ಬಿಜೆಪಿ ಆಡಳಿತದ ರಾಜ್ಯಗಳಲ್ಲೂ ಜಾಹಿರಾತು ಶುಲ್ಕ ವಸೂಲಿ ಮಾಡಲಾಗುವುದೇ ?: ಸಿಸೋಡಿಯಾ

Social Share

ನವದೆಹಲಿ,ಜ.12- ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿಯೂ ಜಾಹಿರಾತಿನ ಶುಲ್ಕವನ್ನು ಪಕ್ಷ ಅಥವಾ ಅಲ್ಲಿನ ಮುಖ್ಯಮಂತ್ರಿಗಳಿಂದ ವಸೂಲಿ ಮಾಡಲಾಗುತ್ತದೆಯೇ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಪ್ರಶ್ನಿಸಿದ್ದಾರೆ.

ಅಮ್‍ಆದ್ಮಿ ಸರ್ಕಾರ ಪ್ರಕಟಿಸಿರುವ ಜಾಹಿರಾತಿನಲ್ಲಿ ರಾಜಕೀಯ ಅಂಶಗಳಿವೆ ಎಂಬ ಕಾರಣಕ್ಕೆ ಸರ್ಕಾರದ ಬೊಕ್ಕಸದಿಂದ ಖರ್ಚು ಮಾಡಲಾದ 163.62 ಕೋಟಿ ರೂಪಾಯಿ ಮರುಪಾವತಿಸುವಂತೆ ನೀಡಿರುವ ನೋಟಿಸ್‍ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು, ದೆಹಲಿಯ ಪತ್ರಿಕೆಗಳಲ್ಲಿ ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳ ಜಾಹೀರಾತುಗಳು ಪ್ರಕಟವಾಗಿವೆ. ಅಲ್ಲಿನ ಸರ್ಕಾರದಿಂದಲೂ ಜಾಹಿರಾತು ಹಣವನ್ನು ವಸೂಲಿ ಮಾಡಲಾಗುವುದೆ ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರ ದ್ವೇಷ ಪೂರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಆಡಳಿತ ಯಂತ್ರ ಮತ್ತು ಅಧಿಕಾರವನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು ಒಟ್ಟಾದರೆ ಜಾಗತಿಕ ಅಭಿವೃದ್ಧಿಯ ಚಾಲಕರಾಗಲು ಸಾಧ್ಯ: ಪ್ರಧಾನಿ ಮೋದಿ

ದೆಹಲಿ ಸರ್ಕಾರಕ್ಕೆ ಕೆಲಸ ಮಾಡಲು ಬಿಡುತ್ತಿಲ್ಲ. ಮುಖ್ಯಮಂತ್ರಿ ಸೇರಿದಂತೆ ಸಚಿವರ ವಿರುದ್ಧ ಪ್ರತಿದಿನ ವಿವಾದಗಳನ್ನು ಸೃಷ್ಟಿಸುವ ಮೂಲಕ ಕಿರುಕೂಳ ನೀಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

ನೋಟಿಸ್‍ಗೆ ಪ್ರತಿಯಾಗಿ ಡಿಐಪಿ ಕಾರ್ಯದರ್ಶಿಯಿಂದ ಜಾಹೀರಾತುಗಳ ಪಟ್ಟಿಯನ್ನು ಕೇಳಲಾಗಿದೆ. ಅವರು ಪಟ್ಟಿ ನೀಡಿದ ಬಳಿಕ ಆ ಜಾಹಿರಾತುಗಳಲ್ಲಿ ತಪ್ಪು ಏನಿದೆ ಎಂದು ಪರಿಶೀಲಿಸಲಾಗುವುದು ಎಂದರು.

ದೆಹಲಿಯ ಪತ್ರಿಕೆಗಳಲ್ಲಿ, ಹಲವಾರು ಭಾಗಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಅವುಗಳ ವೆಚ್ಚವನ್ನು ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳಿಂದ ವಸೂಲಿ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಈ ರೀತಿಯ ಅಧಿಕಾರ ದುರುಪಯೋಗಕ್ಕಾಗಿಯೇ ಬಿಜೆಪಿ ದೆಹಲಿ ಅಧಿಕಾರಿಗಳ ಮೇಲೆ ಅಸಂವಿಧಾನಿಕ ನಿಯಂತ್ರಣ ಹೊಂದಲು ಬಯಸುತ್ತದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇರುವ ಜಾಹಿರಾತುಗಳನ್ನು ಹೊರ ರಾಜ್ಯಗಳಲ್ಲಿ ಪ್ರಕಟಿಸಲಾಗಿದೆ. ಆ ವೆಚ್ಚವನ್ನು ವಸೂಲಿ ಮಾಡುವಂತೆ ದೆಹಲಿ
ಸರ್ಕಾರದ ವಾರ್ತಾ ಮತ್ತು ಪ್ರಚಾರ ನಿರ್ದೇಶನಾಲಯ ಕಾರ್ಯದರ್ಶಿ ಆಲಿಸ್ ವಾಜ್ (ಐಎಎಸ್) ಅವರನ್ನು ಬಿಜೆಪಿ ಒತ್ತಾಯಿಸಿದೆ.

ಮನೀಶ್‍ಪಾಂಡೆ ಭರ್ಜರಿ ಶತಕ, ಕರ್ನಾಟಕ 445ಕ್ಕೆ ಸರ್ವಪತನ..

ಇದರ ಆಧಾರದ ಮೇಲೆ ಲೆಫ್ಟಿನೆಂಟ್ ಗೌರ್ನರ್ ಜಾಹಿರಾತಿಗೆ ಬಳಕೆ ಮಾಡಲಾದ ಹಣವನ್ನು ಪಕ್ಷದಿಂದ ವಸೂಲಿ ಮಾಡುವಂತೆ ಆದೇಶಿದ್ದರು. ಎಎಪಿಯಿಂದ 97 ಕೋಟಿ ರೂಪಾಯಿಗಳನ್ನು ವಸೂಲಿ ಮಾಡುವಂತೆ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ ಸುಮಾರು ಒಂದು ತಿಂಗಳ ನಂತರ ವಸೂಲಾತಿ ಪ್ರಕ್ರಿಯೆ ಆರಂಭಗೊಂಡಿದೆ.

ಎಎಪಿ ಜಾಹಿರಾತು ಹಣವನ್ನು ಪಾವತಿಸಲು ವಿಫಲರಾದರೆ, ಪಕ್ಷದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಎಲ್ಲಾ ಕಾನೂನು ಕ್ರಮಗಳನ್ನು ಸಮಯೋಚಿತವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲವೊಂದು ತಿಳಿಸಿವೆ.

BJP, misusing, Delhi, officers, Manish Sisodia,

Articles You Might Like

Share This Article