ಹರ್ಷ ಕುಟುಂಬಕ್ಕೆ ಒಂದು ತಿಂಗಳ ವೇತನವನ್ನು ಪರಿಹಾರವಾಗಿ ನೀಡಿದ ಶಾಸಕ ಭರತ್ ಶೆಟ್ಟಿ

Social Share

ಬೆಂಗಳೂರು,ಫೆ.22-ಶಿವಮೊಗ್ಗದಲ್ಲಿ ಹತ್ಯೆಗೀಡಾದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಕುಟುಂಬಕ್ಕೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರು ಒಂದು ತಿಂಗಳ ವೇತನವನ್ನು ನೀಡುವುದಾಗಿ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮೃತ ಹರ್ಷವು ಭಜರಂಗದಳದ ಕಾರ್ಯಕರ್ತರಾಗಿದ್ದರು. ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ. ನಾವೆಲ್ಲರೂ ಹರ್ಷ ಅವರ ಮನೆಯವರೊಂದಿಗೆ ನಿಲ್ಲೋಣ. ಅವರ ಕುಟುಂಬಕ್ಕೆ ಆಸರೆಯಾಗೋಣ ಎಂದು ಹೇಳೀದ್ದಾರೆ.
ನಾನು ಒಳ್ಳೆಯ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬದವರೊಂದಿಗೆ ನಿಲ್ಲಬೇಕು. ನಾನು ಒಂದು ತಿಂಗಳ ವೇತನ ಮತ್ತು ಭತ್ಯೆಯನ್ನು ಆತನ ಕುಟುಂಬಕ್ಕೆ ನೀಡುತ್ತೇನೆ ಎಂದಿದ್ದಾರೆ.
ಶಾಸಕರಾದ ಅರವಿಂದ ಲಿಂಬಾವಳಿ ಅವರು ಒಂದು ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ಶಾಸಕ ರೇಣುಕಾಚಾರ್ಯ ಅವರು ಎರಡು ಲಕ್ಷ ಪರಿಹಾರ ಘೋಷಿಸಿದ್ದು, ಸದ್ಯ ಅವರ ಮನೆಗೆ ತೆರಳಿ ನೀಡುವುದಾಗಿ ಹೇಳಿದ್ದಾರೆ. ಈಗ ಭರತ್ ಶೆಟ್ಟಿ ಅವರು ತಮ್ಮ ಒಂದು ತಿಂಗಳ ವೇತನ ಮತ್ತು ಭತ್ಯೆಯನ್ನು ನೀಡುವುದಾಗಿ ತಿಳಿಸಿದ್ದಾರೆ.

Articles You Might Like

Share This Article