ಸಮುದಾಯದ ಸೋಮಣ್ಣ ಅವರಿಗೆ ಹೆಚ್ಚಿನ ಹೊಣೆಗಾರಿಕೆ ನೀಡಬೇಕೆಂಬ ಚಿಂತನೆ ಬಿಜೆಪಿಯಲ್ಲಿದೆ.

ಹೀಗಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕಳೆದ ವಾರ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯನಗರದಲ್ಲಿರುವ ಸೋಮಣ್ಣ ಅವರ ಮನೆಗೆ ಭೇಟಿ ಕೊಟ್ಟು ಅವರ ಜೊತೆ 15 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದರು.

ಬೆಂಗಳೂರಲ್ಲಿ ಕ್ರೈಂ ರೇಟ್ ಹೇಗಿದೆ..? ಕಮಿಷನರ್ ಪ್ರತಾಪ್ ರೆಡ್ಡಿ ಹೇಳೋದೇನು..?

ಸಾಮಾನ್ಯವಾಗಿ ಅಮಿತ್ ಷಾ ಅವರು ಅಷ್ಟು ಸುಲಭವಾಗಿ ಯಾರ ಜೊತೆಯೂ ಪಕ್ಷದ ತಂತ್ರಗಾರಿಕೆ ಕುರಿತು ಮಾತುಕತೆ ನಡೆಸುವವರಲ್ಲ. ಏನೇ ಇದ್ದರೂ ಪಕ್ಷದ ಕಚೇರಿ ಹಾಗೂ ಪ್ರಮುಖರ ಜೊತೆ ಮಾತ್ರ ಚರ್ಚೆ ನಡೆಸುತ್ತಾರೆ.

ಬಿಜೆಪಿಯೊಳಗೆ ಅತ್ಯಂತ ಪ್ರಬಲ ನಾಯಕರೆಂದೇ ಹೇಳಲಾಗುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ವೀರಶೈವ ಲಿಂಗಾಯಿತ ನಾಯಕರನ್ನು ಹೊರತುಪಡಿಸಿ ಸೋಮಣ್ಣನವರ ಜೊತೆ ಮಾತುಕತೆ ನಡೆಸಿರುವುದು ಪಕ್ಷದೊಳಗೂ ಹುಬ್ಬೇರಿಸುವಂತೆ ಮಾಡಿದೆ.

ಇತ್ತೀಚಿನ ಕೆಲವು ಬೆಳವಣಿಗೆಯಿಂದಾಗಿ ಸೋಮಣ್ಣ ಅವರು ಪಕ್ಷದ ಚಟುವಟಿಕೆಗಳಿಂದ ವಿಮುಖರಾಗಿದ್ದರು. ಅಲ್ಲದೆ ತಮ್ಮ ಪುತ್ರ ಅರುಣ್ ಸೋಮಣ್ಣಗೆ ಬರುವ ಚುನಾವಣೆಯಲ್ಲಿ ಗೋವಿಂದರಾಜನಗರದಿಂದ ಹಾಗೂ ತಮಗೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದರು.

ಆದರೆ ಇದಕ್ಕೆ ಪಕ್ಷದೊಳಗಿನ ಒಂದು ಗುಂಪು ಸಕಾರಾತ್ಮಕವಾಗಿ ಸ್ಪಂದಿಸದೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಸಾಗಾ ಹಾಕಿದ್ದರು. ಇದು ಸಹಜವಾಗಿ ಸೋಮಣ್ಣ ಅವರಿಗೆ ಬೇಸರ ಉಂಟು ಮಾಡಿತ್ತು.

ಇದೀಗ ಖುದ್ದು ಅಮಿತ್ ಷಾ ಅವರೇ ಸೋಮಣ್ಣ ಅವರ ಜೊತೆ ಮಾತುಕತೆ ನಡೆಸಿರುವುದು ನಾನಾ ರಾಜಕೀಯ ವ್ಯಾಖ್ಯಾನಗಳನ್ನು ಹುಟ್ಟು ಹಾಕಿದೆ. ಬರಲಿರುವ ದಿನಗಳಲ್ಲಿ ಅವರಿಗೆ ಮಹತ್ವದ ಜವಾಬ್ದಾರಿ ಸಿಗಲಿದೆ ಎನ್ನಲಾಗುತ್ತಿದೆ.

ಸುಳ್ಳು ಆರೋಪದ ಸೆರವಾಸಕ್ಕೆ 10 ಸಾವಿರ ಕೋಟಿ ಪರಿಹಾರ ಕೇಳಿದ ನಿರ್ದೋಷಿ

ಸಂಘಟನೆಯಲ್ಲೂ ಚತುರರಾಗಿರುವ ಅವರಿಗೆ ತಮ್ಮ ಸಮುದಾಯದ ಜೊತೆಗೆ ಅನ್ಯ ಸಮುದಾಯದವರ ಮತಗಳನ್ನು ಸೆಳೆಯುವುದು ಕರಗತವಾಗಿದೆ. ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಾರೆ.

ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿಯಾಗಿದ್ದ ಸೋಮಣ್ಣ , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪರಾಭವಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದೀಗ ಮೈಸೂರು, ಚಾಮರಾಜನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸುಮಾರು 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿವೆ. ಹೀಗಾಗಿ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಸಿಗಲಿದೆ ಎಂಬ ಮಾತು ಕೇಳಿಬಂದಿದೆ.

Articles You Might Like

Share This Article