ಅನಾರೋಗ್ಯದ ನಡುವೆಯೂ ಮತ ಚಲಾಯಿಸಿದ ಬಿಜೆಪಿ ಶಾಸಕ ಹರತಾಳು ಹಾಲಪ್ಪ

Spread the love

ಬೆಂಗಳೂರು,ಜೂ.10- ಆಸ್ಪತ್ರೆಗೆ ದಾಖಲಾಗಿದ್ದ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಅನಾರೋಗ್ಯದ ನಡುವೆಯೂ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವೈದ್ಯರ ಅನುಮತಿ ಪಡೆದು ಕೈಗೆ ಹಾಕಿದ್ದ ಡ್ರಿಪ್‍ನ ಜೊತೆಗೆ ವಿಧಾನಸೌಧಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಒಂದೊಂದು ಮತವು ನಿರ್ಣಾಕವಾಗಿರುವುದರಿಂದ ಮತ ಚಲಾಯಿಸಲೇಬೇಕಾಗುತ್ತದೆ ಎಂದು ಪಕ್ಷ ಸೂಚನೆ ಕೊಟ್ಟಿತ್ತು.  ಇದರಿಂದ ಹಾಲಪ್ಪ ವೈದ್ಯರಿಂದ ಸಲಹೆ ಪಡೆದು ಬೆಳಗ್ಗೆ 9.30ಕ್ಕೆ ವಿಧಾನಸೌಧಕ್ಕೆ ಆಗಮಿಸಿ ಮತದಾನ ಮಾಡಿದ ಬಳಿಕ ಪುನಃ ಆಸ್ಪತ್ರೆಗೆ ತೆರಳಿದರು.

Facebook Comments